ETV Bharat / sports

ಒಲಿಂಪಿಕ್ಸ್​ ಗಾಲ್ಫ್​​ನಲ್ಲಿ ಸ್ವಲ್ಪದರಲ್ಲೇ ಪದಕ ಗೆಲ್ಲುವ ಅವಕಾಶ ಕಳೆದುಕೊಂಡ ಅದಿತಿ...4ನೇ ಸ್ಥಾನಕ್ಕೆ ತೃಪ್ತಿಪಟ್ಟ ಕನ್ನಡತಿ

ಟೋಕಿಯೋ ಒಲಿಂಪಿಕ್ಸ್ ಮಹಿಳಾ ಗಾಲ್ಫ್​​ನಲ್ಲಿ ಪದಕದ ಭರವಸೆ ಮೂಡಿಸಿದ ಕನ್ನಡತಿ ಅದಿತಿ ಅಶೋಕ್​​ಗೆ ಅಂತಿಮ ಸುತ್ತಿನಲ್ಲಿ ಹಿನ್ನಡೆಯಾಗಿದೆ.

Play Stopped Due To Inclement Weather, Golfer Aditi Ashok Tied 3rd
ಮಹಿಳಾ ಗಾಲ್ಫ್ ಪಂದ್ಯ ರದ್ದು​
author img

By

Published : Aug 7, 2021, 9:47 AM IST

Updated : Aug 7, 2021, 12:06 PM IST

ಟೋಕಿಯೋ : ಒಲಿಂಪಿಕ್ಸ್ ಮಹಿಳಾ ಗಾಲ್ಫ್​ ಸ್ಪರ್ಧೆಯಲ್ಲಿ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದ ಕರ್ನಾಟಕದ ಆಟಗಾರ್ತಿ ಅದಿತಿ ಅಶೋಕ್ ಕೊನೆಯ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಅಂತಿಮ ಸುತ್ತಿನಲ್ಲಿ ಕೂದಳೆಲೆ ಅಂತರದಲ್ಲಿ ಅದಿತಿಗೆ ಪದಕ ಕೈ ತಪ್ಪಿದೆ.

ಮೂರನೇ ಸುತ್ತಿನ ಅಂತ್ಯಕ್ಕೆ 2ನೇ ಸ್ಥಾನದಲ್ಲಿದ್ದ ಅದಿತಿ, ನಾಲ್ಕನೇ ಸುತ್ತಿನ ಆರಂಭದಲ್ಲಿ ಜಂಟಿ ಅಗ್ರಸ್ಥಾನಕ್ಕೇರುವ ಮೂಲಕ ಪದಕ ಗೆಲ್ಲುವ ಭರವಸೆಯನ್ನು ಮೂಡಿಸಿದ್ದರು. ಆದರೆ, ಪಂದ್ಯದ ಕೊನೆಯಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಳ್ಳಬೇಕಾಯಿತು.

ಅಮೆರಿಕದ ಆಟಗಾರ್ತಿ ನೆಲ್ಲೇ ಕೊರಡಾ ಮಹಿಳೆಯರ ಗಾಲ್ಫ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆಯುವಲ್ಲಿ ಯಶಸ್ವಿಯಾದರು. ಅದಿತಿ ನಾಲ್ಕನೇ ಸ್ಥಾನ ಪಡೆದುಕೊಂಡರೂ, ಅವರ ಪ್ರಯತ್ನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ.

Last Updated : Aug 7, 2021, 12:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.