ಟೋಕಿಯೋ: ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತ ಹೊಸದೊಂದು ದಾಖಲೆ ನಿರ್ಮಿಸಿದ್ದು, ಅತಿ ಹೆಚ್ಚು ಪದಕ ಗೆದ್ದಿರುವ ಸಾಧನೆ ಮಾಡಿದೆ. ಈ ಮೂಲಕ ಲಂಡನ್ ಒಲಿಂಪಿಕ್ಸ್ ವೇಳೆ ನಿರ್ಮಾಣಗೊಂಡಿದ್ದ ದಾಖಲೆ ಇದೀಗ ಬ್ರೇಕ್ ಆಗಿದೆ. ಇದರ ಜೊತೆಗೆ ಪಾಯಿಂಟ್ ಪಟ್ಟಿಯಲ್ಲಿ 47ನೇ ಸ್ಥಾನದಲ್ಲಿದೆ.
ಭಾರತಕ್ಕೆ ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕ ಬಂದಿದ್ದು, ಒಲಿಂಪಿಕ್ಸ್ ಇತಿಹಾಸದಲ್ಲೇ ಇದು ಹೊಸ ದಾಖಲೆಯಾಗಿದೆ. ಭಾರತಕ್ಕೆ ಇಂದು ಕುಸ್ತಿ ಹಾಗೂ ಜಾವಲಿನ್ ಥ್ರೋದಲ್ಲಿ ಎರಡು ಪದಕ ಬಂದಿದ್ದು, ಈ ಮೂಲಕ ಒಟ್ಟು ಏಳು ಪದಕ ಗೆಲ್ಲುವಲ್ಲಿ ಭಾರತ ಯಶಸ್ವಿಯಾಗಿದೆ. ಈ ಹಿಂದಿನ ಯಾವುದೇ ಒಲಿಂಪಿಕ್ಸ್ನಲ್ಲಿ ಭಾರತದ ಕ್ರೀಡಾಪಟುಗಳು ಇಷ್ಟೊಂದು ಪದಕ ಗೆದ್ದಿರಲಿಲ್ಲ.
ವೇಟ್ ಲಿಫ್ಟಿಂಗ್ನಲ್ಲಿ ಮೀರಾಬಾಯಿ ಚನು ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತ ಪದಕದ ಖಾತೆ ತೆರೆದಿದ್ದರು. ಇದಾದ ಬಳಿಕ ಬಾಕ್ಸಿಂಗ್ನಲ್ಲಿ 23 ವರ್ಷದ ಲವ್ಲಿನಾ ಕಂಚಿನ ಪದಕ, ಬ್ಯಾಡ್ಮಿಂಟನ್ನಲ್ಲಿ ಪಿ.ವಿ. ಸಿಂಧು ಕಂಚು ಗೆದ್ದಿದ್ದಾರೆ.
ಇದನ್ನೂ ಓದಿರಿ: ಟೋಕಿಯೋದಲ್ಲಿ ಇತಿಹಾಸ ಬರೆದ ಚೋಪ್ರಾ.. ಅಥ್ಲೆಟಿಕ್ಸ್ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಮುಕುಟ
ಕುಸ್ತಿಯಲ್ಲಿ ಎರಡು ಪದಕ ಗೆದ್ದ ಭಾರತ
ರವಿ ಕುಮಾರ್ ದಹಿಯಾ ಬೆಳ್ಳಿ
ಬಜರಂಗ್ ಪೂನಿಯಾ ಕಂಚು
ಹಾಕಿಯಲ್ಲಿ ಕಂಚು ಗೆದ್ದ ಭಾರತದ ಪುರುಷರ ತಂಡ
ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಪುರುಷರ ಹಾಕಿ ತಂಡ ಕಂಚಿನ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ನಿರ್ಮಿಸಿದೆ. 41 ವರ್ಷಗಳ ಬಳಿಕ ಈ ದಾಖಲೆ ಬರೆದಿದೆ.
ಚಿನ್ನ ಗೆದ್ದ ಜಾವಲಿನ್ ಥ್ರೋ
ಅಥ್ಲೀಟ್ಸ್ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆಲ್ಲುವ ಮೂಲಕ ನೀರಜ್ ಚೋಪ್ರಾ ಹೊಸ ದಾಖಲೆ ಬರೆದಿದ್ದಾರೆ. ಸ್ವತಂತ್ರ ಭಾರತಕ್ಕೆ ಬಂದಿರುವ ಮೊದಲ ಪದಕ ಇದಾಗಿದೆ. ಇನ್ನು 2012 ಒಲಿಂಪಿಕ್ಸ್ನಲ್ಲಿ ಭಾರತ 6 ಪದಕ ಗೆಲ್ಲುವ ಮೂಲಕ ಇತಿಹಾಸ ಬರೆದಿತ್ತು. ಅದನ್ನೀಗ 2020 ರ ಒಲಿಂಪಿಕ್ಸ್ನಲ್ಲಿ ಸುಧಾರಣೆ ಮಾಡಿಕೊಂಡಿದೆ.