ETV Bharat / sports

ಈ ಚಾನ್ಸ್​ ಮಿಸ್​​​​ ಮಾಡಿಕೊಳ್ಳದಿರಿ....!   ನಿಮ್ಮ ಹೆಸರು ನೀರಜ್​ ಆಗಿದ್ರೆ, ಇಲ್ಲಿ ಸಿಗುತ್ತೆ ‘ಚೋಲೆ-ಭಟುರೆ’!! - ಸೀತಾರಾಮ್ ದೇವನ್​ಚಂದ್

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜಾವಲಿನ್ ಎಸೆತದಲ್ಲಿ ಗೆದ್ದು ಚಿನ್ನದ ಪದಕ ಗೆದ್ದ ನೀರಜ್​ ಚೋಪ್ರಾಗೆ ಅಭಿಮಾನಿಯೊಬ್ಬರು ವಿಶೇಷವಾಗಿ ಅಭಿನಂದನೆ ಸಲ್ಲಿಸಿದ್ದಾರೆ.

ಚೋಲೆ-ಭಟುರೆ
ಚೋಲೆ-ಭಟುರೆ
author img

By

Published : Aug 13, 2021, 3:21 PM IST

Updated : Aug 13, 2021, 3:57 PM IST

ನವದೆಹಲಿ: ಒಲಿಂಪಿಕ್ಸ್​​ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾಗೆ ದೇಶ - ವಿದೇಶಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ನೀರಜ್​ ಗೆಲುವನ್ನು ಇಡೀ ದೇಶವೇ ಸಂಭ್ರಮಿಸುತ್ತಿರುವ ಈ ಹೊತ್ತಲ್ಲಿ, ದೆಹಲಿಯ ಪಹರ್ಗಂಜ್​ನಲ್ಲಿರುವ ಅಂಗಡಿಯೊಂದರ ಮಾಲೀಕರು ವಿಭಿನ್ನ ಕೆಲಸಕ್ಕೆ ಕೈ ಹಾಕಿದ್ದಾರೆ.

ಸೀತಾರಾಮ್ ದೇವನ್​ಚಂದ್ ಎಂಬ ಅಂಗಡಿ ಮಾಲೀಕರು ಇಂದು ನೀರಜ್ ಎಂದು ಹೆಸರಿರುವ ಎಲ್ಲರಿಗೂ ಉಚಿತವಾಗಿ ಸ್ನ್ಯಾಕ್ಸ್​​ ಹಂಚಲು ಮುಂದಾಗಿದ್ದಾರೆ. ತಮ್ಮ (ನೀರಜ್) ಹೆಸರಿನ ಐಡಿ ತೋರಿಸಿದರೆ ಹಣ ತೆಗೆದುಕೊಳ್ಳುವುದಿಲ್ಲ ಎಂದು ಮಾಲೀಕರು ಹೇಳಿದ್ದಾರೆ.

ಅಂಗಡಿಗೆ ಬರುವ ಜನರು ತಮ್ಮೊಂದಿಗೆ ಹೆಸರಿರುವ (ನೀರಜ್) ಗುರುತಿನ ಚೀಟಿ ಹೊಂದಿದ್ದರೆ, ಅವರಿಗೆ ಚೋಲೆ-ಭಟುರೆ ಉಚಿತವಾಗಿ ನೀಡಲಾಗುತ್ತದೆ. ನೀರಜ್​ ಚೋಪ್ರಾ ಚಿನ್ನದ ಪದಕ ಗೆದ್ದ ಖುಷಿಯಲ್ಲಿ ನಾವು ಈ ಕಾರ್ಯವನ್ನ ಹಮ್ಮಿಕೊಂಡಿದ್ದೇವೆಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಆ.24ರಿಂದ ಪ್ಯಾರಾಲಿಂಪಿಕ್ಸ್​: 54 ಸದಸ್ಯರ ಭಾರತ ತಂಡಕ್ಕೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಇತ್ತೀಚೆಗಷ್ಟೇ ನಡೆದ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜಾವಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಮೊದಲ ಸ್ಥಾನ ಗೆದ್ದು, ದೇಶಕ್ಕೆ ಚಿನ್ನದ ಪದಕ ತಂದು ಕೊಟ್ಟಿದ್ದರು.

Last Updated : Aug 13, 2021, 3:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.