ETV Bharat / sports

ಪ್ಯಾರಾ ಅಥ್ಲೀಟ್​ಗಳು ನಿಜ ಜೀವನದ ಹೀರೋಗಳು : ಚಿನ್ನ ಗೆದ್ದ ಅವನಿ ತಂದೆ ಮನದಾಳ - ಅವನಿ ಲೇಖಾರಾ ತಂದೆ ಪ್ರವೀಣ್ ಕುಮಾರ್​

ಒಲಿಂಪಿಕ್ಸ್​ ಕ್ರೀಡಾಪಟುಗಳು ಪದಕ ಗೆಲ್ಲುತ್ತಿದ್ದಂತೆ ಹೀರೋಗಳಾಗುತ್ತಿದ್ದಾರೆ. ಆದರೆ, ಪ್ಯಾರಾಲಿಂಪಿಕ್ಸ್​ ಆಟಗಾರರು ನಿಜ ಜೀವನದ ಹೀರೋಗಳು. ಈ ಮಟ್ಟಕ್ಕೆ ಅರ್ಹತೆ ಪಡೆಯುತ್ತಾರೆಂದರೆ ಅವನು ಅಥವಾ ಅವಳಿಗೆ ಇದೊಂದು ದೊಡ್ಡ ಸಾಧನೆ ಎಂದು ಅವನಿ ಲೇಖಾರಾ ತಂದೆ ಈಟಿವಿ ಭಾರತಕ್ಕೆ ನೀಡಿದ ಎಕ್​ಕ್ಲ್ಯೂಸಿವ್ ಸಂದರ್ಶನದಲ್ಲಿ ಹೇಳಿದ್ದಾರೆ..

Avani won gold in Tokyo
ಪ್ಯಾರಾಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದ ಅವನಿ
author img

By

Published : Aug 30, 2021, 4:41 PM IST

ಶ್ರೀಗಂಗಾನಗರ(ರಾಜಸ್ಥಾನ್): ಭಾರತದ ಪ್ಯಾರಾ ಶೂಟರ್​ ಅವನಿ ಲೇಖಾರಾ ಸೋಮವಾರ ನಡೆದ ಟೋಕಿಯೊ ಪ್ಯಾರಾಲಿಂಪಿಕ್ಸ್​ನ 10 ಮೀಟರ್​ ಏರ್‌ ರೈಫಲ್​ನಲ್ಲಿ ವಿಶ್ವ ದಾಖಲೆಯೊಂದಿಗೆ ಚಿನ್ನ ಗೆದ್ದು ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಇದು ಪ್ಯಾರಾಲಿಂಪಿಕ್ಸ್​ನಲ್ಲಿ ಮಹಿಳಾ ಕ್ರೀಡಾಪಟು ಗೆದ್ದ ಮೊದಲ ಚಿನ್ನದ ಪದಕವಾಗಿದೆ.

ಅವನಿ 10 ಮೀಟರ್​ ಏರ್​ ರೈಫಲ್​ ಎಸ್​ಹೆಚ್​1 ವಿಭಾಗದಲ್ಲಿ 249.6 ಅಂಕ ಗಳಿಸಿ ಸ್ವರ್ಣ ಗೆದ್ದರು. 19 ವರ್ಷದ ಶೂಟರ್​ ಚಿನ್ನದ ಜೊತೆಗೆ ಪ್ಯಾರಾಲಿಂಪಿಕ್ಸ್​ನಲ್ಲಿ ವಿಶ್ವದಾಖಲೆ ಸರಿಗಟ್ಟಿದರು.

ಅವನಿ ತಂದೆ ಪ್ರವೀಣ್ ಲೇಖಾರಾ ಸಂದರ್ಶನ

ಕೇವಲ 11 ವರ್ಷದವಳಿದ್ದಾಗ ಸಂಭವಿಸಿದ ಕಾರು ಅಪಘಾತ ಅವನಿಯ ಜೀವನವನ್ನು ನಿಶ್ಚಲಗೊಳಿಸಿತು. ಆದರೆ, ಈ ದುರಂತ ಅವರ ಜೀವನದಲ್ಲಿ ಏನೂ ಮಾಡಲಾಗದ ಸ್ಥಿತಿಗೆ ದೂಡಿತ್ತು. ಆದರೆ, ಅವರು ಕುಟುಂಬದವರ ಬೆಂಬಲದಿಂದಾಗಿ ಅವನಿ ಅವರನ್ನು ಇಂದು ವಿಶ್ವಮಟ್ಟದಲ್ಲೇ ಮಿಂಚುವಂತೆ ಮಾಡಿದೆ.

2012ರಲ್ಲಿ ನಡೆದಿದ್ದ ಅಪಘಾತದಿಂದ ಲೇಖಾರಾ ಕೆಲವು ಬೆನ್ನು ಹುರಿ (ಸ್ಪೈನಲ್​ ಕಾರ್ಡ್​ ಇಂಜುರಿ)ಗಾಯಗಳಾಗಿ ಸೊಂಟದ ಕೆಳಗಿನ ಭಾಗ ಸಂಪೂರ್ಣ ಸ್ವಾಧೀನ ಕಳೆದುಕೊಂಡಿದೆ. ಆದರೆ, ಜೀವನದಲ್ಲಿ ಸಾಧನೆ ಮಾಡುವ ಹಂಬಲದಿಂದ ಮತ್ತು ತನ್ನ ತಂದೆಯ ಒತ್ತಾಯದಿಂದ ಶೂಟಿಂಗ್ ಕೋರ್ಸ್​ ತೆಗೆದುಕೊಂಡಿದ್ದ ಜೈಪುರದ ಯುವತಿ ಇಂದು ಭಾರತದ ಮನೆ ಮಾತಾಗಿದ್ದಾರೆ.

ತಮ್ಮ ಮಗಳ ಸಾಧನೆಯ ಕುರಿತು ಈಟಿವಿ ಭಾರತದ ಜೊತೆಗೆ ಮಾತನಾಡಿದ ಅವರ ತಂದೆ ಪ್ರವೀಣ್​ ಕುಮಾರ್​, ಪ್ಯಾರಾಲಿಂಪಿಕ್ಸ್​ ಅಥ್ಲೀಟ್​ಗಳು ನಿಜ ಜೀವನದ ಹೀರೊಗಳು ಎಂದು ತಮ್ಮ ಮಗಳ ಸಾಧನೆ ಕೊಂಡಾಡಿದ್ದಾರೆ. ಅವನಿ ಅವಳ ಕ್ರೀಡೆಯಲ್ಲಿ ತುಂಬಾ ಕಷ್ಟಪಟ್ಟು ಕೆಲಸ ಮಾಡಿದ್ದಾಳೆ. ಪ್ರತಿದಿನ 7 ರಿಂದ 8 ಗಂಟೆಗಳ ಕಾಲ ತರಬೇತಿ ಮಾಡುತ್ತಿದ್ದಳು. ಈ ಫಲಿತಾಂಶ ಆ ಕಠಿಣ ಪರಿಶ್ರಮದ ಪ್ರತಿಫಲವಾಗಿ ಹೊರಹೊಮ್ಮಿದೆ.

ಒಲಿಂಪಿಕ್ಸ್​ ಕ್ರೀಡಾಪಟುಗಳು ಪದಕ ಗೆಲ್ಲುತ್ತಿದ್ದಂತೆ ಹೀರೋಗಳಾಗುತ್ತಿದ್ದಾರೆ. ಆದರೆ, ಪ್ಯಾರಾಲಿಂಪಿಕ್ಸ್​ ಆಟಗಾರರು ನಿಜ ಜೀವನದ ಹೀರೋಗಳು. ಈ ಮಟ್ಟಕ್ಕೆ ಅರ್ಹತೆ ಪಡೆಯುತ್ತಾರೆಂದರೆ ಅವನು ಅಥವಾ ಅವಳಿಗೆ ಇದೊಂದು ದೊಡ್ಡ ಸಾಧನೆ ಎಂದು ಅವನಿ ಲೇಖಾರಾ ತಂದೆ ಈಟಿವಿ ಭಾರತಕ್ಕೆ ನೀಡಿದ ಎಕ್​ಕ್ಲ್ಯೂಸಿವ್ ಸಂದರ್ಶನದಲ್ಲಿ ಹೇಳಿದ್ದಾರೆ.

ಈ ಸ್ಪರ್ಧೆಯಲ್ಲಿ 5ನೇ ಶ್ರೇಯಾಂಕಿತಳಾಗಿರುವ ಅವನಿ ಇನ್ನೂ ಮೂರು ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಅವರು ಮಿಕ್ಸಡ್​ ಏರ್​ ರೈಫಲ್​ ಪ್ರೋನ್​, ಮಹಿಳೆಯರ 50 ಮೀಟರ್​​ ರೈಫಲ್​ ಮತ್ತು ಮಿಕ್ಸಡ್​ 50 ಮೀಟರ್​ ರೈಫಲ್​ನ​ ಫ್ರೋನ್​ ವಿಭಾಗದಲ್ಲೂ ಸ್ಪರ್ಧಿಸಲಿದ್ದಾರೆ.

ಇದನ್ನು ಓದಿ : ವಿಶ್ವದ ಅಗ್ರಸ್ಥಾನದಲ್ಲಿನ ಭಾವನೆ ವರ್ಣನಾತೀತ.. ಚಿನ್ನದ ಪದಕ ವಿಜೇತೆ ಅವನಿ ಲೇಖಾರಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.