ಟೋಕಿಯೋ: ಜಗತ್ತಿನ 200 ರಾಷ್ಟ್ರಗಳು ಪಾಲ್ಗೊಂಡಿದ್ದ 14 ದಿನಗಳ ಕಾಲ ನಡೆದ ಐತಿಹಾಸಿಕ ಟೋಕಿಯೋ ಒಲಿಂಪಿಕ್ಸ್-2020ಕ್ಕೆ ತೆರೆ ಬಿತ್ತು.
-
┏━━┓┏━━┓┏━━┓┏┓
— #Tokyo2020 (@Tokyo2020) August 8, 2021 " class="align-text-top noRightClick twitterSection" data="
┗━┓┃┃┏┓┃┗━┓┃┃┃
┏━┛┃┃┃┃┃┏━┛┃┃┃
┃ ARIGATO #TOKYO2020 ┃
┃┏━┛┃┃┃┃┃┏━┛┃┃
┃┗━┓┃┗┛┃┃┗━┓┃┃
┗━━┛┗━━┛┗━━┛┗┛
">┏━━┓┏━━┓┏━━┓┏┓
— #Tokyo2020 (@Tokyo2020) August 8, 2021
┗━┓┃┃┏┓┃┗━┓┃┃┃
┏━┛┃┃┃┃┃┏━┛┃┃┃
┃ ARIGATO #TOKYO2020 ┃
┃┏━┛┃┃┃┃┃┏━┛┃┃
┃┗━┓┃┗┛┃┃┗━┓┃┃
┗━━┛┗━━┛┗━━┛┗┛┏━━┓┏━━┓┏━━┓┏┓
— #Tokyo2020 (@Tokyo2020) August 8, 2021
┗━┓┃┃┏┓┃┗━┓┃┃┃
┏━┛┃┃┃┃┃┏━┛┃┃┃
┃ ARIGATO #TOKYO2020 ┃
┃┏━┛┃┃┃┃┃┏━┛┃┃
┃┗━┓┃┗┛┃┃┗━┓┃┃
┗━━┛┗━━┛┗━━┛┗┛
ಸಮಾರೋಪ ಸಮಾರಂಭದಲ್ಲಿ ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡ ಎಲ್ಲಾ ದೇಶಗಳ ರಾಷ್ಟ್ರಧ್ವಜ ಹಿಡಿದು ಕ್ರೀಡಾಪಟುಗಳು ವೃತ್ತಾಕಾರದಲ್ಲಿ ನಿಂತ ದೃಶ್ಯ ಜಾಗತಿಕ ಒಗ್ಗಟ್ಟಿಗೆ ಸಾಕ್ಷಿಯಾಯಿತು.
ಅದ್ಧೂರಿ ಸಮಾರಂಭದಲ್ಲಿ ಕಂಚಿನ ಪದಕ ಪಡೆದ ಕುಸ್ತಿಪಟು ಭಜರಂಗ್ ಪೂನಿಯಾ ತ್ರಿವರ್ಣ ಧ್ವಜ ಹಿಡಿದು ಭಾರತ ತಂಡವನ್ನು ಮುನ್ನಡೆಸಿದರು. ಕಾರ್ಯಕ್ರಮದ ಕೊನೆಯಲ್ಲಿ ಒಲಿಂಪಿಕ್ಸ್ನ ಒಟ್ಟು 33 ವಿವಿಧ ಸ್ಪರ್ಧೆಗಳ ಯಶಸ್ವಿ ಆಯೋಜನೆಯ ಹಿಂದೆ ಶ್ರಮಪಟ್ಟಿರುವವರಿಗೆ ಕ್ರೀಡಾಪಟುಗಳು ಧನ್ಯವಾದ ಹೇಳಿದರು.
ಆಗಸ್ಟ್ 24 ರಿಂದ ಟೋಕಿಯೋದಲ್ಲಿ ಪ್ಯಾರಾ ಒಲಿಂಪಿಕ್ಸ್ ಪ್ರಾರಂಭವಾಗಲಿದೆ.
ಕೋವಿಡ್ ಮುನ್ನೆಚ್ಚರಿಕೆಯೊಂದಿಗೆ ನಡೆದ ಕ್ರೀಡಾಕೂಟ: ಈ ಹಿಂದಿನ ಒಲಿಂಪಿಕ್ಸ್ಗಿಂತ ಈ ಬಾರಿಯ ಒಲಿಂಪಿಕ್ಸ್ ವಿಶೇಷವಾಗಿತ್ತು. ಅದಕ್ಕೆ ಕಾರಣ ಮಹಾಮಾರಿ ಕೋವಿಡ್. ಜಗತ್ತು ಸಂಕಷ್ಟದಲ್ಲಿರುವಾಗ ಬೃಹತ್ ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜನೆ ಮಾಡುವುದು ಸುಲಭದ ಮಾತಾಗಿರಲಿಲ್ಲ. ಆದರೂ, ಅದನ್ನು ಯಶಸ್ವಿಯಾಗಿ, ಅಚ್ಚುಕಟ್ಟಾಗಿ ಸಾಧಿಸಿ ತೋರಿಸುವಲ್ಲಿ ಒಲಿಂಪಿಕ್ಸ್ ಸಮಿತಿ ಯಶಸ್ವಿಯಾಗಿದೆ.
ಸಂಪೂರ್ಣ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಈ ಬಾರಿಯ ಒಲಿಂಪಿಕ್ಸ್ ಮುಕ್ತಾಯಗೊಂಡಿದೆ. 14 ದಿನಗಳ ಕಾಲ ನಡೆದ ಕ್ರೀಡಾಕೂಟದಲ್ಲಿ ಯಾವುದೇ ಒಬ್ಬ ಕ್ರೀಡಾಪಟುವಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುವಲ್ಲಿ ಆಯೋಜಕರು ಸಫಲರಾಗಿದ್ದಾರೆ. 200 ದೇಶಗಳ ಸುಮಾರು 11 ಸಾವಿರ ಕ್ರೀಡಾಪಟುಗಳು ಈ ಬಾರಿಯ ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡಿದ್ದರು ಎಂಬುವುದು ಇಲ್ಲಿ ಗಮನಾರ್ಹ.
ಭಾರತಕ್ಕೆ 7 ಪದಕ:
ಈ ಬಾರಿ ಒಲಿಂಪಿಕ್ಸ್ನಲ್ಲಿ ಭಾರತ ಕ್ರೀಡಾಪಟುಗಳು ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ಈ ಮೂಲಕ ಈ ಹಿಂದಿಗಿಂತ ಹೆಚ್ಚು ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಾರಿ ಒಂದು ಚಿನ್ನ, ಎರಡು ಬೆಳ್ಳಿ ಮತ್ತು ನಾಲ್ಕು ಕಂಚು ಸೇರಿ 7 ಪದಕಗಳು ಭಾರತದ ಪಾಲಾಗಿದೆ.
ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಚಿನ್ನ, ಕುಸ್ತಿಯಲ್ಲಿ ಭಜರಂಗ್ ಪೂನಿಯಾ ಕಂಚು, ವೈಟ್ ಲಿಫ್ಟಿಂಗ್ನಲ್ಲಿ ಮೀರಬಾಯಿ ಚಾನು ಬೆಳ್ಳಿ, ಬ್ಯಾಡ್ಮಿಂಟನ್ಲ್ಲಿ ಪಿ.ವಿ ಸಿಂಧು ಕಂಚು, ಬಾಕ್ಸಿಂಗ್ನಲ್ಲಿ ಲವ್ಲಿನಾ ಬೋರ್ಗೊಹೈನ್ ಕಂಚು, ಕುಸ್ತಿಯಲ್ಲಿ ರವಿ ಕುಮಾರ್ ದಹಿಯಾ ಬೆಳ್ಳಿ ಮತ್ತು ಪುರುಷರ ಹಾಕಿಯಲ್ಲಿ ಕಂಚಿನ ಪದಕ ಭಾರತಕ್ಕೆ ಒಲಿದು ಬಂದಿದೆ.
ಮುಂದಿನ ಒಲಿಂಪಿಕ್ಸ್ ಪ್ಯಾರಿಸ್ನಲ್ಲಿ:
ಮುಂದಿನ ಒಲಿಂಪಿಕ್ಸ್ ಕ್ರೀಡಾಕೂಟ ಫ್ರಾನ್ಸ್ನ ರಾಜಧಾನಿಯಾದ ಪ್ಯಾರಿಸ್ನಲ್ಲಿ 2024 ರ ಜುಲೈ 26 ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ. ಟೋಕಿಯೋ ಒಲಿಂಪಿಕ್ಸ್ನಲ್ಲಿ ಪ್ಯಾರಿಸ್ ಒಲಿಂಪಿಕ್ಸ್ನ ಧ್ವಜ ಪ್ರದರ್ಶಿಸಲಾಯಿತು.
ಟೋಕಿಯೋ ಒಲಿಂಪಿಕ್ಸ್ ವಿಶೇಷತೆಗಳು:
- 205 ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಗಳು (ನಿರಾಶ್ರಿತರ ಒಲಿಂಪಿಕ್ಸ್ ತಂಡಗಳು ಸೇರಿದಂತೆ- Refugee Olympic Team )
- 42 ಸ್ಪರ್ಧಾ ಸ್ಥಳಗಳು
- 33 ಸ್ಪರ್ಧೆಗಳು ಮತ್ತು 32 ಅಂತಾರಾಷ್ಟ್ರೀಯ ಫೆಡರೇಶನ್ಗಳು
- 339 ಮೆಡಲ್ ಈವೆಂಟ್ಗಳು, 18 ಮಿಕ್ಸೆಡ್ ಮತ್ತು ಓಪನ್ ಸೇರಿದಂತೆ
- ಈ ಬಾರಿ ಐದು ಹೊಸ ಸ್ಪರ್ಧೆಗಳನ್ನು ಪರಿಚಯಿಸಲಾಗಿದೆ- ಕರಾಟೆ, ಸ್ಕೇಟ್ ಬೋರ್ಡಿಂಗ್, ಸ್ಪೋರ್ಟ್ಸ್ ಕ್ಲೈಂಬಿಂಗ್, ಸಾಫ್ಟ್ ಬಾಲ್/ ಬೇಸ್ ಬಾಲ್ ಮತ್ತು ಸರ್ಫಿಂಗ್.
- ಟೋಕಿಯೋ ಒಲಿಂಪಿಕ್ಸ್ ಯಶಸ್ವಿಯ ಆಯೋಜನೆಗೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ( IOC) 1.7 ಯುಎಸ್ ಡಾಲರ್ ಖರ್ಚು ಮಾಡಿದೆ.
- 200 ದೇಶಗಳ 11, ಸಾವಿರ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.
- 29 ನಿರಾಶ್ರಿತ ಕ್ರೀಡಾಪಟುಗಳಿಗೆ ಅವಕಾಶ.
- 186 ನ್ಯಾಷನಲ್ ಒಲಿಂಪಿಕ್ಸ್ ಸಮಿತಿಗಳ 1, 800 ಕ್ರೀಡಾಪಟುಗಳಿಗೆ ಒಲಿಂಪಿಕ್ಸ್ ಏಕತಾ ಸ್ಕಾಲರ್ಶಿಪ್ (Olympic solidarity Tokyo 2020 scholarships) ನೀಡಲಾಗಿದೆ.
ಸಮರೋಪ ಸಮಾರಂಭದಲ್ಲಿ ಮಾತನಾಡಿದ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಅಧ್ಯಕ್ಷ ತೋಮಸ್ ಬ್ಯಾಚ್, ಈ ಬಾರಿಯ ಕ್ರೀಡಾಕೂಟ ಜಗತ್ತಿಗೆ ಹೊಸ ಭರವಸೆ ನೀಡಿದೆ ಎಂದಿದ್ದಾರೆ.