ಮೆಲ್ಬೋರ್ನ್: ಕೋವಿಡ್ ಸಮಯದಲ್ಲಿ ಟೆನಿಸ್ ಆಟಗಾರರು ಪ್ರಯಾಣಿಸುವುದನ್ನು ಕಡಿಮೆ ಮಾಡುವ ಉದ್ದೇಶದಿಂದ ಬಹುಪಾಲು ಲೀಡ್ ಅಪ್ ಪಂದ್ಯಗಳನ್ನು ಮೆಲ್ಬೋರ್ನ್ನಲ್ಲಿಯೇ ನಡೆಸಲು ತಯಾರಿ ನಡೆದಿದೆ.
ಮುಂದಿನ ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್ ಮತ್ತು ಮುಖ್ಯ ಟೆನಿಸ್ ಪಂದ್ಯಾವಳಿಗಳು ಜರುಗಲಿದ್ದು, ಇವೆಲ್ಲವನ್ನೂ ಮಲ್ಬೋರ್ನ್ನಲ್ಲಿಯೇ ಆಯೋಜನೆಗೆ ಉದ್ದೇಶಿಸಲಾಗಿದೆ.
ಟೆನಿಸ್ ಆಸ್ಟ್ರೇಲಿಯಾ ಸಂಸ್ಥೆಯೂ ಇಲ್ಲಿನ ಸಿಡ್ನಿ, ಬ್ರಿಸ್ಬೇನ್, ಪರ್ತ್, ಅಡಿಲೇಡ್ ಮತ್ತು ಹೋಬರ್ಟ್ನಲ್ಲಿ ನಡೆಯಬೇಕಿದ್ದ ಪಂದ್ಯಾವಳಿಯನ್ನು ಮೆಲ್ಬೋರ್ನ್ಗೆ ಸ್ಥಳಾಂತರಿಸಿದ್ದು, ಇಲ್ಲಿಯೇ ಆಟಗಾರರಿಗೆ ಕ್ವಾರಂಟೈನ್ ಹಾಗೂ ಅಭ್ಯಾಸಕ್ಕಾಗಿ ನೆಟ್ಗಳ ನಿಯೋಜನೆ ಮಾಡಲಿದೆ.
ಆಸ್ಟ್ರೇಲಿಯಾದಲ್ಲಿ ಈಗಲೂ ರಾಜ್ಯ ರಾಜ್ಯಗಳ ನಡುವಿನ ಆಂತರಿಕ ವಾಹನ ಓಡಾಟದ ಮೇಲೆ ಹಲವು ನಿಬಂಧನೆಗಳಿದ್ದು, ಅಂತಾರಾಷ್ಟ್ರೀಯ ಗಡಿ ಸಂಚಾರಕ್ಕೂ ನಿರ್ಬಂಧವಿದೆ.
ಜನವರಿ 18ರಿಂದ ಆರಂಭವಾಗಲಿರುವ ಆಸ್ಟ್ರೇಲಿಯನ್ ಓಪನ್ಗೆ ಸಿದ್ಧತೆ ನಡೆಸಲಾಗುತ್ತಿದ್ದು, ವೇಳಾಪಟ್ಟೆ ಸೇರಿದಂತೆ ಸರಕುಗಳನ್ನು ಸಾಗಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಟೆನಿಸ್ ಆಸ್ಟ್ರೇಲಿಯಾ ತಿಳಿಸಿದೆ.