ರೋಮ್(ಇಟಲಿ): ಮಹಾನ್ ಕ್ರೀಡಾಕೂಟ ಪ್ರಾರಂಭವಾಗಲೂ ಕೆಲವೇ ತಿಂಗಳುಗಳಿವೆ. ಆದರೆ ಜಪಾನ್‌ನಲ್ಲಿ ಕೊರೊನಾ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಬಾರದೇ ಟೋಕಿಯೊದಲ್ಲಿ ನಡೆಯಲಿರುವ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದರ ಕುರಿತು ಈಗಲೇ ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ವಿಶ್ವದ ಮೂರನೇ ಕ್ರಮಾಂಕದ ರಾಫೆಲ್ ನಡಾಲ್ ಹೇಳಿದ್ದಾರೆ.
ಮಂಗಳವಾರ ಆರಂಭವಾಗಲಿರುವ ಇಟಾಲಿಯನ್ ಓಪನ್‌ನ ಆರಂಭಿಕ ಪಂದ್ಯದಲ್ಲಿ ನಡಾಲ್ ಇಟಲಿಯ ಜಾನಿಕ್ ಸಿನ್ನರ್ ಅವರನ್ನು ಎದುರಿಸಲಿದ್ದಾರೆ. ಸಿನ್ನರ್ ಈ ವರ್ಷ ಮಿಯಾಮಿ ಓಪನ್‌ನಲ್ಲಿ ತಮ್ಮ ಮೊದಲ ಮಾಸ್ಟರ್ಸ್ ಟೂರ್ನಿಯಲ್ಲಿ ಫೈನಲ್ ತಲುಪಿದರು. ಕಳೆದ ತಿಂಗಳು ಬಾರ್ಸಿಲೋನಾ ಓಪನ್‌ನ ಸೆಮಿಫೈನಲ್ ತಲುಪಿದ್ದರು. ಹಂಬರ್ಟ್ ವಿರುದ್ಧ ಈ ವರ್ಷದ 20 ನೇ ಜಯ ಸಾಧಿಸಿದ್ದರು.
" ಸಾಮಾನ್ಯವಾಗಿ ಒಲಿಂಪಿಕ್ ಕ್ರೀಡಾಕೂಟಕ್ಕೆ ಯಾವಾಗಲೂ ನನ್ನ ಮೊದಲ ಆದ್ಯತೆಯಾಗಿತ್ತು. ಆದರೆ, ಪ್ರಸ್ತುತ ವಿಷಯಗಳು ಬದಲಾಗಿವೆ. ಈ ಸಾಂಕ್ರಾಮಿಕದ ನಡುವೆ ನಾವು ಸುಮಾರು ಒಂದೂವರೆ ವರ್ಷದಿಂದ ಇದ್ದೇವೆ. ಈ ಸಂದರ್ಭದಲ್ಲಿ ನಾನು ಹೇಳಬಹುದಾದ ಏಕೈಕ ವಿಷಯವೆಂದರೆ ನಾನು ಅಲ್ಪಾವಧಿಯ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳುತ್ತೇನೆ. ಹಾಗಾಗಿ ಒಲಿಂಪಿಕ್ಸ್ ಬಗ್ಗೆ ಇನ್ನು ಖಚಿತವಾದ ನಿರ್ಧಾರ ತೆಗೆದುಕೊಂಡಿಲ್ಲ "ಎಂದು ನಡಾಲ್ ಹೇಳಿದ್ದಾರೆ.