ETV Bharat / sports

ಆಸ್ಟ್ರೇಲಿಯಾ ಓಪನ್ 2022​.. ವ್ಯಾಕ್ಸಿನ್ ತೆಗೆದುಕೊಳ್ಳದ ಟೆನಿಸ್​ ಪ್ಲೇಯರ್​ಗಳಿಗೆ ವೀಸಾ ಇಲ್ಲ!! - Australia lockdown

ವಿಕ್ಟೋರಿಯಾದ ರಾಜ್ಯ ಸರ್ಕಾರದ ಮಂತ್ರಿ ಡೇನಿಯಲ್ ಆ್ಯಂಡ್ರಿವ್ಸ್​ ಎಲ್ಲಾ ವೃತ್ತಿಪರ ಕ್ರೀಡಾಪಟುಗಳು ಡೊಮೆಸ್ಟಿಕ್ಸ್​ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕಾದರೆ ಲಿಸಿಕೆಯನ್ನು ಕಡ್ಡಾಯವಾಗಿ ಪಡೆದಿರಬೇಕೆಂದು ಘೋಷಣೆ ಮಾಡಿದ್ದಾರೆ. ಮಂಗಳವಾರ ಆ ನಿಯಮವನ್ನು ದೇಶಕ್ಕೆ ಆಗಮಿಸುವ ಎಲ್ಲಾ ವಿದೇಸಿ ಕ್ರೀಡಾಪಟುಗಳಿಗೂ ಕಡ್ಡಾಯ ಮಾಡಿ ಘೋಷಣೆ ಮಾಡಿದ್ದಾರೆ..

ಆಸ್ಟ್ರೇಲಿಯಾ ಓಪನ್​ಗೆ ಕೋವಿಡ್​ ಲಸಿಕೆ ಕಡ್ಡಾಯ
ಆಸ್ಟ್ರೇಲಿಯಾ ಓಪನ್ 2022
author img

By

Published : Oct 19, 2021, 5:23 PM IST

Updated : Jan 18, 2023, 12:29 PM IST

ಮೆಲ್ಬೋರ್ನ್ : ಜನವರಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಓಪನ್​ನಲ್ಲಿ ಪಾಲ್ಗೊಳ್ಳಬೇಕಾದರೆ ಎಲ್ಲಾ ಟೆನಿಸ್​ ಆಟಗಾರರು ಕೋವಿಡ್-19 ಲಸಿಕೆಯನ್ನು ಕಡ್ಡಾಯವಾಗಿ ಪಡೆದಿರಬೇಕು. ಒಂದು ವೇಳೆ ತೆಗೆದುಕೊಳ್ಳದಿದ್ದರೆ ಅಂತಹ ಯಾರೇ ಆದರೂ ಆಸ್ಟ್ರೇಲಿಯಾ ಪ್ರವೇಶಿಸಲು ವೀಸಾ ದೊರೆಯುವುದಿಲ್ಲ ಎಂದು ಮೆಲ್ಬೋರ್ನ್​ನ ರಾಜಕೀಯ ನಾಯಕರೊಬ್ಬರು ಹೇಳಿದ್ದಾರೆ.

ವಿಕ್ಟೋರಿಯಾದ ರಾಜ್ಯ ಸರ್ಕಾರದ ಮಂತ್ರಿ ಡೇನಿಯಲ್ ಆ್ಯಂಡ್ರಿವ್ಸ್​ ಎಲ್ಲಾ ವೃತ್ತಿಪರ ಕ್ರೀಡಾಪಟುಗಳು ಡೊಮೆಸ್ಟಿಕ್ಸ್​ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕಾದರೆ ಲಿಸಿಕೆಯನ್ನು ಕಡ್ಡಾಯವಾಗಿ ಪಡೆದಿರಬೇಕೆಂದು ಘೋಷಣೆ ಮಾಡಿದ್ದಾರೆ. ಮಂಗಳವಾರ ಆ ನಿಯಮವನ್ನು ದೇಶಕ್ಕೆ ಆಗಮಿಸುವ ಎಲ್ಲಾ ವಿದೇಶಿ ಕ್ರೀಡಾಪಟುಗಳಿಗೂ ಕಡ್ಡಾಯ ಮಾಡಿ ಘೋಷಣೆ ಮಾಡಿದ್ದಾರೆ.

ಯಾವುದೇ ದೇಶದ ಟೆನಿಸ್​ ಆಟಗಾರರು ವ್ಯಾಕ್ಸಿನ್ ಪಡೆದಿಲ್ಲದಿದ್ದರೆ ದೇಶಕ್ಕೆ ಆಗಮಿಸಲು ವೀಸಾ ಪಡೆಯುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಒಂದೇ ವೇಳೆ ಅವರೂ ವೀಸಾ ಪಡೆದದ್ದೇ ಆದರೆ ಎರಡು ವಾರಗಳ ಹೋಟೆಲ್ ಕ್ವಾರಂಟೈನ್ ಮಾಡಬೇಕಾಗುತ್ತದೆ. ವ್ಯಾಕ್ಸಿನ್ ಪಡೆದವರಿಗೆ ಯಾವುದೇ ಕ್ವಾರಂಟೈನ್ ಇರುವುದಿಲ್ಲ ಎಂದು ಆ್ಯಂಡ್ರಿವ್ಸ್​ ಹೇಳಿದ್ದಾರೆ.

ಆದರೆ, ವಿಶ್ವದ ನಂಬರ್ 1 ಆಟಗಾರ ಸರ್ಬಿಯಾದ ನೊವಾಕ್ ಜೋಕೊವಿಕ್​ ಮಾತ್ರ ಲಸಿಕೆ ಪಡೆಯುವುದು ವೈಯಕ್ತಿಕ ಅಭಿಪ್ರಾಯ ಎಂದಿದ್ದಾರೆ. ಆದರೆ, ಇಂಗ್ಲೆಂಡ್ ಸ್ಟಾರ್ ಆ್ಯಂಡಿ ಮರ್ರೆ ವ್ಯಾಕ್ಸಿನ್​ ಕಡ್ಡಾಯಗೊಳಿಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ವಿಶ್ವದಾಖಲೆಯ 21ನೇ ಗ್ರ್ಯಾಂಡ್​ಸ್ಲಾಮ್​ ಮೇಲೆ ಕಣ್ಣಿಟ್ಟಿರುವ ಜೋಕೊವಿಕ್ ಆಸ್ಟ್ರೇಲಿಯಾ ಓಪನ್​ಗೂ ಮುನ್ನ ಕೋವಿಡ್ ಲಸಿಕೆ ಪಡೆಯಲಿದ್ದಾರೆಯೇ ಎಂದು ಕಾದುನೋಡಬೇಕಿದೆ.

ಇದನ್ನು ಓದಿ:Dhoni ಇಲ್ಲದೆ, CSK ಇಲ್ಲ.. ಚೆನ್ನೈ ಸೂಪರ್​ ಕಿಂಗ್ಸ್​ ಮಾಲೀಕ ಶ್ರೀನಿವಾಸನ್​

Last Updated : Jan 18, 2023, 12:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.