ETV Bharat / sports

ಫ್ರೆಂಚ್ ಓಪನ್ ಟೆನ್ನಿಸ್: ಸೆರೇನಾ, ಅಜರೆಂಕಾಗೆ ಆಘಾತ - ಅಜರೆಂಕಾ

ಭಾನುವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಪ್ರೀಕ್ವಾರ್ಟರ್‌ ಹಣಾಹಣಿಯಲ್ಲಿ 5-7, 6-3, 6-2ರಿಂದ ಗೆದ್ದ ಅನಸ್ತಾಸಿಯಾ ದಶಕದ ಬಳಿಕ ಟೂರ್ನಿಯಲ್ಲಿ ಎಂಟರ ಘಟ್ಟ ಪ್ರವೇಶಿಸಿದ ಸಾಧನೆ ಮಾಡಿದರು.

Elena Rybakina shocks Serena
ಸೆರೇನಾ, ಅಜರೆಂಕಾಗೆ ಆಘಾತ
author img

By

Published : Jun 7, 2021, 8:57 AM IST

ಪ್ಯಾರಿಸ್: ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಅಮೆರಿಕಾದ ಸೆರೇನಾ ವಿಲಿಯಮ್ಸ್, ರಷ್ಯಾದ ಎಲಿನಾ ರೈಬಾಕಿನಾ ಎದುರು ಸೋಲುಂಡು ಆಘಾತ ಅನುಭವಿಸಿದರು.

ಸೆರೇನಾ ವಿಲಿಯಮ್ಸ್ ಅವರು 3-6, 5-7 ನೇರ ಸೆಟ್‌ಗಳಿಂದ ರಷ್ಯಾದ ಎಲಿನಾ ರೈಬಾಕಿನಾ ಎದುರು ನಿರಾಸೆ ಕಂಡರು. ಕ್ವಾರ್ಟರ್ ಫೈನಲ್‌ನಲ್ಲಿ ಎಲೆನಾ ರಷ್ಯಾದ ಅನಸ್ತಾಸಿಯಾ ಪಾವಲ್ಯುಚೆಂಕೋವಾ ಅವರನ್ನು ಎದುರಿಸಲಿದ್ದಾರೆ.

ಈ ಹಿಂದೆ ವಿಶ್ವ ಕ್ರಮಾಂಕದಲ್ಲಿ ಅಗ್ರಸ್ಥಾನದಲ್ಲಿದ್ದ ವಿಕ್ಟೋರಿಯಾ ಅಜರೆಂಕಾ ಅವರಿಗೆ ಆಘಾತ ನೀಡಿದ ಅನಸ್ತಾಸಿಯಾ ಪಾವ್ಲಿಚೆಂಕೊವಾ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ಭಾನುವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಪ್ರೀಕ್ವಾರ್ಟರ್‌ ಹಣಾಹಣಿಯಲ್ಲಿ 5-7, 6-3, 6-2ರಿಂದ ಗೆದ್ದ ಅನಸ್ತಾಸಿಯಾ ದಶಕದ ಬಳಿಕ ಟೂರ್ನಿಯಲ್ಲಿ ಎಂಟರ ಘಟ್ಟ ಪ್ರವೇಶಿಸಿದ ಸಾಧನೆಗೈದರು.

2011ರಲ್ಲಿ ಟೂರ್ನಿಯ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದ ರಷ್ಯಾದ ಅನಸ್ತಾಸಿಯಾ, ಅಂದು ಫ್ರಾನ್ಸೆಸ್ಕಾ ಶಿಯಾವೊನ್ ಎದುರು ಸೋಲನುಭವಿಸಿದ್ದರು. 31ನೇ ಶ್ರೇಯಾಂಕದ ಅನಸ್ತಾಸಿಯಾ ಈ ಪಂದ್ಯದಲ್ಲಿ ಎಂಟು ಬಾರಿ ಬೆಲಾರಸ್‌ ಆಟಗಾರ್ತಿ ಅಜರೆಂಕಾ ಅವರ ಸರ್ವ್ ಮುರಿದರು. ಮೊದಲ ಸೆಟ್‌ ಹಿನ್ನಡೆಯಿಂದ ಪುಟಿದೆದ್ದು ಗೆಲುವಿನ ನಗೆ ಬೀರಿದರು. ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಏಳನೇ ಬಾರಿ ಎಂಟರ ಘಟ್ಟ ತಲುಪಿದರು. ಎಲ್ಲ ನಾಲ್ಕೂ ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲೂ ಅವರು ಕ್ವಾರ್ಟರ್‌ಫೈನಲ್ ತಲುಪಿದ್ದಾರೆ.

ಹಿಂದಿನ ಪಂದ್ಯದಲ್ಲಿ ಅನಸ್ತಾಸಿಯಾ, ಅರಿನಾ ಸಬಲೆಂಕಾ ಅವರಿಗೆ ಸೋಲುಣಿಸಿದ್ದರು. ಆ ಮೂಲಕ ಮ್ಯಾಡ್ರಿಡ್ ಓಪನ್‌ ಸೆಮಿಫೈನಲ್‌ನಲ್ಲಿ ಅನುಭವಿಸಿದ್ದ ನಿರಾಸೆಗೆ ಸೇಡು ತೀರಿಸಿಕೊಂಡಿದ್ದರು. ಮುಂದಿನ ಪಂದ್ಯದಲ್ಲಿ ಅವರು ಎಲೆನಾ ರಿಬಾಕಿನಾ ಅವರನ್ನು ಎದುರಿಸಲಿದ್ದಾರೆ.

ಸ್ಪೇನ್‌ನ ಪೌಲಾ ಬಡೋಸಾ ಅವರು ಮೊದಲ ಬಾರಿ ಗ್ರ್ಯಾನ್‌ಸ್ಲಾಮ್ ಟೂರ್ನಿಯೊಂದರ ಎಂಟರ‌ಘಟ್ಟ ತಲುಪಿದರು. 16ರ ಘಟ್ಟದ ಹಣಾಹಣಿಯಲ್ಲಿ ಅವರು 6-4, 3-6, 6-2ರಿಂದ ಜೆಕ್ ಗಣರಾಜ್ಯದ ಮರ್ಕೆಟಾ ವೊಂಡ್ರೊಸೊವಾ ಅವರನ್ನು ಮಣಿಸಿದರು. ವೊಂಡ್ರೊಸೊವಾ 2019ರ ಆವೃತ್ತಿಯ ಫೈನಲ್‌ನಲ್ಲಿ ಆ್ಯಶ್ಲಿ ಬಾರ್ಟಿ ಅವರಿಗೆ ಸೋತು ರನ್ನರ್ ಅಪ್ ಆಗಿದ್ದರು.

33ನೇ ಶ್ರೇಯಾಂಕದ ಬಡೋಸಾ ಅವರಿಗೆ ಕ್ವಾರ್ಟರ್‌ಫೈನಲ್‌ನಲ್ಲಿ ಸ್ಲೋವೆನಿಯಾದ ತಮಾರ ಜಿಡಾನ್ಸೆಕ್‌ ಎದುರಾಳಿ. ಮತ್ತೊಂದು ಪ್ರೀಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ತಮಾರ 7-6 , 6-1ರಿಂದ ರುಮೇನಿಯಾದ ಸೊರೊನಾ ಕ್ರಿಸ್ಟಿಯಾ ಎದುರು ಜಯಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.