ಪ್ಯಾರಿಸ್: ಫ್ರೆಂಚ್ ಓಪನ್ ಪ್ರಮುಖ ಸುತ್ತಿಗೆ ಪ್ರವೇಶಿಸಲು 39 ವರ್ಷ ಕಾದಿದ್ದ ಇಂಗ್ಲೆಂಡ್ಗೆ ಕೊನೆಗೂ ಜೋ ಸಾಲಿಸ್ಬರಿ(Joe Salisbury) ಅಮೆರಿಕಾದ ಡೆಸಿರೆ ಕ್ರಾಚಿಕ್(Desirae Krawczyk) ಜೊತೆಗೂಡಿ ಫ್ರೆಂಚ್ ಓಪನ್ ಮಿಕ್ಸಡ್ ಡಬಲ್ಸ್ ಪ್ರಶಸ್ತಿ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಗುರವಾರ ಪಿಲಿಫ್ ಚಾಟ್ರೀಯರ್ ಗ್ರೌಂಡ್ನಲ್ಲಿ ನಡೆದ ಮಿಕ್ಸಡ್ ಡಬಲ್ಸ್ ಫೈನಲ್ ಪಂದ್ಯದಲ್ಲಿ ಕ್ರಾಚಿಕ್ ಮತ್ತು ಸ್ಯಾಲಿಸ್ಬರಿ ಜೋಡಿ ರಷ್ಯಾದ ಜೋಡಿ ಎಲೆನಾ ವೆಸ್ನಿನಾ ಮತ್ತು ಅಸ್ಲಾನ್ ಕರಾತ್ಸೆವ್ ವಿರುದ್ಧ 2-6, 6-4 10-5ರಲ್ಲಿ ಗೆಲ್ಲುವ ಮೂಲಕ ತಮ್ಮ ಮೊದಲ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದ್ದಾರೆ.
ಕ್ರಾಚಿಕ್ಗೆ ಇದು ಮೊದಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯಾದರೆ, ಸಾಲಿಸ್ಬರಿಗೆ ಇದು 2ನೇ ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿಯಾಗಿದೆ, 2020ರಲ್ಲಿ ಅವರು ಪುರುಷರ ಡಬಲ್ಸ್ನಲ್ಲಿ ಆಸ್ಟ್ರೇಲಿಯನ್ ಓಪನ್ ಜಯಿಸಿದ್ದರು.
ಇದನ್ನು ಓದಿ:French Open 2021: ಸೆಮಿಫೈನಲ್ನಲ್ಲಿ ನಡಾಲ್-ಜೋಕೊವಿಕ್ ಮುಖಾಮುಖಿ