ETV Bharat / sports

ಪೆಂಗ್ ಶುವಾಯ್ ನಾಪತ್ತೆ: ಚೀನಾದ ಟೂರ್ನಮೆಂಟ್​ಗಳಿಂದ ಹೊರಬರುವ WTA ನಿರ್ಧಾರಕ್ಕೆ ಜೋಕೊವಿಕ್ ಬೆಂಬಲ

author img

By

Published : Nov 20, 2021, 7:55 PM IST

ಪೆಂಗ್​ ಕಾಣೆಯಾಗಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಮಹಿಳಾ ಟೆನಿಸ್ ಅಸೋಸಿಯೇಷನ್(Women's Tennis Association). ಪೆಂಗ್​ ಸುರಕ್ಷಿತವಾಗಿದ್ದಾರೆ ಎಂದು ಸಾಬೀತಾಗದಿದ್ದರೆ ತನ್ನ ಚೀನಾದ ಲಾಭದಾಯಕ ಪ್ರವಾಸದಿಂದ ಹಿಂದೆ ಸರಿಯುವ ಬೆದರಿಕೆ ಹಾಕಿತ್ತು.

Djokovic backs WTA China pull-out threat
ನೊವಾಕ್ ಜೋಕೊವಿಕ್​

ಟುರಿನ್(ಇಟಲಿ): ಚೀನಾದಲ್ಲಿ ಕಳೆದ ಕೆಲವು ದಿನಗಳಿಂದ ಕಣ್ಮರೆಯಾಗಿರುವ ಮಾಜಿ ವಿಶ್ವದ ನಂಬರ್ 1 ಆಟಗಾರ್ತಿ ಪೆಂಗ್ ಶುವಾಯ್(Peng Shuai)ಪತ್ತೆಯಾಗುವವರೆಗೂ ಚೀನಾದಲ್ಲಿ ನಡೆಯುವ ಟೂರ್ನಿಗೆ ಶೇಕಡಾ 100 ಗೈರಾಗುವ WTA ನಿರ್ಧಾರಕ್ಕೆ ವಿಶ್ವದ ನಂಬರ್​ ಒನ್​ ಟೆನಿಸ್ ಪ್ಲೇಯರ್​ ನೊವಾಕ್ ಜೋಕೊವಿಕ್(Novak Djokovic)​ ಬೆಂಬಲ ಸೂಚಿಸಿದ್ದಾರೆ.

ಕೆಲವು ದಿನಗಳ ಹಿಂದೆ ಪೆಂಗ್ ಶುವಾಯ್​ ಚೀನಾದ ಕಮ್ಯುನಿಸ್ಟ್​ ಪಕ್ಷದ ಪೊಲಿಟ್‌ಬ್ಯೂರೋ ಸ್ಥಾಯಿ ಸಮಿತಿಯ ಸದಸ್ಯರಾದ ಜಾಂಗ್ ಗೌಲಿ(Zhang Gaoli) ಲೈಂಗಿಕ ಆರೋಪ(sexually assault) ಮಾಡಿದ್ದರು. ಆದರೆ ಶುವಾಯ್​ ಆರೋಪಕ್ಕೆ ಅಲ್ಲಿನ ಸರ್ಕಾರ ಯಾವುದೇ ಗಮನ ನೀಡಲಿಲ್ಲ. ಇದೀಗ ಇದಕ್ಕಿದ್ದಂತೆ ಅವರು ಕಣ್ಮರೆಯಾಗಿದ್ದಾರೆ. ಅಕ್ಟೋಬರ್ 2 ರಂದು ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಶುವಾಯ್ ತಿಂಗಳ ಕಳೆದರೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಕುಟುಂಬ ಕೂಟ ಶುವಾಯ್​ಗಾಗಿ ಹುಡುಕಾಟ ನಡೆಸುತ್ತಲೇ ಇದೆ.

ಪೆಂಗ್​ ಕಾಣೆಯಾಗಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಮಹಿಳಾ ಟೆನಿಸ್ ಅಸೋಸಿಯೇಷನ್(Women's Tennis Association). ಪೆಂಗ್​ ಸುರಕ್ಷಿತವಾಗಿದ್ದಾರೆ ಎಂದು ಸಾಬೀತಾಗದಿದ್ದರೆ ತನ್ನ ಚೀನಾದ ಲಾಭದಾಯಕ ಪ್ರವಾಸದಿಂದ ಹಿಂದೆ ಸರಿಯುವ ಬೆದರಿಕೆ ಹಾಕಿತ್ತು.

ನೊವಾಕ್​ ಜೋಕೊವಿಕ್​

ನಾವು ಪೆಂಗ್ ವಿಚಾರದಲ್ಲಿ ಯಾವುದೇ ರಾಜಿಗಳಿಗೆ ನಿಲ್ಲಲು ಸಾಧ್ಯವಿಲ್ಲ ಎಂದು WTA ಅಧ್ಯಕ್ಷ ಸ್ಟೇವ್ ಸಿಮೋನ್ ಹೇಳಿದ್ದರು. ಇದೀಗ ಪುರುಷರ ನಂಬರ್​ 1 ಟೆನಿಸ್ ಆಟಗಾರ ಜೋಕೊವಿಕ್ ಕೂಡ ಬೆಂಬಲ ಸೂಚಿಸಿದ್ದಾರೆ.

ಇದು ಮುಖ್ಯವಾದ ವಿಚಾರವಾಗಿದೆ, ಏಕೆಂದರೆ ಒಬ್ಬ ವ್ಯಕ್ತಿ ಕಾಣೆಯಾಗಿದ್ದಾರೆ ಎಂದರೆ ಅದು ಭಯಾನಕವಾಗಿದೆ. ಚೀನಾ ಒಂದು ದೊಡ್ಡ ದೇಶ. ಇದು ವಿಶ್ವದ ಪ್ರಮುಖ ಭಾಗ, ಅದರಲ್ಲೂ ಡಬ್ಲ್ಯೂಟಿಎಗೆ ಅತ್ಯಂತ ವಿಶೇಷವಾಗಿದೆ. ಅವರೂ ಅಲ್ಲಿ (ಚೀನಾ) ಸಾಕಷ್ಟು ಟೂರ್ನಮೆಂಟ್​ಗಳನ್ನು ಹೊಂದಿದ್ದಾರೆ. ಅವರು ಪೆಂಗ್ ಪ್ರಕರಣದ ಬಗ್ಗೆ ತಿಳಿದುಕೊಳ್ಳಲು ನಾವು ಯಾವುದೇ ಕ್ರಮವಹಿಸುವುದು ಅತ್ಯಾವಶ್ಯಕವಾಗಿದೆ ಎಂದು ಎಟಿಪಿ ಫೈನಲ್ಸ್​ನಲ್ಲಿ ಕ್ಯಾಮರೋನ್​ ನಾರೀ ವಿರುದ್ಧ ಗೆದ್ದ ಬಳಿಕ ನಡೆದ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನಾನು ಈಗಷ್ಟೇ ಈ ಸಮಸ್ಯೆ ಬಗೆಹರಿಯುವವರೆಗೂ WTA ಚೀನಾದಲ್ಲಿ ನಡೆಯುವ ಎಲ್ಲಾ ಟೂರ್ನಮೆಂಟ್​ಗಳಿಂದ ಹಿಂದೆ ಸರಿಯುವ ನಿರ್ಧಾರದ ಬಗ್ಗೆ ಕೇಳ್ಪಟ್ಟಿದ್ದೇನೆ. ಅದಕ್ಕೆ ಶೇ.100ರಷ್ಟು ಬೆಂಬಲ ನೀಡುತ್ತೇನೆ ಎಂದು 20 ಗ್ರ್ಯಾಂಡ್​ ಸ್ಲಾಮ್​ಗಳ ಒಡೆಯ ಹೇಳಿದ್ದಾರೆ.

ಪೆಂಗ್ ಮಹಿಳೆಯರ ಡಬಲ್ಸ್‌ 2013ರಲ್ಲಿ ವಿಂಬಲ್ಡನ್ ಮತ್ತು 2014ರಲ್ಲಿ ಫ್ರೆಂಚ್ ಓಪನ್‌ ಗೆದ್ದಿದ್ದರು. ವಿಶ್ವದ ಮಾಜಿ ನಂಬರ್ 1 ಆಟಗಾರ್ತಿಯಾಗಿರುವ ಅವರು 3 ಬಾರಿ ಒಲಿಂಪಿಕ್ಸ್‌ ನಲ್ಲಿ ಸ್ಪರ್ಧಿಸಿದ್ದಾರೆ.

ಇದನ್ನು ಓದಿ:0WWWW1 : ಸತತ 4 ಎಸೆತಗಳಲ್ಲಿ 4 ವಿಕೆಟ್ ಪಡೆದ ದರ್ಶನ್, ಈ ಸಾಧನೆ ಮಾಡಿದ ವಿಶ್ವದ 9ನೇ ಬೌಲರ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.