ಪ್ಯಾರಿಸ್ : ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್‌ನಲ್ಲಿ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಜಯಸಿದ ಇಗಾ ಸ್ವಿಟೆಕ್ ತಮ್ಮ ಅಂತರಂಗದ ಮಾಹಿತಿ ಹಂಚಿಕೊಂಡಿದ್ದಾರೆ. ಫ್ರೆಂಚ್ ಓಪನ್ ಟೂರ್ನಿಯಲ್ಲಿ ಪ್ರದರ್ಶಿಸಿರುವ ಆಟ ಪುನರಾವರ್ತನೆ ಮಾಡುವುದು ಸವಾಲಿನ ಕೆಲಸವಾಗಿದ್ದು, ಒಸಾಕಾದಿಂದ ಸ್ಫೂರ್ತಿ ಪಡೆದಿರುವುದರಿಂದಲೇ ಇಷ್ಟೊಂದು ದೊಡ್ಡಮಟ್ಟದಲ್ಲಿ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಯಿತು ಎಂದಿದ್ದಾರೆ.
19 ವರ್ಷದ ಟೆನ್ನಿಸ್ ಆಟಗಾರ್ತಿ ಇಗಾ ಸ್ವಿಟೆಕ್ ಫ್ರೆಂಚ್ ಓಪನ್ನಲ್ಲಿ ಅಮೆರಿಕದ ಸೋಫಿಯಾ ಕೆನನ್ ವಿರುದ್ಧ ಜಯ ಸಾಧಿಸಿದ್ದರು. ಇಲ್ಲಿಯವರೆಗೆ ನಡೆದ 14 ಗ್ರ್ಯಾಂಡ್ ಸ್ಲಾಮ್ಗಳಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ 11ನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.
ಅಮೆರಿಕದ ಸೂಪರ್‌ಸ್ಟಾರ್ ಸೆರೆನಾ ವಿಲಿಯಮ್ಸ್ ಮಹಿಳಾ ಸಿಂಗಲ್ಸ್‌ನಲ್ಲಿ ಪ್ರಬಲ ಆಟಗಾರ್ತಿಯಾಗಿದ್ದು, 23 ಗ್ರ್ಯಾನ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಆದರೆ ಈ ಸಲ 19 ವರ್ಷದ ಆಟಗಾರ್ತಿ ಈ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.
ತಮ್ಮ ಅನುಭವ ಹಂಚಿಕೊಂಡಿರುವ ಆಟಗಾರ್ತಿ, ಆಟದಲ್ಲಿ ಸ್ಥಿ ಪ್ರದರ್ಶನ ನೀಡುವುದು ನಿಜಕ್ಕೂ ಕಷ್ಟಕರವಾದ ಕೆಲಸ, ಆದರೆ ಇದೀಗ ಇಂತಹ ಪ್ರದರ್ಶನ ನೀಡಿರುವುದು ನನಗೂ ಖುಷಿ ಇದೆ ಎಂದಿದ್ದಾರೆ. ನನ್ನ ಪ್ರದರ್ಶನದ ಬಗ್ಗೆ ನನಗೆ ಹೆಮ್ಮೆ ಇದೆ. ಕಳೆದ ಎರಡು ವಾರಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಟ್ರೋಫಿ ಗೆಲ್ಲುತ್ತೇನೆಂದು ನಿಜಕ್ಕೂ ನಿರೀಕ್ಷೆ ಮಾಡಿರಲಿಲ್ಲ. ನನ್ನ ಜೀವನದಲ್ಲಿ ಇದೊಂದು ಅದ್ಭುತ ಅನುಭವ ಎಂದು ತಿಳಿಸಿದ್ದಾರೆ.