ETV Bharat / sports

Australian Open: ಆಸ್ಟ್ರೇಲಿಯನ್ ಓಪನ್​ನಲ್ಲಿ ಆಡಲು ಲಸಿಕೆ ಕಡ್ಡಾಯ..! - ನೊವಾಕ್ ಜೊಕೊವಿಕ್

ಆಸ್ಟ್ರೇಲಿಯನ್ ಓಪನ್​ನಲ್ಲಿ 9 ಬಾರಿ ಚಾಂಪಿಯನ್ ಆಗಿರುವ ನೊವಾಕ್ ಜೊಕೊವಿಕ್ ದಾಖಲೆಯ 21ನೇ ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಗೆ ಮುತ್ತಿಕ್ಕಲು ಸಜ್ಜಾಗುತ್ತಿದ್ದಾರೆ. ಆದರೆ, ತಾವು ಲಸಿಕೆ ಪಡೆದಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ನೊವಾಕ್ ಜೊಕೊವಿಕ್
ನೊವಾಕ್ ಜೊಕೊವಿಕ್
author img

By

Published : Nov 20, 2021, 1:13 PM IST

ಮೆಲ್ಬೋರ್ನ್: 2022ರ ಮೊದಲ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಪಂದ್ಯಾವಳಿಯಲ್ಲಿ (Grand Slam tennis tournament of 2022) ಭಾಗವಹಿಸುವ ಎಲ್ಲಾ ಆಟಗಾರರು ಕೋವಿಡ್​ ಲಸಿಕೆಯ ಎರಡೂ ಡೋಸ್​ಗಳನ್ನು ಹಾಕಿಸಿಕೊಂಡಿರಬೇಕು (Covid vaccination must for players in Australian Open) ಎಂದು ಆಸ್ಟ್ರೇಲಿಯನ್ ಓಪನ್ ಮುಖ್ಯಸ್ಥ ಕ್ರೇಗ್ ಟೈಲೆ ಸ್ಪಷ್ಟಪಡಿಸಿದ್ದಾರೆ.

ಆದರೆ, ಆಸ್ಟ್ರೇಲಿಯನ್ ಓಪನ್​ನಲ್ಲಿ 9 ಬಾರಿ ಚಾಂಪಿಯನ್ ಆಗಿರುವ ನೊವಾಕ್ ಜೊಕೊವಿಕ್ ದಾಖಲೆಯ 21ನೇ ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಗೆ ಮುತ್ತಿಕ್ಕಲು ಸಜ್ಜಾಗುತ್ತಿದ್ದಾರೆ. ಆದರೆ ತಾವು ಲಸಿಕೆ ಪಡೆದಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

2020ರ ಜನವರಿ 17 ರಿಂದ 30 ರವರೆಗೆ ಪಂದ್ಯಾವಳಿಯನ್ನು ನಿಗದಿಪಡಿಸಲಾಗಿದೆ. ವಿಕ್ಟೋರಿಯಾ ರಾಜ್ಯ ಪ್ರಧಾನಿ ಡೇನಿಯಲ್ ಆಂಡ್ರ್ಯೂಸ್ ಆದೇಶದ ಮೇರೆಗೆ ಆಟಗಾರರಿಗೆ, ಎಲ್ಲಾ ಸಿಬ್ಬಂದಿಗೆ, ಪ್ರೇಕ್ಷಕರಿಗೆ ಸಂಪೂರ್ಣ ವ್ಯಾಕ್ಸಿನ್​ ಕಡ್ಡಾಯಗೊಳಿಸಿ ಕ್ರೇಗ್ ಟೈಲೆ (Australian Open chief Craig Tiley) ಪ್ರಕಟಣೆ ಹೊರಡಿಸಿದ್ದಾರೆ.

ಇದನ್ನೂ ಓದಿ: ನಾಯಕ, ಉಪ ನಾಯಕನ ಸ್ಫೋಟಕ ಆಟಕ್ಕೆ ಒಲಿದ ಗೆಲುವು ; ಕಿವೀಸ್‌ ವಿರುದ್ಧ ಟಿ-20 ಸರಣಿ ಗೆದ್ದ ಟೀಂ ಇಂಡಿಯಾ

"ನೊವಾಕ್ ಅವರ ವ್ಯಾಕ್ಸಿನೇಷನ್​ ಸ್ಟೇಟಸ್​ ಬಗ್ಗೆ ಊಹಾಪೋಹಗಳಿವೆ, ಇದು ಖಾಸಗಿ ವಿಷಯವಾಗಿದೆ. ನಾವು ನೊವಾಕ್ ಅವರನ್ನು ಆಸ್ಟ್ರೇಲಿಯನ್ ಓಪನ್​ನಲ್ಲಿ ನೋಡಲು ಬಯಸುತ್ತೇವೆ. ಆದರೆ, ಆಟವಾಡಲು ಅವರಿಗೆ ಲಸಿಕೆಯಾಗಿರಬೇಕೆಂಬುದು ಅವರಿಗೆ ತಿಳಿದೇ ಇರುತ್ತದೆ" ಎಂದು ಟೈಲೆ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.