ಬೀಜಿಂಗ್: ಪ್ರೆಂಚ್ ಓಪನ್ನ ಸೆಮಿಫೈನಲ್ನಲ್ಲಿ ಸೋತರೂ ಸರ್ಬಿಯಾದ ನೋವಾಕ್ ಜಾಕೋವಿಕ್ ನಂಬರ್ ಒನ್ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಸೋಮವಾರ ಬಿಡುಗಡೆಯಾದ ಎಟಿಪಿ ಶ್ರೇಯಾಂಕದಲ್ಲಿ ಸರ್ಬಿಯಾದ ನೋವಾಕ್ ಜಾಕೋವಿಕ್ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿ ಪ್ರೆಂಚ್ ಓಪನ್ ಚಾಂಪಿಯನ್ ಸ್ಪೇನಿನ ರಾಫೆಲ್ ನಡಾಲ್ ಕಾಯ್ದುಕೊಂಡರೆ, ಮೂರನೇ ಸ್ಥಾನದಲ್ಲಿ ರೋಜರ್ ಫೆಡೆರರ್ ಮುಂದುವರಿದಿದ್ದಾರೆ.
ನೂತನ ಶ್ರಯಾಂಕದ ಟಾಪ್ 10ರಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಜಾಕೋವಿಕ್ 12,415 ಅಂಕ ಪಡೆದಿದ್ದರೆ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿರುವ ರಾಫೆಲ್ 7,945 ಅಂಕ ಪಡೆದಿದ್ದಾರೆ.
ಇತ್ತೀಚೆಗೆ ನಡೆದ ಫ್ರೆಂಚ್ ಓಪನ್ನಲ್ಲಿ ರೋಜರ್ ಫೆಡರರ್ ಅವರನ್ನು ನಡಾಲ್ ಹಾಗೂ ಜಾಕೋವಿಕ್ರನ್ನು ಆಸ್ಟ್ರಿಯಾದ ಡಾಮಿನಿಕ್ ಥೀಮ್ ಮಣಿಸಿದ್ದರು. ಫೈನಲ್ನಲ್ಲಿ ಥೀಮ್ ನಡಾಲ್ ವಿರುದ್ಧ ಸೋಲನುಭವಿಸಿದ್ದರು.