ETV Bharat / sports

ಕ್ರೀಡೆಗೆ ಯೋಗಿ ಸರ್ಕಾರದ ವಿಶೇಷ ಉತ್ತೇಜನ; ಗ್ರಾಮೀಣ ಪ್ರದೇಶಗಳಲ್ಲಿ ಮಿನಿ ಕ್ರೀಡಾಂಗಣಗಳ ನಿರ್ಮಾಣ - ಕ್ರೀಡೆ

ರಾಜ್ಯದಲ್ಲಿ ಕ್ರೀಡೆಗೆ ಹೆಚ್ಚಿನ ಉತ್ತೇಜನ ನೀಡಲು ಮುಂದಾಗಿರುವ ಉತ್ತರ ಪ್ರದೇಶ ಸರ್ಕಾರ 75 ಜಿಲ್ಲೆಗಳಲ್ಲಿ ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜಿಸುತ್ತಿದೆ. ಇದ್ರ ಜೊತೆಗೆ, ಗ್ರಾಮೀಣ ಪ್ರದೇಶಗಳಲ್ಲಿ ಮಿನಿ ಕ್ರೀಡಾಂಗಣಗಳನ್ನು ಸ್ಥಾಪಿಸಿ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಯೋಜನೆ ರೂಪಿಸಿದೆ.

Yogi govt's boost to sports with mini stadiums in rural UP
ಕ್ರೀಡೆ ಉತ್ತೇಜನೆಗೆ ಮುಂದಾದ ಯೋಗಿ ಸರ್ಕಾರ; ಗ್ರಾಮೀಣ ಪ್ರದೇಶದಲ್ಲಿ ಮಿನಿ ಕ್ರೀಡಾಂಗಣಗಳ ನಿರ್ಮಾಣ
author img

By

Published : Sep 10, 2021, 6:14 PM IST

ಲಖನೌ: ಜಪಾನ್‌ನಲ್ಲಿ ಇತ್ತೀಚೆಗೆ ಮುಕ್ತಾಯವಾದ ಟೋಕಿಯೋ ಒಲಿಂಪಿಕ್ಸ್‌ ಹಾಗೂ ಪಾರಾಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ವಿಶೇಷ ಸಾಮರ್ಥ್ಯ ಪ್ರದರ್ಶಿಸಿ ಅನೇಕ ಪದಕಗಳನ್ನು ಗೆದ್ದು ಜಗತ್ತಿನ ಗಮನ ಸೆಳೆದಿದ್ದರು. ಕ್ರೀಡಾಪಟುಗಳು ದೇಶಕ್ಕೆ ಇನ್ನಷ್ಟು ಪದಕಗಳನ್ನು ತರಬೇಕೆಂದು ಪಣತೊಟ್ಟಿರುವ ಹಲವು ರಾಜ್ಯಗಳು ಇದೀಗ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಿ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸಕ್ಕೆ ಮುಂದಾಗಿವೆ.

ಈ ನಿಟ್ಟಿನಲ್ಲಿ ಉತ್ತರಪ್ರದೇಶದ ಮಹತ್ವದ ಹೆಜ್ಜೆ ಇಟ್ಟಿದೆ. ಯೋಗಿ ನೇತೃತ್ವದ ಸರ್ಕಾರ ರಾಜ್ಯದ 75 ಜಿಲ್ಲೆಗಳಲ್ಲಿ ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜಿಸುತ್ತಿದೆ. ಇದ್ರ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಮಿನಿ ಕ್ರೀಡಾಂಗಣಗಳನ್ನು ಸ್ಥಾಪಿಸುವ ಮೂಲಕ ಕ್ರೀಡಾ ಪ್ರತಿಭೆಗಳನ್ನು ಉತ್ತೇಜಿಸಲು ಹಾಗೂ ಆಟಗಾರರು ತಮ್ಮ ಕೌಶಲ್ಯ ವೃದ್ಧಿಸಿಕೊಳ್ಳಲು ನೆರವಾಗುತ್ತಿದೆ.

ಉತ್ತರ ಪ್ರದೇಶದ ಗ್ರಾಮೀಣ ಪ್ರದೇಶಗಳಲ್ಲಿ ಈಗಾಗಾಲೇ 20 ಮಿನಿ ಕ್ರೀಡಾಂಗಣಗಳನ್ನು ನಿರ್ಮಿಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿರುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ವೇದಿಕೆ ಕಲ್ಪಿಸುವುದೇ ಇಡೀ ಯೋಜನೆಯ ಉದ್ದೇಶ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಪ್ರಶಸ್ತಿ ತಂದುಕೊಟ್ಟ ಕ್ರೀಡಾಪಟುಗಳನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇತ್ತೀಚೆಗೆ ಸನ್ಮಾನಿಸಿದ್ದರು. ಯುವಕರು ಕ್ರೀಡೆಗಳನ್ನು ಮುಂದುವರಿಸಲು ಸರ್ಕಾರವು ಗ್ರಾಮೀಣ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸುತ್ತಿದೆ. ಇಂಥ ಕಾರ್ಯಕ್ರಮಗಳಿಗಾಗಿ ಪ್ರತಿ ಜಿಲ್ಲೆಗೆ 40,000 ಸಾವಿರ ಅನುದಾನ ಬಿಡುಗಡೆ ಮಾಡಿದೆ. ಗ್ರಾಮೀಣ ವಲಯದಲ್ಲಿ ಆಟಗಾರರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು 2018-19ರ ಆರ್ಥಿಕ ವರ್ಷದಲ್ಲಿ ಬಜೆಟ್‌ನಲ್ಲಿ ಇಲ್ಲಿನ ಸರ್ಕಾರ ಅನುದಾನ ಹೆಚ್ಚಿಸಿತ್ತು. ಈಗ ಕ್ರೀಡಾ ಸ್ಪರ್ಧೆಗಳನ್ನು ಕೂಡ ಬ್ಲಾಕ್ ಮಟ್ಟದಲ್ಲಿ ನಡೆಸುತ್ತಿದೆ.

2020-21ರ ಅವಧಿಯಲ್ಲಿ 62 ಜಿಲ್ಲೆಗಳ 701 ಅಭಿವೃದ್ಧಿ ಬ್ಲಾಕ್‌ಗಳಲ್ಲಿ ಗ್ರಾಮೀಣ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಈ ಅವಧಿಯಲ್ಲಿ ಒಟ್ಟು 18 ವಿಭಾಗೀಯ ಹಾಗೂ 6 ವಲಯ ಮಟ್ಟದ ಸ್ಪರ್ಧೆಗಳನ್ನು ಆಯೋಜಿಸಿದೆ.

ಇದನ್ನೂ ಓದಿ: ಭಾರತೀಯ ಕುಸ್ತಿಯನ್ನು 2032ರ ಒಲಿಂಪಿಕ್ಸ್​ವರೆಗೆ ದತ್ತು ತೆಗೆದುಕೊಂಡ ಯುಪಿ ಸರ್ಕಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.