ಇಸ್ತಾಂಬುಲ್ (ಟರ್ಕಿ): ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ 25 ವರ್ಷದ ನಿಖಾತ್ ಜರೀನ್ ಭಾರತಕ್ಕೆ ಪದಕ ಖಚಿತಪಡಿಸಿದ್ದಾರೆ. ಟರ್ಕಿಯ ಇಸ್ತಾಂಬುಲ್ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ನ ಎದುರಾಳಿ ಚಾರ್ಲಿ ಡೇವಿಸನ್ ವಿರುದ್ಧ 5-0 ಅಂತರದಿಂದ ಜಯ ದಾಖಲಿಸಿ, ಸೆಮಿಫೈನಲ್ಗೆ ಲಗ್ಗೆ ಹಾಕಿದ್ದು, ಈ ಮೂಲಕ ಪದಕ ಖಚಿತಪಡಿಸಿದ್ದಾರೆ.
52 ಕೆಜಿ ವಿಭಾಗದ ಬಾಕ್ಸಿಂಗ್ನಲ್ಲಿ ನಿಖಾತ್ ಜರೀನ್ ಅತ್ಯದ್ಭುತ ಪ್ರದರ್ಶನ ನೀಡಿದ್ದು, ಕ್ವಾರ್ಟರ್ ಫೈನಲ್ನಲ್ಲಿ ಎದುರಾಳಿ ವಿರುದ್ಧ ಭರ್ಜರಿ 5-0 ಅಂತರದಿಂದ ಜಯ ದಾಖಲಿಸಿದರು. ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆದ್ದಿರುವ ತೆಲಂಗಾಣದ ಬಾಕ್ಸರ್ ಜರೀನ್, ಇದೀಗ ಭಾರತಕ್ಕೆ ಮಹಿಳಾ ವಿಭಾಗದ ಬಾಕ್ಸಿಂಗ್ನಲ್ಲಿ ಮೊದಲ ಪದಕ ಖಚಿತಪಡಿಸಿದ್ದಾರೆ.
ಇದನ್ನೂ ಓದಿ: 2022 ಕಾಮನ್ವೆಲ್ತ್ ಗೇಮ್ಸ್ : ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಸೇರಿ ಇವರಿಗೆಲ್ಲ ಅವಕಾಶ
-
AMAZING PARVEEN! 🤩🔥
— Boxing Federation (@BFI_official) May 16, 2022 " class="align-text-top noRightClick twitterSection" data="
💪 #Parveen storms into the semifinals and confirmed 3️⃣rd medal for 🇮🇳 after putting up a belter performance to pack 🇹🇯’s Shoira at the #IBAWWC2022 !
Way to go, champ! 👏🔝#PunchMeinHaiDum #IstanbulBoxing#Boxing pic.twitter.com/jsm3lYaBDv
">AMAZING PARVEEN! 🤩🔥
— Boxing Federation (@BFI_official) May 16, 2022
💪 #Parveen storms into the semifinals and confirmed 3️⃣rd medal for 🇮🇳 after putting up a belter performance to pack 🇹🇯’s Shoira at the #IBAWWC2022 !
Way to go, champ! 👏🔝#PunchMeinHaiDum #IstanbulBoxing#Boxing pic.twitter.com/jsm3lYaBDvAMAZING PARVEEN! 🤩🔥
— Boxing Federation (@BFI_official) May 16, 2022
💪 #Parveen storms into the semifinals and confirmed 3️⃣rd medal for 🇮🇳 after putting up a belter performance to pack 🇹🇯’s Shoira at the #IBAWWC2022 !
Way to go, champ! 👏🔝#PunchMeinHaiDum #IstanbulBoxing#Boxing pic.twitter.com/jsm3lYaBDv
48 ಕೆಜಿ ವಿಭಾಗದಲ್ಲಿ ಭಾರತದ ನಿತು ಕಝಕಿಸ್ತಾನದ ಅಲುವಾ ವಿರುದ್ಧ 2-3 ಅಂತರದಿಂದ ಸೋಲು ಕಂಡರು. ಉಳಿದಂತೆ 57 ಕೆಜಿ ವಿಭಾಗದ ಬಾಕ್ಸಿಂಗ್ನಲ್ಲಿ ಭಾರತಕ್ಕೆ ಮನೀಷಾ ಎರಡನೇ ಪದಕ ಖಚಿತಪಡಿಸಿದ್ದು, ಪ್ರವೀಣ್(63 ಕೆಜಿ ವಿಭಾಗ) ಕೂಡ ಮತ್ತೊಂದು ಪದಕ ಭಾರತಕ್ಕೆ ಹೊತ್ತು ತರಲಿದ್ದಾರೆ.