ಬೊಗೋಟಾ(ಕೊಲಂಬಿಯಾ): ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು ಕೊಲಂಬಿಯಾದಲ್ಲಿ ನಡೆದ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲೂ ಬೆಳ್ಳಿ ಪದಕ ಜಯಿಸಿದರು. ಮೀರಾಬಾಯಿ ಒಟ್ಟು 200 ಕೆಜಿ (87 ಕೆಜಿ ಸ್ನ್ಯಾಚ್ + 113 ಕೆಜಿ ಕ್ಲೀನ್ & ಜರ್ಕ್) ಭಾರ ಎತ್ತಿದರು. ಚೀನಾದ ಜಿಯಾಂಗ್ ಹುಯಿಹುವಾ 93+113 ಭಾರ ಎತ್ತುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಇನ್ನೊಬ್ಬ ಚೀನಾ ವೇಟ್ಲಿಫ್ಟರ್ ಹೌ ಝಿಹುವಾ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟರು.
ಮೀರಾಬಾಯಿ ಚಾನು ಅವರು ಕ್ಲೀನ್ ಆ್ಯಂಡ್ ಜೆರ್ಕ್ನ 2ನೇ ಪ್ರಯತ್ನದಲ್ಲಿ ಮಣಿಕಟ್ಟಿನ ಸಮಸ್ಯೆಗೆ ಒಳಗಾದರು. ಆದರೂ ಪ್ರಯತ್ನ ಬಿಡದ ದಿಟ್ಟೆ ಓವರ್‌ಹೆಡ್ ಲಿಫ್ಟ್‌ನೊಂದಿಗೆ 113 ಕೆಜಿಯ ಭಾರವನ್ನು ಎತ್ತಿದರು. ಸ್ನ್ಯಾಚ್ ಸ್ಪರ್ಧೆಯಲ್ಲಿ ಮೀರಾ 87 ಕೆಜಿಯನ್ನು ಎತ್ತುವ ಮೂಲಕ ಬೆಳ್ಳಿ ಪದಕ ಪಡೆದರು.
ಇದು ಮೀರಾಬಾಯಿ ಅವರಿಗೆ ಎರಡನೇ ವಿಶ್ವ ಪದಕವಾಗಿದೆ. ಈ ಹಿಂದೆ 2017 ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 194 ಕೆಜಿ (85 +109 ಕೆಜಿ) ಎತ್ತಿ ಚಿನ್ನದ ಬೆಳೆ ಬೆಳೆದಿದ್ದರು. ಒಲಂಪಿಕ್ ಚಾಂಪಿಯನ್ ಚೀನಾದ ಹೌ ಝಿಹುವಾ ಅವರು ಸ್ನ್ಯಾಚ್‌ನಲ್ಲಿ 96 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್‌ನಲ್ಲಿ 118 ಕೆಜಿಯನ್ನು ಎತ್ತಿ ಮೀರಾಗಿಂತ 2 ಕೆಜಿ ಕಡಿಮೆಯಾಗಿ ಕಂಚಿನ ಪದಕ ಗಳಿಸಿದರು.
ಓದಿ: ರೊನಾಲ್ಡೊ ಇಲ್ಲದೇ ಗೆದ್ದ ಪೋರ್ಚುಗಲ್, ಸ್ಪೇನ್ 'ಶೂಟೌಟ್' ಮಾಡಿದ ಮೊರಾಕ್ಕೊ 16ರ ಘಟ್ಟಕ್ಕೆ ಲಗ್ಗೆ