ETV Bharat / sports

ಉದ್ದೀಪನ ಮದ್ದು ಸೇವನೆ ಸಾಬೀತು: ಟ್ರಿಪಲ್ ಜಂಪರ್ ಐಶ್ವರ್ಯಾಗೆ 4 ವರ್ಷ ನಿಷೇಧ - Triple jumper Aishwarya Babu

ಭಾರತದ ಟ್ರಿಪಲ್​ ಜಂಪರ್​ ಐಶ್ವರ್ಯಾ ಬಾಬು ನಿಷೇಧಿತ ಉದ್ದೀಪನ ಮದ್ದು ಸೇವಿಸಿ ಇದೀಗ ಅಮಾನತು ಶಿಕ್ಷೆಗೊಳಗಾಗಿದ್ದಾರೆ. ಕಳೆದ ವರ್ಷವೇ ತಾತ್ಕಾಲಿಕವಾಗಿ ಅಮಾನತು ಮಾಡಲಾಗಿತ್ತು. ಇದೀಗ ಪೂರ್ಣ ಶಿಕ್ಷೆ ಪ್ರಕಟಿಸಲಾಗಿದೆ.

triple jumper aishwarya
ಟ್ರಿಪಲ್ ಜಂಪರ್ ಐಶ್ವರ್ಯಾ
author img

By

Published : Mar 2, 2023, 7:11 AM IST

ನವದೆಹಲಿ: ಭಾರತದ ಅಗ್ರ ಟ್ರಿಪಲ್ ಜಂಪರ್ ಐಶ್ವರ್ಯಾ ಬಾಬು ಅವರು ನಿಷೇಧಿತ ಸ್ಟಿರಾಯ್ಡ್ ಬಳಸಿದ್ದಕ್ಕಾಗಿ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಏಜೆನ್ಸಿಯ (ನಾಡಾ) ಶಿಸ್ತು ಸಮಿತಿಯು 4 ವರ್ಷಗಳ ಕಾಲ ನಿಷೇಧ ಹೇರಿದೆ. ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಮಾರ್ಚ್​ 6 ರವರೆಗೆ ಅವಕಾಶ ನೀಡಲಾಗಿದೆ. ಕಳೆದ ವರ್ಷ ನಡೆದ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಉದ್ದೀಪನ ಮದ್ದು ತಪಾಸಣೆಯ ವೇಳೆ 25 ವರ್ಷದ ಅಥ್ಲೀಟ್ ಧನಾತ್ಮಕ ಫಲಿತಾಂಶ ನೀಡಿದ ಕಾರಣ ಅವರನ್ನು ಗೇಮ್ಸ್​​ನಿಂದ ಕೈಬಿಡಲಾಗಿತ್ತು.

ಆಟಗಾರ್ತಿಯನ್ನು ವಿಶ್ವ ಡೋಪಿಂಗ್ ವಿರೋಧಿ ಏಜೆನ್ಸಿಯ (ವಾಡಾ) ನಿಷೇಧಿತ ಪಟ್ಟಿಗೆ ಸೇರಿಸಿ, ತಾತ್ಕಾಲಿಕವಾಗಿ ಅಮಾನತು ಮಾಡಲಾಗಿತ್ತು. ಆ ಬಳಿಕ ಆಕೆಯ ಮಾದರಿಯನ್ನು ಸಂಗ್ರಹಿಸಿ ತಪಾಸಣೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಐಶ್ವರ್ಯಾ ನಿಷೇಧಿತ ಮದ್ದು ಸೇವಿಸಿದ್ದು ದೃಢಪಟ್ಟಿದೆ. ಧನಾತ್ಮಕ ವರದಿ ಬಂದ ಕಾರಣ ಇದೀಗ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ. ಕಳೆದ ವರ್ಷ ಜೂನ್ 13 ಮತ್ತು 14 ರಂದು ಚೆನ್ನೈನಲ್ಲಿ ನಡೆದ ರಾಷ್ಟ್ರೀಯ ಅಂತರ್​ರಾಜ್ಯ ಚಾಂಪಿಯನ್‌ಶಿಪ್‌ನಲ್ಲೂ ಆಟಗಾರ್ತಿ ಉದ್ದೀಪನ ಮದ್ದು ಸೇವಿಸಿದ್ದು ಕಂಡುಬಂದಿತ್ತು.

ಗಾಯಕ್ಕೆ ಪಡೆದ ಔಷಧ: ಐಶ್ವರ್ಯಾ ಸೇವಿಸಿದ ಔಷಧ "ಅನಾಬೊಲಿಕ್ ಸ್ಟೀರಾಯ್ಡ್" ಎಂದು ನಾಡಾ ಗುರುತಿಸಿದೆ. ಇದನ್ನು ವಾಡಾದ ನಿಷೇಧಿತ ಪಟ್ಟಿಯಲ್ಲಿ ಸೇರಿಸಲಾಗಿದೆ. ಕ್ರೀಡಾಪಟು ಚಿಕಿತ್ಸೆಗೂ ಮೊದಲು ಪೂರ್ವ ಮಾಹಿತಿ ನೀಡಿಲ್ಲ. ಚಿಕಿತ್ಸಕ ಬಳಕೆಯ ವಿನಾಯಿತಿಯನ್ನು (ಟಿಯುವಿ) ತೆಗೆದುಕೊಂಡಿಲ್ಲ ಎಂದು ಅದು ಹೇಳಿದೆ.

ಈ ಬಗ್ಗೆ ಸಮರ್ಥನೆ ನೀಡಿರುವ ಐಶ್ವರ್ಯಾ, "ತನ್ನ ಗಮನಕ್ಕೆ ಬಾರದೇ ಔಷಧ ಪಡೆಯಲಾಗಿದೆ. 2021 ರಲ್ಲಿ ಜಿಮ್‌ನಲ್ಲಿ ಕಸರತ್ತು ವೇಳೆ ಭುಜದ ನೋವಿಗೆ ತುತ್ತಾದೆ. ಚಿಕಿತ್ಸೆಯ ರೂಪದಲ್ಲಿ ಔಷಧ ಸೇವಿಸಿದ್ದೇನೆ. ಬಳಿಕ ಗಾಯದಿಂದ ಚೇತರಿಸಿಕೊಂಡೆ. ಇದಾದ ಬಳಿಕ ಚೆನ್ನೈನಲ್ಲಿ ನಡೆದ ರಾಷ್ಟ್ರೀಯ ಅಂತರ್​ರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ ಮತ್ತೆ ಭುಜದ ನೋವು ಕಾಣಿಸಿಕೊಂಡಿತು. ಈ ವೇಳೆ ಅದೇ ಚಿಕಿತ್ಸೆ ಪಡೆದುಕೊಂಡೆ" ಎಂದು ಹೇಳಿದ್ದಾರೆ.

"ಗಾಯದ ನೋವು ಕಡಿಮೆಯಾಗಲು ಸಹೋದ್ಯೋಗಿಯೊಬ್ಬರು ನೀಡಿದ ಸಲಹೆಯ ಆಧಾರದ ಮೇಲೆ ಸ್ಟಿರಾಯ್ಡ್​ ಪಡೆದುಕೊಂಡಿದ್ದೇನೆ. ಅದು ಸಂಪೂರ್ಣ ಸುರಕ್ಷಿತ ಮತ್ತು ನೋವು ತೊಡೆದುಹಾಕಲು, ಸ್ನಾಯುಗಳನ್ನು ಬಲಪಡಿಸುತ್ತದೆ ಎಂದಿದ್ದರು. ಹೀಗಾಗಿ ಆ ಔಷಧವನ್ನು ಸೇವಿಸಿದೆ" ಎಂದು ಐಶ್ವರ್ಯಾ ತಿಳಿಸಿದ್ದಾರೆ.

ಕ್ರೀಡಾಪಟು ನಿಯಮ ಉಲ್ಲಂಘನೆ: ಚಿಕಿತ್ಸೆಗಾಗಿ ಐಶ್ವರ್ಯಾ ಅವರು ಆಸ್ಪತ್ರೆ ಅಥವಾ ನೋಂದಾಯಿತ ವೈದ್ಯರನ್ನು ಏಕೆ ಸಂಪರ್ಕಿಸಲಿಲ್ಲ ಎಂದು ನಾಡಾದ ಶಿಸ್ತು ಸಮಿತಿ ಪ್ರಶ್ನಿಸಿದೆ. ತನ್ನ ಸಹ ಆಟಗಾರನ ಸಲಹೆಯ ಮೇರೆಗೆ ಮಾತ್ರೆಗಳನ್ನು ತೆಗೆದುಕೊಂಡಿದ್ದಾರೆ. ಅದಕ್ಕೂ ಮೊದಲು ಅವರು ವೈದ್ಯರನ್ನು ಸಂಪರ್ಕಿಸಬೇಕಿತ್ತು. ಇದು ಕ್ರೀಡಾಪಟು ನಿಯಮ ಉಲ್ಲಂಘನೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ನಾಡಾ ಹೇಳಿದೆ.

"ಐಶ್ವರ್ಯಾರನ್ನು ಡೋಪಿಂಗ್ ವಿರೋಧಿ ನಿಯಮಗಳ ಅನುಸಾರವಾಗಿದೆ. 4 ವರ್ಷಗಳ ಕಾಲ ಎಲ್ಲಾ ಪ್ರಕಾರದ ಆಟಗಳಿಂದ ಅವರನ್ನು ಅಮಾನತು ಮಾಡಲಾಗುವುದು. ಅನರ್ಹತೆಯ ಅವಧಿಯು ತಾತ್ಕಾಲಿಕ ಅಮಾನತು ದಿನಾಂಕದಿಂದ ಪ್ರಾರಂಭವಾಗುತ್ತದೆ" ಎಂದು ನಾಡಾ ಶಿಸ್ತು ಸಮಿತಿ ಹೇಳಿದೆ. ಕಳೆದ ವರ್ಷ ಜುಲೈನಲ್ಲಿ ತಾತ್ಕಾಲಿಕವಾಗಿ ಅಮಾನತುಗೊಂಡಿದ್ದ ಐಶ್ವರ್ಯಾ ಈಗಾಗಲೇ ತನ್ನ ನಾಲ್ಕು ವರ್ಷಗಳ ನಿಷೇಧದ 6 ತಿಂಗಳನ್ನು ಪೂರೈಸಿದ್ದಾರೆ.

ಐಶ್ವರ್ಯಾ ಪಡೆದ ಎಲ್ಲ ಪದಕಗಳು, ಅಂಕಗಳು ಮತ್ತು ಬಹುಮಾನಗಳನ್ನು ಮುಟ್ಟುಗೋಲು ಹಾಕಿಕೊಂಡು ಈವೆಂಟ್‌ನಲ್ಲಿ ಗಳಿಸಿದ ವೈಯಕ್ತಿಕ ಪ್ರಶಸ್ತಿಗಳನ್ನೂ ಜಪ್ತಿ ಮಾಡಲಾಗುವುದು ಎಂದು ಸಮಿತಿ ಹೇಳಿದೆ. ಐಶ್ವರ್ಯಾ ಚೆನ್ನೈನಲ್ಲಿ ನಡೆದ ಚಾಂಪಿಯನ್‌ಶಿಪ್‌ನಲ್ಲಿ 14.14 ಮೀಟರ್‌ಗಳ ರಾಷ್ಟ್ರೀಯ ದಾಖಲೆ ಮುರಿದು ಟ್ರಿಪಲ್ ಜಂಪ್ ಚಿನ್ನ ಗೆದ್ದಿದ್ದರು.

ಇದನ್ನೂ ಓದಿ: ಧೋನಿ ಪ್ರಭಾವಿ ನಾಯಕ, ಅತ್ಯುತ್ತಮ ತಂತ್ರಗಾರರಲ್ಲಿ ಒಬ್ಬರು: ಫಾಫ್ ಡು ಪ್ಲೆಸಿಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.