ಟೋಕಿಯೋ: ಭಾರತದ ಶಟ್ಲರ್ ಕೃಷ್ಣ ನಾಗರ್ ಗುರವಾರ ಟೋಕಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಗೆಲುವಿನ ಮೂಲಕ ತಮ್ಮ ಅಭಿಯಾನ ಆರಂಭಿಸಿದ್ದಾರೆ. ಅವರು ಪುರುಷರ ಸಿಂಗಲ್ಸ್ SH6 ನಲ್ಲಿ 22-20, 21-10ರಲ್ಲಿ ಮಲೇಷ್ಯಾದ ದಿದಿನ್ ತಾರೆಸೋಹ್ ವಿರುದ್ಧ ಗೆಲುವು ಸಾಧಿಸಿದರು.
ಬಿ ಗುಂಪಿನ ಈ ಪಂದ್ಯದಲ್ಲಿ ಕೃಷ್ಣ ನೇರ ಸೆಟ್ಗಳ ಮೂಲಕ ಕೇವಲ 32 ನಿಮಿಷಗಳಲ್ಲಿ ಪಂದ್ಯವನ್ನು ಗೆದ್ದುಕೊಂಡರು. ಭಾರತೀಯ ಶೆಟ್ಲರ್ ಮುಂದಿನ ಪಂದ್ಯದಲ್ಲಿ ಬ್ರೆಜಿಲ್ನ ಜಿವಿ ಟವರೆಸ್ ವಿರುದ್ಧ ಗುಂಪಿನ 2ನೇ ಪಂದ್ಯವನ್ನಾಡಲಿದ್ದಾರೆ.
ಮಹಿಳೆಯರ SU5 ವಿಭಾಗದ ಸಿಂಗಲ್ಸ್ನಲ್ಲಿ ಪಲಕ್ ಕೊಹ್ಲಿ ತನ್ನ ಎರಡನೇ ಲೀಗ್ ಪಂದ್ಯದಲ್ಲಿ ಟರ್ಕಿಯ ಜಹ್ರಾ ಬಗ್ಲರ್ ವಿರುದ್ಧ 21-12, 21-18 ರಲ್ಲಿ ಗೆಲುವು ಸಾಧಿಸಿದರು.
ಆದರೆ, ಇದಕ್ಕೂ ಮೊದಲು ನಡೆದ ಡಬಲ್ಸ್ನ ಮೊದಲ ಲೀಗ್ ಪಂದ್ಯದಲ್ಲಿ ಪಲಕ್ ಮತ್ತು ಪಾರುಲ್ ಪಾರ್ಮರ್ ಚೀನಾದ ಹುಯಿಹುಯ್ ಎಂಎ ಮತ್ತು ಹೆಫಾಂಗ್ ಚೆಂಗ್ ವಿರುದ್ಧ ಸೋಲು ಕಂಡರು
ಪುರುಷರ ವಿಭಾಗದಲ್ಲಿ ತರುಣ್ ಧಿಲ್ಲಾನ್ ಮತ್ತು ಐಎಎಸ್ ಅಧಿಕಾರಿಯಾಗಿರುವ ಕನ್ನಡಿಗ ಸುಹಾಸ್ ಎಲ್ ಯತಿರಾಜ್ ಕೂಡ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಾರೆ. ತರುಣ್ ಥಾಯ್ಲೆಂಡ್ ಶಟ್ಲರ್ ಸಿರಿಪಾಂಗ್ ವಿರುದ್ಧ 21-7, 21-13ರಲ್ಲಿ ಗೆಲುವು ಸಾಧಿಸಿದರೆ, ಸುಹಾಸ್ ಜರ್ಮನಿಯ ಜಾನ್ ನಿಕ್ಲಾಸ್ ವಿರುದ್ಧ 21-9, 21-3ರಲ್ಲಿ ಸುಲಭ ಜಯ ಸಾಧಿಸಿದರು.
38 ವರ್ಷದ ಸುಹಾಸ್ ಹಾಸನ ಜಿಲ್ಲಿಯ ಲಾಲಿನಕೆರೆಯವರು. ಪ್ರಸ್ತುತ ಅವರು ಉತ್ತರ ಪ್ರದೇಶದಲ್ಲಿ ಗೌತಮ ಬುದ್ದ ನಗರದಲ್ಲಿ ಐಎಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನು ಓದಿ:ಕ್ಯಾನೋ ಸ್ಪ್ರಿಂಟ್ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಭಾರತದ ಪ್ರಾಚಿ ಯಾದವ್