ನವದೆಹಲಿ: ಭಾರತದ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ಬುರ್ಖಾದಲ್ಲಿ ಕಾಣಿಸಿಕೊಂಡಿದ್ದಾರೆ. ನಿವೃತ್ತಿ ಬಳಿಕ ದೇಶ-ವಿದೇಶಗಳ ಪ್ರವಾಸದಲ್ಲಿರುವ ಅವರು, ಇದೀಗ ತಮ್ಮ ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತಿದ್ದಾರೆ. ತಮ್ಮ ಬಗೆ ಬಗೆಯ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು ಅದರಲ್ಲಿನ ಕೆಲವು ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಜಾಗ ಪಡೆಯುತ್ತಿವೆ. ಅದರಲ್ಲಿ ಬುರ್ಖಾ ಧರಿಸಿ ಕಾಣಿಸಿಕೊಂಡಿರುವ ಫೋಟೋವೊಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಬಾಲಿವುಡ್ ಕ್ವೀನ್‌ಗಿಂದು ಹುಟ್ಟುಹಬ್ಬದ ಸಂಭ್ರಮ: 'ನನ್ನಿಂದ ದುಃಖವಾಗಿದ್ದರೆ ಕ್ಷಮಿಸಿ'- ಕಂಗನಾ ರಣಾವತ್
ಈ ಫೋಟೋ ನೋಡಿದ ನೆಟಿಜನ್ಗಳು, ತರಹೇವಾರು ಕಾಮೆಂಟ್ ಮಾಡಿದ್ದಾರೆ. 'ಮಕ್ಕಳ ಫೋಟೋ ಸುಂದರವಾಗಿ ಮೂಡಿ ಬಂದಿದೆ. ಆದರೆ, ನಿಮ್ಮ ಪತಿ ಶೋಯೆಬ್ ಮಲಿಕ್ ಫೋಟೋದಲ್ಲಿ ಕಾಣಿಸಿಕೊಂಡಿದ್ದರೆ ಇನ್ನೂ ಸೊಗಸಾಗಿ ಇರುತ್ತಿತ್ತು. ಅವರೀಗ ಎಲ್ಲಿದ್ದಾರೆ' ಎಂದೆಲ್ಲ ಕಾಮೆಂಟ್ ಮಾಡಿ ಕೇಳಲಾಂಭಿಸಿದ್ದಾರೆ. ಆದರೆ, ಸಾನಿಯಾ ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಂಡಿಲ್ಲ.
ಪವಿತ್ರ ರಂಜಾನ್ ಮಾಸ ಹಿನ್ನೆಲೆ ಸಾನಿಯಾ ಮಿರ್ಜಾ ಅವರು ಕುಟುಂಬ ಸಮೇತ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದಾರೆ. ಧಾರ್ಮಿಕ ಕ್ಷೇತ್ರಗಳ ಸೌಂದರ್ಯ ಸವಿಯುತ್ತಿರುವ ಅವರು, ಅಲ್ಲಿಯ ಕೆಲವು ಸುಂದರ ಫೋಟೋಗಳನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಸ್ವತಃ ಸಾನಿಯಾ ಮಿರ್ಜಾ ಸೆಲ್ಫಿ ತೆಗೆದುಕೊಳ್ಳುತ್ತಿರುವ ಫೋಟೋ ಜಾಲತಾಣದಲ್ಲಿ ವೈರಲ್ ಆಗಿದೆ.
ಒಂದು ಫೋಟೋದಲ್ಲಿ ಸಾನಿಯಾ ಇಡೀ ಕುಟುಂಬದೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರೆ ಮತ್ತೊಂದರಲ್ಲಿ ಅವರು ತಮ್ಮ ಮಗುವನ್ನು ಮಡಿಲಲ್ಲಿಟ್ಟುಕೊಂಡು ಕನ್ನಡಿ ಮುಂದೆ ಸೆಲ್ಫಿ ತೆಗೆದುಕೊಳ್ಳುತ್ತಿರುವುದನ್ನು ಕಾಣಬಹುದು. ಈ ಅಪರೂಪದ ಫೋಟೋಗಳಲ್ಲಿ ಸಾನಿಯಾ 'ಅಲ್ಲಾ ನಮ್ಮ ಪ್ರಾರ್ಥನೆಗಳನ್ನು ಸ್ವೀಕರಿಸಿ' ಎಂದು ಶೀರ್ಷಿಕೆ ಕೂಡ ಬರೆದುಕೊಂಡಿದ್ದಾರೆ. ತುಂಬು ಕುಟುಂಬದ ಫೋಟೋ ಇದ್ದರೆ ಇನ್ನೂ ಸುಂದರವಾಗಿರುತ್ತಿತ್ತು ಎಂದು ಕೆಲವರು ಶೋಯೆಬ್ ಮಲಿಕ್ ಬಗ್ಗೆ ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: 47ನೇ ವಯಸ್ಸಿಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಲಯಾಳಂ ನಟಿ ಆರ್ಯ ಪಾರ್ವತಿಯ ತಾಯಿ!
ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಇತ್ತೀಚೆಗೆ ದುಬೈನಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಮೂಲಕ ತಮ್ಮ ವೃತ್ತಿ ಜೀವನದ ಕೊನೆಯ ಟೆನಿಸ್ ಗ್ರ್ಯಾಂಡ್ ಸ್ಲಾಮ್ ಮುಗಿಸಿದರು. 'ನನ್ನ ವೃತ್ತಿಪರ ವೃತ್ತಿಜೀವನವು ಮೆಲ್ಬೋರ್ನ್‌ನಲ್ಲಿ ಪ್ರಾರಂಭವಾಯಿತು. ಗ್ರ್ಯಾಂಡ್ ಸ್ಲಾಮ್ ವೃತ್ತಿಜೀವನವನ್ನು ಕೊನೆಗೊಳಿಸಲು ಇದಕ್ಕಿಂತ ಉತ್ತಮ ಸ್ಥಳವಿರದು. ಇದು ನನಗೆ ತುಂಬಾ ವಿಶೇಷವಾದ ಸ್ಥಳ. ನನ್ನ ಮಗ ನೋಡುತ್ತಿರುವಾಗಲೇ ನಾನು ಗ್ರ್ಯಾಂಡ್ ಸ್ಲಾಮ್ ಫೈನಲ್ ಪಂದ್ಯ ಆಡುತ್ತೇನೆ ಎಂದು ಊಹಿಸಿರಲಿಲ್ಲ' ಎಂದು ಪಂದ್ಯದ ನಂತರ ಅವರು ಭಾವುಕರಾಗಿದ್ದರು.
ಇದೇ ಖುಷಿಯಲ್ಲಿ ಇತ್ತೀಚೆಗೆ ಹೈದರಾಬಾದ್ನ ಹೈಟೆಕ್ ಸಿಟಿಯ ಹೋಟೆಲ್ ಒಂದರಲ್ಲಿ ಭರ್ಜರಿ ಔತಣಕೂಟ ಆಯೋಜನೆ ಮಾಡಿದ್ದ ಅವರು, ಬಾಲಿವುಡ್, ಟಾಲಿವುಡ್ ಮತ್ತು ಕ್ರೀಡಾ ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಿದ್ದರು. ತೆಲಂಗಾಣ ಪೌರಾಡಳಿತ ಸಚಿವ ಕೆಟಿಆರ್, ನಟ ಮಹೇಶ್ ಬಾಬು ದಂಪತಿ, ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ದಂಪತಿ, ನಟಿ ನೇಹಾ ಧೂಪಿಯಾ, ನೃತ್ಯ ನಿರ್ದೇಶಕಿ ಫರಾಖಾನ್, ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್, ಮಾಜಿ ಕ್ರಿಕೆಟಿಗರಾದ ಇರ್ಫಾನ್ ಪಠಾಣ್ ದಂಪತಿ, ಯುವರಾಜ್ ಸಿಂಗ್, ಅಜರುದ್ದೀನ್ ಮತ್ತಿತರರು ಹಾಜರಾಗಿದ್ದರು.