ETV Bharat / sports

ಚಿನ್ನದ ಕನಸಿಗೆ ಅಡ್ಡಿಯಾದ ಗಾಯ: ಬೆಳ್ಳಿ ಗೆದ್ದು ತಿರಂಗ ಹಾರಿಸಿದ ಬಾಕ್ಸರ್‌ ಶಿವ ಥಾಪಾ - etv bharat kannada

ಪ್ರತಿಷ್ಠಿತ ಎಎಸ್‌ಬಿಸಿ ಏಷ್ಯನ್ ಎಲೈಟ್ ಬಾಕ್ಸಿಂಗ್ 2022 ಪಂದ್ಯಾವಳಿಯಲ್ಲಿ ಗುವಾಹಟಿಯ ಬಾಕ್ಸರ್ ಶಿವ ಥಾಪಾ ಅವರು ಬೆಳ್ಳಿ ಗೆದ್ದಿದ್ದಾರೆ. ಇದು ಎಎಸ್‌ಬಿಸಿ ಏಷ್ಯನ್ ಎಲೈಟ್ ಬಾಕ್ಸಿಂಗ್​ನಲ್ಲಿ ಅವರ ಒಟ್ಟಾರೆ ಆರನೇ ಪದಕವಾಗಿದೆ.

Shiva Thapa creates history with silver in Asian Boxing Championships
ಏಷ್ಯನ್ ಎಲೈಟ್ ಬಾಕ್ಸಿಂಗ್: ಚಿನ್ನ ಗೆದ್ದು ಇತಿಹಾಸ ಬರೆದ ಭಾರತದ ಶಿವ ಥಾಪಾ
author img

By

Published : Nov 13, 2022, 6:51 AM IST

ಅಮ್ಮನ್(ಜೋರ್ಡಾನ್‌): ಜೋರ್ಡಾನ್‌ನ ಅಮ್ಮನ್‌ನಲ್ಲಿ ಶನಿವಾರ ನಡೆದ ಎಎಸ್‌ಬಿಸಿ ಏಷ್ಯನ್ ಎಲೈಟ್ ಬಾಕ್ಸಿಂಗ್ 2022 ಚಾಂಪಿಯನ್‌ಶಿಪ್​ನಲ್ಲಿ ಭಾರತದ ಸ್ಟಾರ್ ಬಾಕ್ಸರ್ ಶಿವ ಥಾಪಾ ಐತಿಹಾಸಿಕ ಬೆಳ್ಳಿ ಪದಕ ಜಯಿಸಿದ್ದಾರೆ. ಭಾರತದ ಬಾಕ್ಸರ್​​ಗಳು ಒಟ್ಟಾರೆ 12 ಪದಕಗಳೊಂದಿಗೆ ಅದ್ಭುತ ಅಭಿಯಾನ ಮುಗಿಸಿದರು.

ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಗುವಾಹಟಿಯ ಬಾಕ್ಸರ್ ಥಾಪಾ ಅವರಿಗಿದು ಮೂರನೇ ಬೆಳ್ಳಿ ಮತ್ತು ಒಟ್ಟಾರೆ ಆರನೇ ಪದಕವಾಗಿದೆ. ಈ ಮೂಲಕ ಚಾಂಪಿಯನ್‌ಶಿಪ್‌ ಇತಿಹಾಸದಲ್ಲಿ ಥಾಪಾ ಅತ್ಯಂತ ಯಶಸ್ವಿ ಪುರುಷ ಪ್ಯೂಜಿಲಿಸ್ಟ್‌ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ಹಿಂದೆ 2017 ಮತ್ತು 2021ರಲ್ಲಿ ಅವರು ಬೆಳ್ಳಿ ಪದಕ ಜಯಿಸಿದ್ದರು. 2013ರ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದಿದ್ದ ಥಾಪಾ, 2015 ಮತ್ತು 2019ರಲ್ಲಿ ಕಂಚಿನ ಪದಕಗಳಿಗೆ ಕೊರಳೊಡ್ಡಿದ್ದರು.

ಪುರುಷರ 63.5 ಕೆಜಿ ಫೈನಲ್‌ನಲ್ಲಿ ಉಜ್ಬೇಕಿಸ್ತಾನ್‌ನ ಅಬ್ದುಲ್ಲೇವ್ ರುಸ್ಲಾನ್ ವಿರುದ್ಧ ಥಾಪಾ ಎಚ್ಚರಿಕೆಯ ಆರಂಭ ಮಾಡಿದರು. ಪಂದ್ಯವು ಮುಂದುವರೆದಂತೆ ಆತ್ಮವಿಶ್ವಾಸದಿಂದ ಮುನ್ನುಗ್ಗಿದ ಅವರಿಗೆ ಚಿನ್ನ ಗೆಲ್ಲಲು ಸಾಧ್ಯವಾಗಲಿಲ್ಲ. ಚಿನ್ನದ ಬೇಟೆಗೆ ಕಾದಾಡಿದ ಅವರ ಕನಸಿಗೆ ಗಾಯವು ತಣ್ಣೀರೆರಚಿತು. ಪಂದ್ಯದ ಎರಡನೇ ಸುತ್ತಿನಲ್ಲಿ ಬಲ ಮೊಣಕಾಲಿಗೆ ಗಾಯವಾದ ಕಾರಣ ಚಿನ್ನದ ಪದಕದಿಂದ ವಂಚಿತರಾದರು. ಪಂದ್ಯದಲ್ಲಿ ಮುಂದುವರಿಯುವ ಸ್ಥಿತಿ ಇಲ್ಲದ ಕಾರಣ ಆರ್​ಎಸ್​ಸಿ(RSC) ತೀರ್ಪಿನೊಂದಿಗೆ ರೆಫರಿಗಳು ಉಜ್ಬೇಕಿಸ್ತಾನ್‌ನ ಅಬ್ದುಲ್ಲೇವ್ ರುಸ್ಲಾನ್ ಅವರನ್ನು ವಿಜೇತ ಎಂದು ಘೋಷಿಸಿದರು.

ಅಂತಿಮ ದಿನದ ಬೆಳ್ಳಿ ಪದಕದೊಂದಿಗೆ ಚಾಂಪಿಯನ್‌ಶಿಪ್​ನಲ್ಲಿ ಭಾರತವು ಒಟ್ಟು 12 ಪದಕ ಗೆದ್ದಿದೆ. ಇದರಲ್ಲಿ ನಾಲ್ಕು ಚಿನ್ನ, ಎರಡು ಬೆಳ್ಳಿ ಮತ್ತು ಆರು ಕಂಚು ಸೇರಿವೆ. 12 ಪದಕಗಳ ಪೈಕಿ, ಮಹಿಳಾ ಪ್ಯೂಜಿಲಿಸ್ಟ್‌ಗಳು 7 ಪದಕ ಜಯಿಸಿರುವುದು ವಿಶೇಷವಾಗಿದೆ. ಈ ಮೂಲಕ ಭಾರತವು ಮಹಿಳೆಯರ ವಿಭಾಗದಲ್ಲಿ ನಂ.1 ಸ್ಥಾನ ಪಡೆದುಕೊಂಡಿತು. ಮತ್ತು ಕಝಕಿಸ್ತಾನ್ ಮೂರು ಚಿನ್ನದ ಪದಕಗಳೊಂದಿಗೆ ಎರಡನೇ ಸ್ಥಾನ ಗಳಿಸಿತು. 27 ದೇಶಗಳ 257 ಅಗ್ರ ಬಾಕ್ಸರ್‌ಗಳು ಭಾಗವಹಿಸಿದ್ದ 2022ರ ಚಾಂಪಿಯನ್‌ಶಿಪ್‌ ತೀವ್ರ ಪೈಪೋಟಿಯಿಂದ ಕೂಡಿತ್ತು.

ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಲೊವ್ಲಿನಾ ಬೊರ್ಗೊಹೈನ್ (75 ಕೆಜಿ) ಆಲ್ಫಿಯಾ ಪಠಾಣ್ (+81 ಕೆಜಿ), ಸವೀಟಿ ಬೂರಾ (81 ಕೆಜಿ) ಮತ್ತು ಪರ್ವೀನ್ ಹೂಡಾ (63 ಕೆಜಿ) ಅವರು ಚಿನ್ನದ ಪದಕ ಗೆದ್ದರು. ಮಿನಾಕ್ಷಿ (52 ಕೆಜಿ) ಬೆಳ್ಳಿ ಗೆದ್ದರೆ, ಅಂಕುಶಿತಾ ಬೊರೊ (66 ಕೆಜಿ) ಮತ್ತು ಪ್ರೀತಿ ದಹಿಯಾ (57 ಕೆಜಿ) ತಲಾ ಕಂಚಿನ ಪದಕ ಪಡೆದರು.

ಮತ್ತೊಂದೆಡೆ, ಪುರುಷರ ವಿಭಾಗದಲ್ಲಿ ನರೇಂದರ್ (+92 ಕೆಜಿ), ಸುಮಿತ್ (75 ಕೆಜಿ), ಮೊಹಮ್ಮದ್ ಹುಸಾಮುದ್ದೀನ್ (57 ಕೆಜಿ) ಮತ್ತು ಗೋವಿಂದ್ ಕುಮಾರ್ ಸಹಾನಿ (48 ಕೆಜಿ) ಕಂಚಿನ ಪದಕಕ್ಕೆ ಕೊರಳೊಡ್ಡಿದರು.

ಇದನ್ನೂ ಓದಿ: ಸೋಲು ಒಗ್ಗಟ್ಟಾಗಿ ಹಿಮ್ಮೆಟ್ಟಿಸಿ: ಭಾರತದ ಬ್ಲೂ ಬಾಯ್ಸ್​ಗೆ ಧೈರ್ಯ ನೀಡಿದ ಸಚಿನ್ ತೆಂಡೂಲ್ಕರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.