ಹೈದರಾಬಾದ್: ದುಬೈ ಟೆನಿಸ್ ಚಾಂಪಿಯನ್‌ಶಿಪ್‌ನೊಂದಿಗೆ ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ವೃತ್ತಿಪರ ಟೆನಿಸ್‌ನಿಂದ ನಿವೃತ್ತಿಯಾಗಿದ್ದಾರೆ. ಈಗ ಅವರು ತಮ್ಮ ತವರು ರಾಜ್ಯ ತೆಲಂಗಾಣದ ಹೈದರಾಬಾದ್‌ನಲ್ಲಿ ವಿದಾಯ ಪ್ರದರ್ಶನ ಪಂದ್ಯ ಆಡಲಿದ್ದಾರೆ. ಇಂದು ಇಲ್ಲಿನ ಲಾಲ್ ಬಹದ್ದೂರ್ ಕ್ರೀಡಾಂಗಣದಲ್ಲಿ ಸಾನಿಯಾ ಕೊನೆಯ ವಿದಾಯದ ಮ್ಯಾಚ್ ಆಡಲಿದ್ದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.
"18-20 ವರ್ಷಗಳ ಹಿಂದೆ ನಾನು ಆಡಲು ಪ್ರಾರಂಭಿಸಿದ ಅದೇ ಸ್ಥಳದಲ್ಲಿ ನನ್ನ ಕೊನೆಯ ಟೆನಿಸ್ ಪಂದ್ಯ ಆಡಲಿದ್ದೇನೆ. ನನ್ನೆಲ್ಲಾ ಸ್ನೇಹಿತರು, ಕುಟುಂಬ ಮತ್ತು ಅಭಿಮಾನಿಗಳ ಮುಂದೆ ಕೊನೆಯ ಬಾರಿಗೆ ಆಡುತ್ತೇನೆ" ಎಂದು ಅವರು ಭಾವುಕರಾಗಿದ್ದಾರೆ.
ಸಾನಿಯಾ ಮಿರ್ಜಾ ಎರಡು ಪ್ರದರ್ಶನ ಪಂದ್ಯಗಳನ್ನು ಆಡಲಿದ್ದಾರೆ. ಈ ಪೈಕಿ ಮೊದಲ ಪಂದ್ಯದಲ್ಲಿ ನಟರು, ಕ್ರಿಕೆಟಿಗರು ಮತ್ತು ಟೆನಿಸ್ ಆಟಗಾರರು ಭಾಗವಹಿಸುವರು. ಎರಡು ತಂಡಗಳಲ್ಲಿ ಒಂದನ್ನು ಸಾನಿಯಾ ಮುನ್ನಡೆಸಿದರೆ, ಇನ್ನೊಂದನ್ನು ಭಾರತದ ಮತ್ತೋರ್ವ ಪ್ರಖ್ಯಾತ ಟೆನಿಸ್ ತಾರೆ ರೋಹನ್ ಬೋಪಣ್ಣ ಮುನ್ನಡೆಸಲಿದ್ದಾರೆ. ಸಾನಿಯಾ ಮಿರ್ಜಾ-ರೋಹನ್ ಬೋಪಣ್ಣ ಮತ್ತು ಇವಾನ್ ಡೊಡಿಗ್-ಬೆಥನಿ ಮ್ಯಾಟೆಕ್-ಸ್ಯಾಂಡ್ಸ್ ನಡುವೆ ಮಿಶ್ರ ಡಬಲ್ಸ್ ಪಂದ್ಯ ನಡೆಯಲಿದೆ. ರೋಹನ್ ಬೋಪಣ್ಣ, ಸ್ಯಾಂಡ್ಸ್ ಮತ್ತು ದೊಡಿಗ್ ಈ ಹಿಂದೆ ಸಾನಿಯಾ ಮಿರ್ಜಾ ಅವರೊಂದಿಗೆ ಪಂದ್ಯಗಳನ್ನು ಆಡಿದ್ದಾರೆ.
-
Coming back to where it all started 20 years ago! Hyderabad, tickets are live! Get yours now on https://t.co/wtGdusvdgx pic.twitter.com/QkAljuNaOz
— Sania Mirza (@MirzaSania) February 28, 2023 " class="align-text-top noRightClick twitterSection" data="
">Coming back to where it all started 20 years ago! Hyderabad, tickets are live! Get yours now on https://t.co/wtGdusvdgx pic.twitter.com/QkAljuNaOz
— Sania Mirza (@MirzaSania) February 28, 2023Coming back to where it all started 20 years ago! Hyderabad, tickets are live! Get yours now on https://t.co/wtGdusvdgx pic.twitter.com/QkAljuNaOz
— Sania Mirza (@MirzaSania) February 28, 2023
ಸಾನಿಯಾ ಮತ್ತು ಬೋಪಣ್ಣ ದೀರ್ಘಕಾಲ ಒಟ್ಟಿಗೆ ಟೆನಿಸ್ ಆಡಿದವರು. 2016ರ ರಿಯೊ ಒಲಿಂಪಿಕ್ಸ್‌ನ ಮಿಶ್ರ ಡಬಲ್ಸ್‌ನಲ್ಲಿ ಇವರಿಬ್ಬರ ಜೋಡಿ ನಾಲ್ಕನೇ ಸ್ಥಾನದಲ್ಲಿತ್ತು. ಈ ಜೋಡಿಯು ವರ್ಷದ ಆರಂಭದಲ್ಲಿ ಆಸ್ಟ್ರೇಲಿಯನ್ ಓಪನ್‌ನ ಫೈನಲ್‌ಗೆ ತಲುಪಿತ್ತು. ಇದರಲ್ಲಿ ಅವರು ಸೋಲು ಅನುಭವಿಸಿದ್ದರು. ಸಾನಿಯಾ ತಮ್ಮ ವೃತ್ತಿಜೀವನದಲ್ಲಿ 44 ವುಮೆನ್ಸ್ ಟೆನಿಸ್ ಅಸೋಸಿಯೇಶನ್ (WTA) ಚಾಂಪಿಯನ್‌ಶಿಪ್‌ಗಳನ್ನು (ಡಬಲ್ಸ್‌ನಲ್ಲಿ 43 ಮತ್ತು ಸಿಂಗಲ್ಸ್‌ನಲ್ಲಿ ಒಂದು) ಗೆದ್ದಿದ್ದಾರೆ. ಮಹಿಳೆಯರ ಡಬಲ್ಸ್ ವುಮೆನ್ಸ್ ಟೆನಿಸ್ ಅಸೋಸಿಯೇಶನ್ ಶ್ರೇಯಾಂಕದಲ್ಲಿ ವಿಶ್ವದ ನಂಬರ್ 1 ಆಟಗಾರ್ತಿಯೂ ಹೌದು.
ಬಾಲಿವುಡ್ ಮತ್ತು ಟಾಲಿವುಡ್ ತಾರೆಯರೂ ಸೇರಿದಂತೆ ಹಲವಾರು ತಾರೆಯರು ವಿದಾಯ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸಾನಿಯಾ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು ವಿವಾಹವಾಗಿದ್ದು, ದಂಪತಿಗೆ ಇಜಾನ್ ಎಂಬ ಮಗ ಇದ್ದಾನೆ. ಇನ್ನು, ಪ್ರಸ್ತುತ ನಡೆಯುತ್ತಿರುವ ಚೊಚ್ಚಲ ವನಿತೆಯರ ಕ್ರಿಕೆಟ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಮೆಂಟರ್ ಕೂಡಾ ಆಗಿದ್ದಾರೆ ಸಾನಿಯಾ.
ಕೊನೇಯ ಆಸ್ಟ್ರೇಲಿಯನ್ ಓಪನ್ನಲ್ಲಿ ಸೋಲು: ಮಹಿಳೆಯರ ಡಬಲ್ಸ್‌ನಲ್ಲಿ ನಿರಾಸೆ ಮೂಡಿಸಿದರೂ ಸಹ ಮಿಶ್ರ ಡಬಲ್ಸ್‌ನಲ್ಲಿ ಭಾರತದ ಮತ್ತೊಬ್ಬ ಆಟಗಾರ ರೋಹನ್ ಬೋಪಣ್ಣ ಅವರೊಂದಿಗೆ ಅವರು ಫೈನಲ್ ತಲುಪಿದ್ದರು. ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಸಾನಿಯಾ-ಬೋಪಣ್ಣ ಜೋಡಿ 6-7, 2-6ರಲ್ಲಿ ಬ್ರೆಜಿಲ್‌ನ ಸ್ಟೆಫಾನಿ-ರಾಫೆಲೊ ಜೋಡಿಯೆದುರು ಪರಾಭವಗೊಂಡಿತ್ತು. ಇದರೊಂದಿಗೆ ಸಾನಿಯಾ ಗ್ರ್ಯಾನ್ ಸ್ಲಾಮ್ ವೃತ್ತಿಜೀವನ ಕೊನೆಗೊಳಿಸಿದ್ದಾರೆ.
6 ಬಾರಿಯ ಗ್ರ್ಯಾಂಡ್ ಸ್ಲಾಮ್ ಒಡತಿ ಎರಡು ಬಾರಿ ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದಾರೆ. 2009ರಲ್ಲಿ ಮಿಶ್ರ ಡಬಲ್ಸ್ ಮತ್ತು 2016 ರಲ್ಲಿ ಮಹಿಳೆಯರ ಡಬಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಸಾನಿಯಾ ಈವರೆಗೆ ಒಟ್ಟು 43 ಡಬಲ್ಸ್ ಪ್ರಶಸ್ತಿ ಗೆದ್ದಿದ್ದಾರೆ. ಮಹಿಳೆಯರ ಡಬಲ್ಸ್ ವಿಭಾಗದಲ್ಲಿ 91 ವಾರಗಳ ಕಾಲ ನಂಬರ್ 1 ಆಟಗಾರ್ತಿಯಾಗಿರುವುದು ಗಮನಾರ್ಹ.
ಇದನ್ನೂ ಓದಿ: ವೃತ್ತಿಪರ ಟೆನ್ನಿಸ್ ಲೋಕಕ್ಕೆ ವಿದಾಯ ಹೇಳಿದ ಸಾನಿಯಾ: ಕ್ರೀಡಾ ಲೋಕದ ಸೂಪರ್ ಸ್ಟಾರ್ ಆದ ಮೂಗುತಿ ಸುಂದರಿಯ ಕಥೆ