ETV Bharat / sports

ಪ್ರೋ ಕಬಡ್ಡಿ ಲೀಗ್‌: ಬಲಿಷ್ಠ ದಬಾಂಗ್‌ ಡೆಲ್ಲಿ ಮಣಿಸಿ ಜಯದ ಖಾತೆ ತೆರೆದ ಪಾಟ್ನಾ ಪೈರೇಟ್ಸ್‌

author img

By

Published : Oct 22, 2022, 6:57 AM IST

ಪಾಟ್ನಾ ಪೈರೇಟ್ಸ್​​ನ ರೋಹಿತ್‌ ಗುಲಿಯಾ ರೈಡಿಂಗ್‌ನಲ್ಲಿ 13 ಅಂಕಗಳನ್ನು ಗಳಿಸಿ ತಂಡದ ಜಯದ ರೂವಾರಿ ಎನಿಸಿದರು. ದಬಾಂಗ್‌ ಡೆಲ್ಲಿ ತಂಡದ ಪರ ನಾಯಕ ನವೀನ್‌ ಕುಮಾರ್‌ 13 ಅಂಕಗಳನ್ನು ಗಳಿಸಿದರೂ ಈ ಪಂದ್ಯದಲ್ಲಿ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ.

pro-kabaddi-league-patna-pirates-beat-dabang-delhi-team
ಪ್ರೋ ಕಬಡ್ಡಿ ಲೀಗ್‌: ಬಲಿಷ್ಠ ದಬಾಂಗ್‌ ಡೆಲ್ಲಿ ಮಣಿಸಿ ಜಯದ ಖಾತೆ ತೆರೆದ ಪಾಟ್ನಾ ಪೈರೇಟ್ಸ್‌

ಬೆಂಗಳೂರು: ಬಲಿಷ್ಠ ದಬಾಂಗ್‌ ಡೆಲ್ಲಿ ತಂಡವನ್ನು 37-33ರ ಅಂತರದಲ್ಲಿ ಸೋಲಿಸಿದ ಪಾಟ್ನಾ ಪೈರೇಟ್ಸ್‌ ತಂಡವು ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರೋ ಕಬಡ್ಡಿ ಲೀಗ್‌ನ 9ನೇ ಆವೃತ್ತಿಯ ಶುಕ್ರವಾರದ ಪಂದ್ಯದಲ್ಲಿ ಜಯದ ಖಾತೆ ತೆರೆದು ಸಂಭ್ರಮಿಸಿದೆ. ದಿನದ ಇತರ ಪಂದ್ಯಗಳಲ್ಲಿ ಯು ಮುಂಬಾ ಮತ್ತು ಪುಣೇರಿ ಪಲ್ಟನ್‌ ತಂಡಗಳು ಜಯ ಗಳಿಸಿ ಮುನ್ನಡೆದವು.

ಪಾಟ್ನಾ ಪೈರೇಟ್ಸ್​​ನ ರೋಹಿತ್‌ ಗುಲಿಯಾ ರೈಡಿಂಗ್‌ನಲ್ಲಿ 13 ಅಂಕಗಳನ್ನು ಗಳಿಸಿ ಜಯದ ರೂವಾರಿ ಎನಿಸಿದರು. ಡೆಲ್ಲಿ ತಂಡದ ಪರ ನಾಯಕ ನವೀನ್‌ ಕುಮಾರ್‌ 13 ಅಂಕಗಳನ್ನು ಗಳಿಸಿದರೂ ಈ ಪಂದ್ಯದಲ್ಲಿ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ. ಪಾಟ್ನಾ ಪೈರೇಟ್ಸ್‌ ಪರ ಸಚಿನ್‌ ರೈಡಿಂಗ್‌ನಲ್ಲಿ 9 ಅಂಕಗಳನ್ನು ಗಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.

pro-kabaddi-league-patna-pirates-beat-dabang-delhi-team
ಡೆಲ್ಲಿ ನಾಯಕ ನವೀನ್‌ ಕುಮಾರ್‌ ರೈಡಿಂಗ್​

ದಬಾಂಗ್‌ ಡೆಲ್ಲಿ ಪ್ರಥಮಾರ್ಧದ ಮುನ್ನಡೆ: ನಾಯಕ ನವೀನ್‌ ಎಕ್ಸ್‌ಪ್ರೆಸ್‌ ನೆರವಿನಿಂದ ದಬಾಂಗ್‌ ಡೆಲ್ಲಿ ತಂಡ ಪಾಟ್ನಾ ಪೈರೇಟ್ಸ್‌ ವಿರುದ್ಧ ಪ್ರಥಮಾರ್ಧದಲ್ಲಿ 20-12 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು. ನವೀನ್‌ ರೈಡಿಂಗ್‌ನಲ್ಲಿ 5 ಅಂಕಗಳನ್ನು ಗಳಿಸಿದರೆ, ಮಂಜೀತ್‌ ಹಾಗೂ ಅಶು ಮಲಿಕ್‌ ಅನುಕ್ರಮವಾಗಿ 4 ಮತ್ತು 3 ಅಂಕಗಳನ್ನು ಗಳಿಸಿ ತಂಡದ ಮುನ್ನಡೆಗೆ ನೆರವಾದರು. ಟ್ಯಾಕಲ್‌ನಲ್ಲಿ ಕಿಶನ್‌ 3 ಅಂಕ ಗಳಿಸಿ ಪ್ರಥಮಾರ್ಧದಲ್ಲಿ ಪ್ರಮುಖ ಪಾತ್ರವಹಿಸಿದರು.

ಪಾಟ್ನಾ ಪೈರೇಟ್ಸ್‌ ಪರ ರೋಹಿತ್‌ ಗುಲಿಯಾ ಉತ್ತಮ ರೈಡಿಂಗ್‌ ಪ್ರದರ್ಶಿಸಿ ದಿಟ್ಟ ಹೋರಾಟ ನೀಡಿದರು. ನಾಯಕ ನೀರಜ್‌ ಕುಮಾರ್‌ 3 ಅಂಕಗಳನ್ನು ಗಳಿಸಿದರೂ ಪಾಟ್ನಾ ಪೈರೇಟ್ಸ್‌ ತಂಡವನ್ನು ಆಲೌಟ್‌ ಮಾಡುವ ಮೂಲಕ ದಬಾಂಗ್‌ ಡೆಲ್ಲಿ ಮುನ್ನಡೆ ಕಾಯ್ದುಕೊಂಡಿತು.

ಯು ಮುಂಬಾಕ್ಕೆ ರೋಚಕ ಜಯ: ಅತ್ಯಂತ ರೋಚಕ ಪಂದ್ಯದಲ್ಲಿ ಯು ಮುಂಬಾ ತಂಡ ಹರಿಯಾಣ ಸ್ಟೀಲರ್ಸ್‌ ವಿರುದ್ಧ 32-31 ಅಂತರದಲ್ಲಿ ಜಯ ಗಳಿಸಿ ತನ್ನ ಪ್ರಭುತ್ವ ಸಾಧಿಸಿದೆ. ಗುಮಾನ್ ಸಿಂಗ್‌ ರೈಡಿಂಗ್‌ನಲ್ಲಿ ಗಳಿಸಿದ 9 ಅಂಕ ಹಾಗೂ ನಾಯಕ ಸುರೀಂದರ್‌ ಸಿಂಗ್‌ ಟ್ಯಾಕಲ್‌ನಲ್ಲಿ ಗಳಿಸಿದ 6 ಅಂಕ ಪಂದ್ಯದ ಗತಿಯನ್ನೇ ಬದಲಾಯಿಸಿತು.

ಉತ್ತಮ ಪೈಪೋಟಿ ನೀಡಿದರೂ ಹರಿಯಾಣ ಸ್ಟೀಲರ್ಸ್‌ ಕೇವಲ ಒಂದು ಅಂಕದಿಂದ ಪಂದ್ಯ ಕೈ ಚೆಲ್ಲಿತು. ಹಿರಿಯಾಣ ಸ್ಟೀಲರ್ಸ್‌ ಪರ ಸ್ಟಾರ್‌ ರೈಡರ್‌ ಕೇವಲ 4 ಅಂಕ ಗಳಿಸಿದ್ದು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. ಈ ಜಯದೊಂದಿಗೆ ಯು ಮುಂಬಾ ಅಂಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿಯಿತು. ಸೋಲುಂಡ ಹರಿಯಾಣ ಸ್ಟೀಲರ್ಸ್‌ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿಯಿತು.

ಪ್ರಥಮಾರ್ಧದಲ್ಲಿ ಯು ಮುಂಬಾ ಮುನ್ನಡೆ: ಉತ್ತಮ ರೀತಿಯಲ್ಲಿ ಆನ್ರೌಂಡ್‌ ಪ್ರದರ್ಶನ ತೋರಿದ ಯು ಮುಂಬಾ ತಂಡ ಹರಿಯಾಣ ಸ್ಟೀಲರ್ಸ್‌ ವಿರುದ್ಧ ಪ್ರಥಮಾರ್ಧದಲ್ಲಿ 17-15 ಅಂತರದಲ್ಲಿ ಮುನ್ನಡೆ ಸಾಧಿಸಿತು. ಹಿಂದಿನ ಪಂದ್ಯದಲ್ಲಿ ಸೋಲನುಭವಿಸಿದ್ದ ಹರಿಯಾಣ ಸ್ಟೀಲರ್ಸ್‌ ಗೆಲ್ಲುವ ಛಲದೊಂದಿಗೆ ಅಂಗಣಕ್ಕಿಳಿದಿತ್ತು. ಆರಂಭದಲ್ಲಿ ಬೃಹತ್‌ ಹಿನ್ನಡೆ ಕಂಡಿದ್ದರೂ ಸರ್ವಾಂಗೀಣ ಪದರ್ಶನ ತೋರಿ ಉತ್ತಮ ಪೈಪೋಟಿ ನೀಡಿ ಅಂತರವನ್ನು ಕಡಿಮೆ ಮಾಡಿಕೊಂಡಿತು. ಕೇವಲ ಆಲೌಟ್‌ ಆಗಿರುವುದೇ ಅಂಕದಲ್ಲಿನ ಅಂತರಕ್ಕೆ ಪ್ರಮುಖ ಕಾರಣವಾಯಿತು.

ಪುಣೇರಿ ಪಲ್ಟನ್​ಗೆ ಜಯ: ನಾಯಕ ಫಜಲ್‌ ಅತ್ರಚಲಿ ಅವರ ಅದ್ಭುತ ಟ್ಯಾಕಲ್‌ ಸಾಧನೆ ನೆರವಿನಿಂದ ಪುಣೇರಿ ಪಲ್ಟನ್‌ ತಂಡ ಬೆಂಗಾಲ್‌ ವಾರಿಯರ್ಸ್‌ ವಿರುದ್ಧ 27-25 ಅಂಕಗಳ ಅಂತರದಲ್ಲಿ ಜಯ ಗಳಿಸಿತು. ಫಜಲ್‌ ಅತ್ರಚಲಿ ಅಮೂಲ್ಯ 6 ಅಂಕಗಳನ್ನು ಗಳಿಸಿ ಜಯದ ರೂವಾರಿ ಎನಿಸಿದರು. ರೈಡಿಂಗ್‌ನಲ್ಲಿ ಅಸ್ಲಾಮ್‌ ಇನಾಮ್ದಾರ್‌ (5) ಹಾಗೂ ಮೋಹಿತ್‌ ಗೊಯತ್‌ (4) ಸಮಯೋಚಿತ ಪ್ರದರ್ಶನ, ಟ್ಯಾಕಲ್‌ನಲ್ಲಿ ಸೋಮ್ಬೀರ್‌ ಸಿಂಗ್‌ 5 ಅಂಕಗಳನ್ನು ಗಳಿಸಿ ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಬೆಂಗಾಲ್‌ ವಾರಿಯರ್ಸ್‌ ಪರ ನಾಯಕ ಮಣಿಂದರ್‌ ಸಿಂಗ್‌ ರೈಡಿಂಗ್‌ನಲ್ಲಿ 6 ಹಾಗೂ ಗಿರೀಶ್‌ ಮಾರುತಿ ಟ್ಯಾಕಲ್‌ನಲ್ಲಿ 4 ಅಂಕಗಳನ್ನು ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ.

pro-kabaddi-league
ಪುಣೇರಿ ಪಲ್ಟನ್‌ - ಬೆಂಗಾಲ್‌ ವಾರಿಯರ್ಸ್‌ ಹಣಾಹಣಿ

ಪ್ರಥಮಾರ್ಧದಲ್ಲಿ ಬೆಂಗಾಲ್‌ ವಾರಿಯರ್ಸ್‌ ಮುನ್ನಡೆ: ನಾಯಕ ಮಣಿಂದರ್‌ ಸಿಂಗ್‌ ಅವರ ರೈಡಿಂಗ್‌ ಹಾಗೂ ಗಿರೀಶ್‌ ಮಾರುತಿ ಅವರ ಟ್ಯಾಕಲ್‌ ನೆರವಿನಿಂದ ಬೆಂಗಾಲ್‌ ವಾರಿಯರ್ಸ್‌ ತಂಡ ಪುಣೇರಿ ಪಲ್ಟನ್‌ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ 15-11 ಅಂತರದಲ್ಲಿ ಮುನ್ನಡೆ ಕಂಡಿತು. ಪುಣೇರಿ ಪಲ್ಟನ್‌ ಪರ ಮೋಹಿತ್‌ ಗೊಯತ್‌ ರೈಡಿಂಗ್‌ನಲ್ಲಿ 4 ಅಂಕ ಗಳಿಸಿ ದಿಟ್ಟ ಹೋರಾಟ ನೀಡಿದರು.

ಹಿನ್ನಡೆ ಕಂಡಿದ್ದ ಬೆಂಗಾಲ್‌ ವಾರಿಯರ್ಸ್‌ಗೆ ಮನೋಜ್‌ ಗೌಡ 4 ಅಂಕಗಳನ್ನು ಗಳಿಸಿ ತಂಡದ ಮುನ್ನಡೆಗೆ ನೆರವಾದರು, ಹಿಂದಿನ ಪಂದ್ಯದಲ್ಲಿ ಸೋಲನುಭವಿಸಿದ್ದ ಬೆಂಗಾಲ್‌ ವಾರಿಯರ್ಸ್‌ಗೆ ಇಲ್ಲಿ ಜಯದ ಅಗತ್ಯವಿತ್ತು. ಅದೇ ರೀತಿಯಲ್ಲಿ ಆಟಗಾರರು ಉತ್ತಮ ಪ್ರದರ್ಶನ ತೋರಿದ್ದು ಗಮನಾರ್ಹ. ಪುಣೇರಿ ಪಲ್ಟನ್‌ ಪರ ಮೋಹಿತ್‌ ಗೊಯತ್‌ ರೈಡಿಂಗ್‌ನಲ್ಲಿ 4 ಅಂಕ ಗಳಿಸಿದ್ದನ್ನು ಹೊರತು ಪಡಿಸಿದರೆ ಉಳಿದ ಆಟಗಾರರು ಗಮನಾರ್ಹ ಪ್ರದರ್ಶನ ತೋರಲಿಲ್ಲ.

ಇದನ್ನೂ ಓದಿ: ಟಿ20 ವಿಶ್ವಕಪ್: ಭಾರತ-ಪಾಕಿಸ್ತಾನ ನಡುವಿನ ರೋಚಕ ಕದನಗಳ ಫ್ಲಾಶ್‌ಬ್ಯಾಕ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.