ಜೈಪುರ: ಪ್ರೋ ಕಬಡ್ಡಿ ಲೀಗ್ನಲ್ಲಿ ಮುಂಚೂಣಿ ತಂಡ ದಬಾಂಗ್ ಡೆಲ್ಲಿ ವಿರುದ್ಧ ಪವನ್ ಶೆರಾವತ್ ಭರ್ಜರಿ ರೈಡಿಂಗ್ ನೆರವಿನಿಂದ ಬೆಂಗಳೂರು ಬುಲ್ಸ್ ಪಂದ್ಯ ಟೈ ಮಾಡಿಕೊಂಡಿದೆ.
ಈ ಪಂದ್ಯವನ್ನು ಪವನ್ ಶೆರಾವತ್ ಹಾಗೂ ನವೀನ್ ಕುಮಾರ್ ನಡುವಿನ ಯುದ್ದ ಎಂದೇ ಪರಿಗಣಿಸಲಾಗಿದ್ದು ಮೊದಲಾರ್ಧದಲ್ಲಿ ಬುಲ್ಸ್ 19-22 ಅಂಕಗಳ ಹಿನ್ನಡೆ ಅನುಭವಿಸಿತ್ತು. ಪಂದ್ಯದ ದ್ವಿತೀಯಾರ್ಧದಲ್ಲಿ ಮತ್ತೆ ಆರ್ಭಟಿಸಿದ ಡೆಲ್ಲಿ ಕೇವಲ 12 ನಿಮಿಷದಲ್ಲಿ ಬುಲ್ಸ್ ತಂಡವನ್ನು ಆಲೌಟ್ ಮಾಡಿ 34-23 ರಲ್ಲಿ ಮುನ್ನಡೆ ಕಾಯ್ದುಕೊಂಡಿತು.
-
It was built up to be the War of 🌟🌟, & #DELvBLR didn't disappoint!
— ProKabaddi (@ProKabaddi) September 23, 2019 " class="align-text-top noRightClick twitterSection" data="Pro Kabadd
Super 🔟s from Naveen Express & the Hi-Flyer ensured that this #VIVOProKabaddi clash ended in a hard-fought tie!
Keep watching LIVE action:
⏰: Daily, 7 PM
📺: Star Sports & Hotstar#IsseToughKuchNahi pic.twitter.com/jwSet1y11r
">Pro KabaddIt was built up to be the War of 🌟🌟, & #DELvBLR didn't disappoint!
— ProKabaddi (@ProKabaddi) September 23, 2019
Super 🔟s from Naveen Express & the Hi-Flyer ensured that this #VIVOProKabaddi clash ended in a hard-fought tie!
Keep watching LIVE action:
⏰: Daily, 7 PM
📺: Star Sports & Hotstar#IsseToughKuchNahi pic.twitter.com/jwSet1y11rIt was built up to be the War of 🌟🌟, & #DELvBLR didn't disappoint!
— ProKabaddi (@ProKabaddi) September 23, 2019
Super 🔟s from Naveen Express & the Hi-Flyer ensured that this #VIVOProKabaddi clash ended in a hard-fought tie!
Keep watching LIVE action:
⏰: Daily, 7 PM
📺: Star Sports & Hotstar#IsseToughKuchNahi pic.twitter.com/jwSet1y11r
ಕೊನೆಯ 8 ನಿಮಿಷದ ಆಟದಲ್ಲಿ ಕಮಾಲ್ ಮಾಡಿದ ಪವನ್ 7 ರೈಡಿಂಗ್ ಪಾಯಿಂಟ್ ಸಂಪಾದಿಸಿದರು. ಇವರ ರೈಡಿಂಗ್, ಡಿಫೆಂಡರ್ಗಳ ನೆರವಿನಿಂದ 23-34 ಇದ್ದ ಅಂಕಗಳ ಅಂತರ ಇನ್ನು 5 ನಿಮಿಷದ ಆಟ ಬಾಕಿ ಇರುವಾಗಲೇ 36-35 ರಲ್ಲಿ ಮುನ್ನಡೆ ಪಡೆಯಿತು. ಆದರೆ ಡೆಲ್ಲಿ ಮತ್ತೆ ತಿರುಗಿ ಬಿದ್ದು 39-36 ರಲ್ಲಿ ಮುನ್ನಡೆ ಸಾಧಿಸಿತು. ಕೊನೆಯಲ್ಲಿ ಒಂದು ನಿಮಿಷದ ಆಟ ಬಾಕಿಯಿದ್ದಾಗ ಬುಲ್ಸ್ 3 ಅಂಕ ಸಂಪಾದಿಸಿ 39-39ರಲ್ಲಿ ಟೈ ಸಾಧಿಸಿತು.
ಎಂದಿನಂತೆ ಆರ್ಭಟಿಸಿದ ಪವನ್ ಶೆರಾವತ್ 17 ರೈಡಿಂಗ್ ಅಂಕಗಳಿಸಿದರು. ಇವರಿಗೆೆ ಸಾಥ್ ನೀಡಿದ ಬಂಟಿ 4, ಡಿಫೆಂಡರ್ ಅಮಿತ್ ಶೆರಾನ್ 6, ಅಜಯ್ 2, ಸುಮಿತ್ 2 ಪಾಯಿಂಟ್ ಕಲೆ ಅಂಕ ಸಂಪಾದಿಸಿದರು.
ದಬಾಂಗ್ ಡೆಲ್ಲಿ ತಂಡ ಪರ ನವೀನ್ ಕುಮಾರ್ 14, ಚಂದ್ರನ್ ರಂಜಿತ್ 5, ಅನಿಲ್ ಕುಮಾರ್ 4, ರವೀಂದ್ರ ಪಹಲ್ 4, ವಿಶಾಲ್ ಮಾನೆ 2, ಜೋಗಿಂದರ್ 2 ಅಂಕ ಪಡೆದು ಮಿಂಚಿದರು.
ಇದಕ್ಕೂ ಮುನ್ನ ನಡೆದಿದ್ದ ಮೊದಲ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ 39-34 ರಲ್ಲಿ ಪಟ್ನಾ ಪೈರೇಟ್ಸ್ ತಂಡವನ್ನು ಮಣಿಸಿತು.