ಅಹಮದಾಬಾದ್: ಪ್ರಸಕ್ತ ಸಾಲಿನ ಪ್ರೋ ಕಬಡ್ಡಿ ಲೀಗ್ನಲ್ಲಿ ದಬಾಂಗ್ ಡೆಲ್ಲಿಗೆ ಸೋಲಿನ ರುಚಿ ತೋರಿಸಿರುವ ಬೆಂಗಾಲ್ ವಾರಿಯರ್ಸ್ ಚೊಚ್ಚಲ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿದ್ದು, ಹೊಸ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಅಹಮದಾಬಾದ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬಲಿಷ್ಠ ತಂಡಗಳಾದ ದಬಾಂಗ್ ಡೆಲ್ಲಿ ಹಾಗೂ ಬೆಂಗಾಲ್ ವಾರಿಯರ್ಸ್ ಮುಖಾಮುಖಿಯಾಗಿದ್ದವು. ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದ ಎರಡು ತಂಡಗಳಿಂದಲೂ ಆರಂಭದಿಂದಲೂ ಜಿದ್ದಾಜಿದ್ದಿನ ಹೋರಾಟ ಮೂಡಿ ಬಂತು. ಆದರೆ, ಕೊನೆಯದಾಗಿ ಡೆಲ್ಲಿ ವಿರುದ್ಧ 39-34 ಅಂಕಗಳ ಅಂತರದಿಂದ ಸೋಲಿನ ರುಚಿ ತೋರಿಸುವ ಮೂಲಕ ಟ್ರೋಫಿಗೆ ಮುತ್ತಿಕ್ಕಿದೆ.
ಆರಂಭದಲ್ಲಿ ಡೆಲ್ಲಿ ತಂಡ ಬೆಂಗಾಲ್ ಮೇಲೆ ಹಿಡಿತ ಸಾಧಿಸಿ, 14-9 ಅಂತರದ ಮುನ್ನಡೆ ಪಡೆದುಕೊಂಡಿತ್ತು. ಆದರೆ ಇದಾದ ಬಳಿಕ ಅಂಕ ಸಮ ಮಾಡಿಕೊಂಡ ಬೆಂಗಾಲ್ ತದನಂತರ ಎದುರಾಳಿ ತಂಡದ ಮೇಲೆ ತಿರುಗಿ ಬಿತ್ತು. ಈ ನಂತರ ಅದ್ಭುತ ಪ್ರದರ್ಶನ ನೀಡಿದ ಬೆಂಗಾಲ್ ಎದುರಾಳಿ ತಂಡಕ್ಕೆ ಸೋಲಿನ ರುಚಿ ತೋರಿಸಿತು.
ಇದೇ ವೇಳೆ ಬೆಸ್ಟ್ ರೈಡರ್ ಹಾಗೂ ಸ್ಟೈಲೀಶ್ ಪ್ಲೇಯರ್ ಆಫ್ ದಿ ಮ್ಯಾಚ್ ನವೀನ್ ಕುಮಾರ್, ಬೆಸ್ಟ್ ಡಿಪೆಂಡರ್ ಆಫ್ ದಿ ಮ್ಯಾಚ್ ಜೀವ್ ಕುಮಾರ್ಗೆ ಸಿಕ್ಕರೆ, ಗೇಮ್ ಚೇಂಜರ್ ಅವಾರ್ಡ್ ಮೊಹಮದ್ಗೆ ಸಿಕ್ಕಿತ್ತು. ಈ ಸಲ ಫೈನಲ್ ಗೆದ್ದ ತಂಡ ಬರೋಬ್ಬರಿ 3 ಕೋಟಿ ರೂಪಾಯಿಗೆ ಮುತ್ತಿಕ್ಕಲಿದೆ. ಇನ್ನು ಸೆಮಿಫೈನಲ್ ಪಂದ್ಯದಲ್ಲಿ ಬೆಂಗಳೂರು ಸೋಲಿಸಿ ದಬಾಂಗ್ ಡೆಲ್ಲಿ ಫೈನಲ್ಗೆ ಅರ್ಹತೆ ಪಡೆದುಕೊಂಡಿತ್ತು.