ಅಹ್ಮದಾಬಾದ್ : ರೋಚಕ ಹೋರಾಟ ಕಂಡುಬಂದ ಪ್ರೋ. ಕಬಡ್ಡಿ 7ನೇ ಸೀಸನ್ ಸೆಮಿಫೈನಲ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ದಬಾಂಗ್ ಡೆಲ್ಲಿಗೆ ಶರಣಾಗುವ ಮೂಲಕ ಸತತ 2ನೇ ಬಾರಿ ಚಾಂಪಿಯನ್ ಆಗುವ ಕನಸು ನುಚ್ಚುನೂರಾಗಿದೆ.
ಆರಂಭದಲ್ಲೇ ಆಕ್ರಮಣ ಆಟಕ್ಕೆ ಮುಂದಾದ ದಬಾಂಗ್ ಡೆಲ್ಲಿ ಮೊದಲಾರ್ಧದಲ್ಲೇ ಬೆಂಗಳೂರು ತಂಡವನ್ನು 2 ಬಾರಿ ಆಲೌಟ್ ಮಾಡಿ 26-18ರಲ್ಲಿ ಮುನ್ನಡೆ ಕಾಪಾಡಿಕೊಂಡಿತು.ಆದರೆ, ದ್ವಿತೀಯಾರ್ಧದಲ್ಲಿ ಪವನ್ ಆಕ್ರಮಣ ಆಟ ತೋರಿ 30-35ಕ್ಕೆ ತಂದು ನಿಲ್ಲಿಸಿದರು.
-
The Hi-Flyer soared high, but the Eagles flew higher to book their spot in the final!
— ProKabaddi (@ProKabaddi) October 16, 2019 " class="align-text-top noRightClick twitterSection" data="
Can they claim their first trophy?
⚔: #VIVOProKabaddi Final
⌛: October 19, 7 PM
📺: Star Sports and Hotstar#IsseToughKuchNahi #WorldsToughestWeek #VIVOProKabaddiPlayoffs #DELvBLR pic.twitter.com/WRE0sjECCl
">The Hi-Flyer soared high, but the Eagles flew higher to book their spot in the final!
— ProKabaddi (@ProKabaddi) October 16, 2019
Can they claim their first trophy?
⚔: #VIVOProKabaddi Final
⌛: October 19, 7 PM
📺: Star Sports and Hotstar#IsseToughKuchNahi #WorldsToughestWeek #VIVOProKabaddiPlayoffs #DELvBLR pic.twitter.com/WRE0sjECClThe Hi-Flyer soared high, but the Eagles flew higher to book their spot in the final!
— ProKabaddi (@ProKabaddi) October 16, 2019
Can they claim their first trophy?
⚔: #VIVOProKabaddi Final
⌛: October 19, 7 PM
📺: Star Sports and Hotstar#IsseToughKuchNahi #WorldsToughestWeek #VIVOProKabaddiPlayoffs #DELvBLR pic.twitter.com/WRE0sjECCl
ಎಂದಿನಂತೆ ಏಕಾಂಗಿ ಹೋರಾಟ ನಡೆಸಿದ ಪವನ್ಗೆ ಬೆಂಗಳೂರು ಬುಲ್ಸ್ ತಂಡದಿಂದ ಸರಿಯಾದ ಬೆಂಬಲ ಸಿಗಲಿಲ್ಲ. ಅದ್ಭುತ ರೈಡಿಂಗ್ ನಡೆಸಿದ ಪವನ್18 ಅಂಕಗಳಿಸಿದರು. ಸುಮಿತ್ 6 ರೋಹಿತ್ 5 ಅಂಕಗಳಿಸಿದರು. ಡಿಫೆಂಡಿಂಗ್ನಲ್ಲಿ ಮಹೇಂದರ್ ಸಿಂಗ್ 2, ಸೌರವ್ ನಂಡಲ್ 2 ಅಂಕ ಗಳಿಸಿದರು. ಇಡೀ ಪಂದ್ಯದಲ್ಲಿ ಗಳಿಸಿದ್ದು ಕೇವಲ 6 ಟ್ಯಾಕಲ್ ಪಾಯಿಂಟ್.
ಇನ್ನು, ಆಲ್ರೌಂಡ್ ಆಟ ಪ್ರದರ್ಶನ ತೋರಿದ ದಬಾಂಗ್ ಡೆಲ್ಲಿ ಪರ ರೈಡರ್ಗಳಾದ ನವೀನ್ ಕುಮಾರ್ 15, ಚಂದ್ರನ್ ರಂಜಿತ್ 9 ಅಂಕ ಗಳಿಸಿದರೆ, ಡಿಫೆಂಡರ್ಗಳಾದ ಅನಿಲ್ ಕುಮಾರ್ 4, ವಿಜಯ್ 3, ರವೀಂದರ್ ಪಹಲ್ 3, ಜೋಗಿಂದರ್ ನರ್ವಾಲ್ 3, ವಿಶಾಲ್ ಮಾನೆ 1 ಅಂಕ ಪಡೆದರು. ರೈಡಿಂಗ್ನಲ್ಲಿ ಡೆಲ್ಲಿಗಿಂತ ಉತ್ತಮ ಅಂಕಗಳಿಸಿದ ಬೆಂಗಳೂರು ಡಿಫೆಂಡಿಂಗ್ನಲ್ಲಿ 15-6 ರಲ್ಲಿ ಹಿಂದೆ ಉಳಿದಿದ್ದೇ ಸೋಲಿಗೆ ಕಾರಣವಾಯಿತು.