ETV Bharat / sports

ಕೊಲೆ ಆರೋಪ ಕೇಸ್ : ಕುಸ್ತಿಪಟು ಸುಶೀಲ್​ಕುಮಾರ್​ಗಾಗಿ ಮುಂದುವರಿದ ಶೋಧ

author img

By

Published : May 15, 2021, 3:48 PM IST

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು, ಸುಶಿಲ್​ ಕುಮಾರ್​ಗೆ ಎರಡು ಬಾರಿ ಲುಕ್​ಔಟ್​​ ನೋಟಿಸ್ ನೀಡಿದ್ದಾರೆ. ಹರಿಯಾಣ, ಉತ್ತರಾಖಂಡ ಹಾಗೂ ದೆಹಲಿಯಲ್ಲಿ ಪೊಲೀಸರು, ಹುಡುಕಾಟ ನಡೆಸಿದ್ದಾರೆ..

ಕೊಲೆ ಆರೋಪ ಕೇಸ್
ಕೊಲೆ ಆರೋಪ ಕೇಸ್

ಗುರುಗ್ರಾಮ್ (ಹರಿಯಾಣ) : ಲಂಡನ್ ಮತ್ತು ಬೀಜಿಂಗ್ ಒಲಿಂಪಿಕ್ಸ್‌ನ ಕುಸ್ತಿ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆದ್ದಿರುವ ಸುಶೀಲ್ ಕುಮಾರ್ ವಿರುದ್ಧ ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿರುವ ಆರೋಪ ಕೇಳಿ ಬಂದಿದೆ.

ಕೆಲ ದಿನಗಳ ಹಿಂದೆ ಛತ್ರಾಸಲ್ ಕ್ರೀಡಾಂಗಣದಲ್ಲಿ 23 ವರ್ಷದ ಕುಸ್ತಿಪಟು ಸಾಗರ್​​​​​​ ಎಂಬಾತನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿ, ಸುಶೀಲ್​ ಕುಮಾರ್ ಮತ್ತು ಸಹಚರರು ನಾಪತ್ತೆಯಾಗಿದ್ದಾರೆ ಎನ್ನಲಾಗ್ತಿದೆ.

ಈ ಹಿನ್ನೆಲೆ ಸುಶೀಲ್​ ಕುಮಾರ್​ರನ್ನು ಬಂಧಿಸಲು ಪೊಲೀಸರು ಗುರುಗ್ರಾಮ್​ನ ಹಲವು ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಲಾಯಿತು.

ಮೂಲಗಳ ಪ್ರಕಾರ, ಸುಶೀಲ್ ಕುಮಾರ್ ಗುರುಗ್ರಾಮ್​ನ ಫ್ಲ್ಯಾಟ್​ವೊಂದರಲ್ಲಿ ಅಡಗಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ, ಪೊಲೀಸರು ನಗರದ ಹಲವೆಡೆ ದಾಳಿ ನಡೆಸಿದ್ದು, ಈವರೆಗೂ ಆರೋಪಿ ಪತ್ತೆಯಾಗಿಲ್ಲ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು, ಸುಶಿಲ್​ ಕುಮಾರ್​ಗೆ ಎರಡು ಬಾರಿ ಲುಕ್​ಔಟ್​​ ನೋಟಿಸ್ ನೀಡಿದ್ದಾರೆ. ಹರಿಯಾಣ, ಉತ್ತರಾಖಂಡ ಹಾಗೂ ದೆಹಲಿಯಲ್ಲಿ ಪೊಲೀಸರು, ಹುಡುಕಾಟ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.