ETV Bharat / sports

"ಕ್ರೀಡೆಯಿಂದ ದೇಶದ ಕೀರ್ತಿ ಹೆಚ್ಚಿದೆ": ಮೋದಿ 'ಮನ್‌ ಕಿ ಬಾತ್'

PM Modi praises athletes: 108ನೇ 'ಮನ್ ಕಿ ಬಾತ್' ಸಂಚಿಕೆಯಲ್ಲಿ ವರ್ಷದ ಕ್ರೀಡಾ ಸಾಧಕರ ಬಗ್ಗೆ ಪ್ರಧಾನಿ ಮೋದಿ ಬೆಳಕು ಚೆಲ್ಲಿದ್ದಾರೆ.

PM Narendra Modi
PM Narendra Modi
author img

By ETV Bharat Karnataka Team

Published : Dec 31, 2023, 3:55 PM IST

ನವದೆಹಲಿ: ವರ್ಷದ ಕೊನೆಯ, 108ನೇ 'ಮನ್ ಕಿ ಬಾತ್' ಸಂಚಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕ್ರೀಡಾ ಕ್ಷೇತ್ರದಲ್ಲಿ ಭಾರತದ ಸಾಧನೆಯನ್ನು ಕೊಂಡಾಡಿದರು. 2023ರ ಏಷ್ಯಾನ್​ ಗೇಮ್ಸ್​, ಪ್ಯಾರಾ ಏಷ್ಯನ್​ ಗೇಮ್ಸ್​​ ಮತ್ತು ವಿಶ್ವಕಪ್ ಕ್ರಿಕೆಟ್​ನಲ್ಲಿ ತಂಡದ ಆಟದ ಬಗ್ಗೆ ಪ್ರಸ್ತಾಪಿಸಿ ಭಾರತೀಯ ಕ್ರೀಡಾಪಟುಗಳನ್ನು ಹೊಗಳಿದರು.

2023ರ ಏಷ್ಯಾಡ್​ನಲ್ಲಿ ಭಾರತದ ಹಿಂದಿನ ದಾಖಲೆಯನ್ನು ಮುರಿದು ಸಾಧನೆ ಮಾಡಿದೆ. ಭಾರತವು ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಅಥ್ಲೀಟ್‌ಗಳು 111 ಪದಕ ಗೆದ್ದರು. ಏಷ್ಯನ್ ಗೇಮ್ಸ್​ನಲ್ಲಿ 28 ಚಿನ್ನ, 38 ಬೆಳ್ಳಿ ಮತ್ತು 41 ಕಂಚು ಸೇರಿ 107 ಪದಕ ಗಳಿಸಿ ಸಾಧನೆ ಮಾಡಿದರು. 2018ರಲ್ಲಿ ಇಂಡೋನೇಷ್ಯಾದಲ್ಲಿ ನಡೆದ ಏಷ್ಯಾಡ್​ನಲ್ಲಿ 72 ಪದಕದ ಜಯ ಹಿಂದಿನ ಶ್ರೇಷ್ಠ ಸಾಧನೆ ಆಗಿತ್ತು. ಈ ಬಾರಿ ಏಷ್ಯನ್​ ಗೇಮ್ಸ್​ಗೆ ಪ್ರಯಾಣಿಸುವ ಮೊದಲು "ಅಬ್ ಕಿ ಬಾರ್, ಸೌ ಪಾರ್' (ಈ ಬಾರಿ 100 ಪದಕ) ಎಂಬ ಟ್ಯಾಗ್‌ಲೈನ್​ ಜೊತೆಗೆ ತೆರಳಿದ ಅಥ್ಲೀಟ್​ಗಳು ಅದನ್ನು ಸಾಧಿಸಿ ಮರಳಿದ್ದರು.

ಈ ವರ್ಷದ 'ಮನ್ ಕಿ ಬಾತ್' ಕಾರ್ಯಕ್ರಮದ ಅಂತಿಮ ಸಂಚಿಕೆಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 2023ರಲ್ಲಿ ಕ್ರೀಡಾಪಟುಗಳಾಗಿ ದೇಶದ ಕ್ರೀಡೆಗಳಿಗೆ ಶುಭಕರವಾಗಿದೆ. ಹ್ಯಾಂಗ್‌ಝೌ ಗೇಮ್ಸ್‌ನಲ್ಲಿ ತಮ್ಮ ರೋಚಕ ಮತ್ತು ಐತಿಹಾಸಿಕ ಪ್ರದರ್ಶನಗಳ ಮೂಲಕ, ಹೆಚ್ಚಿನ ಕ್ರೀಡಾ ಸಾಧನೆಗಳಿಗೆ ಇನ್ನಷ್ಟು ಸ್ಫೂರ್ತಿ ನೀಡಿದ್ದಾರೆ ಎಂದು ಬಣ್ಣಿಸಿದ್ದಾರೆ.

  • " class="align-text-top noRightClick twitterSection" data="">

ಏಷ್ಯನ್ ಗೇಮ್ಸ್ ಮತ್ತು ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತದ ಕ್ರೀಡಾ ಪಟುಗಳ 'ಅತ್ಯುತ್ತಮ' ಪ್ರಯತ್ನಕ್ಕೆ ಪ್ರಧಾನಿ ಮೋದಿ ಪ್ರಶಂಸೆ ವ್ಯಕ್ತಪಡಿಸಿದರು. "ಈ ವರ್ಷ ನಮ್ಮ ಅಥ್ಲೀಟ್‌ಗಳು ಕ್ರೀಡೆಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ನಮ್ಮ ಆಟಗಾರರು ಏಷ್ಯನ್ ಗೇಮ್ಸ್‌ನಲ್ಲಿ 107 ಪದಕಗಳು ಮತ್ತು ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ 111 ಪದಕಗಳನ್ನು ಗೆದ್ದಿದ್ದಾರೆ. ಇತರ ಹಲವು ಕ್ರೀಡೆಗಳಲ್ಲಿ ಆಟಗಾರರ ಸಾಧನೆಗಳು ದೇಶದ ಕೀರ್ತಿಯನ್ನು ಹೆಚ್ಚಿಸಿವೆ. ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ನಮ್ಮವರ ಪ್ರದರ್ಶನಕ್ಕೆ ಇಡೀ ಭಾರತವೇ ಒಂದಾಗಿ ಬೆಂಬಲಿಸಲಿದೆ" ಎಂದು ಪ್ರಧಾನಿ ಮೋದಿ ಹೇಳಿದರು.

ತವರಿನಲ್ಲಿ ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರಲ್ಲಿ ರನ್ನರ್ ಅಪ್ ಸ್ಥಾನ ಗಳಿಸಿದ್ದಕ್ಕಾಗಿ ಭಾರತೀಯ ಪುರುಷರ ಕ್ರಿಕೆಟ್ ತಂಡವನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ತಂಡವು ತಮ್ಮ ಪ್ರದರ್ಶನದಿಂದ ಎಲ್ಲರ ಹೃದಯವನ್ನು ಗೆದ್ದಿದೆ ಎಂದು ಹೇಳಿದರು. "ಭಾರತೀಯ ಕ್ರಿಕೆಟಿಗರು ಏಕದಿನ ವಿಶ್ವಕಪ್‌ನಲ್ಲಿ ತಮ್ಮ ಪ್ರದರ್ಶನದಿಂದ ಎಲ್ಲರ ಹೃದಯವನ್ನು ಗೆದ್ದಿದ್ದಾರೆ. 19 ವರ್ಷದೊಳಗಿನವರ ಟಿ20 ವಿಶ್ವಕಪ್‌ನಲ್ಲಿ ನಮ್ಮ ಮಹಿಳಾ ಕ್ರಿಕೆಟ್ ತಂಡದ ಗೆಲುವು ಕೂಡ ಬಹಳ ಸ್ಫೂರ್ತಿದಾಯಕವಾಗಿದೆ. ಇತರ ಹಲವು ಕ್ರೀಡೆಗಳಲ್ಲಿನ ಆಟಗಾರರ ಸಾಧನೆ ದೇಶಕ್ಕೆ ಕೀರ್ತಿ ತಂದಿದೆ" ಎಂದಿದ್ದಾರೆ.

ಇದನ್ನೂ ಓದಿ: ವಿಕಸಿತ ಭಾರತ ಆತ್ಮವಿಶ್ವಾಸ, ಸ್ವಾವಲಂಬನೆಯಿಂದ ಶೋಭಿಸುತ್ತಿದೆ: ಮೋದಿ 'ಮನ್‌ ಕಿ ಬಾತ್'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.