ಬೆಂಗಳೂರು: ಮೂರು ಬಾರಿಯ ಚಾಂಪಿಯನ್ ಪಾಟ್ನಾ ಪೈರೇಟ್ಸ್ 38-26 ಅಂಕಗಳ ಅಂತರದಿಂದ ಪುಣೆ ತಂಡವನ್ನು ಬಗ್ಗುಬಡಿದಿದೆ. ಮತ್ತೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ 39-37 ಅಂಕಗಳಿಂದ ತೆಲುಗು ಟೈಟನ್ಸ್ ವಿರುದ್ಧ ರೋಚಕ ಜಯ ಸಾಧಿಸಿತು.
ರೈಡರ್ಗಳಾದ ಸಚಿನ್ ಸೂಪರ್ 10(10), ಪ್ರಶಾಂತ್ ರೈ 5 ಅಂಕ ಮತ್ತು ಡಿಫೆಂಡರ್ ತ್ರಿಮೂರ್ತಿಗಳಾದ ಸುನೀಲ್(4 ಅಂಕ), ಮೊಹಮ್ಮದ್ರೇಝಾ ಚಿಯಾನೆ(3 ಅಂಕ) ಮತ್ತು ಸಜಿನ್ ಸಿ(3 ಅಂಕ) ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
-
Steel aur Titan jab takraye, @HaryanaSteelers winners nikal kar aaye! 😎
— ProKabaddi (@ProKabaddi) December 28, 2021 " class="align-text-top noRightClick twitterSection" data="
Haryana Steelers keep their nerves of steel intact as they win their first match of #SuperhitPanga! 🔥#vivoProKabaddi #SuperhitPanga #TTvHS pic.twitter.com/jZHg9F1sC0
">Steel aur Titan jab takraye, @HaryanaSteelers winners nikal kar aaye! 😎
— ProKabaddi (@ProKabaddi) December 28, 2021
Haryana Steelers keep their nerves of steel intact as they win their first match of #SuperhitPanga! 🔥#vivoProKabaddi #SuperhitPanga #TTvHS pic.twitter.com/jZHg9F1sC0Steel aur Titan jab takraye, @HaryanaSteelers winners nikal kar aaye! 😎
— ProKabaddi (@ProKabaddi) December 28, 2021
Haryana Steelers keep their nerves of steel intact as they win their first match of #SuperhitPanga! 🔥#vivoProKabaddi #SuperhitPanga #TTvHS pic.twitter.com/jZHg9F1sC0
ಯುವ ಆಟಗಾರರ ಉತ್ತಮ ಪ್ರದರ್ಶನದ ಹೊರತಾಗಿಯೂ ಉತ್ತಮ ಗುಣಮಟ್ಟದ ರೈಡರ್ಗಳ ಕೊರತೆಯಿಂದ ಪುಣೆ ಸತತ 2ನೇ ಸೋಲು ಕಂಡಿತು. ಯುವ ರೈಡರ್ ಮೋಹಿತ್ ಗೋಯಟ್ 7, ಅಸ್ಲಮ್ ಇನಾಮ್ದಾರ್ 6 ಮತ್ತು ಡಿಫೆಂಡರ್ ಸೋಮ್ಬಿರ್ 5 ಅಂಕ ಪಡೆದು ಪಾಟ್ನಾಗೆ ಪ್ರತಿರೋಧವೊಡ್ಡಿದ್ದರು.
ಸ್ಟೀಲರ್ಸ್ಗೆ ರೋಚಕ ಜಯ
ಮೀತು ಮಹೇಂದರ್(12) ಮತ್ತು ರೋಹಿತ್ ಗುಲಿಯಾ(8) ಅವರ ಅತ್ಯುತ್ತಮ ರೈಡಿಂಗ್ ಮತ್ತು ರವಿಕುಮಾರ್(4), ಮೋಹಿತ್(3) ಮತ್ತು ಸುರೇಂದರ್ ನಾಡ(3) ಅವರ ಅದ್ಭುತ ಟ್ಯಾಕಲ್ ನೆರವಿನಿಂದ ಸ್ಟೀಲರ್ಸ್ 2 ಅಂಕಗಳ ರೋಚಕ ಜಯ ಸಾಧಿಸಿತು.
ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದ ಸಿದ್ದಾರ್ಥ್ ದೇಸಾಯಿ(9) ಗಾಯದ ಕಾರಣ ದ್ವಿತೀಯಾರ್ಧದಲ್ಲಿ ಕಣಕ್ಕಿಳಿಯದಿದ್ದರಿಂದ ತೆಲುಗು ಟೈಟಾನ್ಸ್ ಹಿನ್ನಡೆ ಅನುಭವಿಸಿತು. ಆದರೂ ಅಂಕಿತ್ ಬೆನಿವಾಲ್(9), ರಾಕೇಶ್ ಗೌಡ(7) ಅಂಕ ಪಡೆದು ಸೋಲಿನ ಅಂತರವನ್ನು ತಗ್ಗಿಸಿದರು.
ಇದನ್ನೂ ಓದಿ:ಇನ್ನೂ 3 ವರ್ಷ ಕ್ರಿಕೆಟ್ ಆಡುವ ಸಾಮರ್ಥ್ಯವಿದೆ, ಈ ತಂಡದ ಪರ ಐಪಿಎಲ್ನಲ್ಲಿ ಆಡುವಾಸೆ: ಅಂಬಾಟಿ ರಾಯುಡು