ಮೆಲ್ಬೋರ್ನ್ : ಆಸ್ಟ್ರೇಲಿಯನ್ ಓಪನ್ 2022 ಫೈನಲ್ ಪಂದ್ಯದಲ್ಲಿ ಟೆನ್ನಿಸ್ ದಿಗ್ಗಜ ಸ್ಪೇನ್‌ನ ರಾಫೆಲ್ ನಡಾಲ್, ರಷ್ಯಾದ ಯುವ ತಾರೆ ಡೇನಿಲ್ ಮೆಡ್ವೆಡೆವ್ ವಿರುದ್ಧ ರೋಚಕ ಗೆಲುವು ಸಾಧಿಸುವ ಮೂಲಕ ಈ ಬಾರಿಯ ಆಸ್ಟ್ರೇಲಿಯನ್ ಓಪನ್ ಟ್ರೋಫಿ ಎತ್ತಿಹಿಡಿದಿದ್ದಾರೆ. ಈ ಗೆಲುವಿನ ಮೂಲಕ ವಿಶ್ವ ದಾಖಲೆಯ 21ನೇ ಗ್ರ್ಯಾಂಡ್ ಸ್ಲ್ಯಾಮ್ ಮುಡಿಗೇರಿಸಿಕೊಂಡಿದ್ದಾರೆ.
-
Reunited with Norm 🏆#AusOpen • #AO2022 • @RafaelNadal pic.twitter.com/QAh0CPWYN0
— #AusOpen (@AustralianOpen) January 30, 2022 " class="align-text-top noRightClick twitterSection" data="
">Reunited with Norm 🏆#AusOpen • #AO2022 • @RafaelNadal pic.twitter.com/QAh0CPWYN0
— #AusOpen (@AustralianOpen) January 30, 2022Reunited with Norm 🏆#AusOpen • #AO2022 • @RafaelNadal pic.twitter.com/QAh0CPWYN0
— #AusOpen (@AustralianOpen) January 30, 2022
ಮೆಲ್ಬೋರ್ನ್ ಪಾರ್ಕ್‌ನ ರಾಡ್ ಲೇವರ್ ಕ್ರೀಡಾಂಗಣದಲ್ಲಿ ಇಂದು ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ 5 ಸೆಟ್‌ಗಳ ಮ್ಯಾರಥಾನ್ ಹೋರಾಟ ನಡೆಸಿದ ರಾಫೆಲ್ ನಡಾಲ್, ರಷ್ಯಾದ ಯುವ ತಾರೆ ಡೇನಿಲ್ ಮೆಡ್ವೆಡೆವ್ ಅವರನ್ನು 2-6, 6-7 (5/7), 6-4, 6-4, 7-5 ಅಂತರದ ಸೆಟ್‌ಗಳಿಂದ ಮಣಿಸಿ 2009ರ ಬಳಿಕ ಆಸೀಸ್ ನೆಲದಲ್ಲಿ ಮೊದಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದರು.
-
Legendary status 💪#AusOpen • #AO2022 pic.twitter.com/7uDDds3x7z
— #AusOpen (@AustralianOpen) January 30, 2022 " class="align-text-top noRightClick twitterSection" data="
">Legendary status 💪#AusOpen • #AO2022 pic.twitter.com/7uDDds3x7z
— #AusOpen (@AustralianOpen) January 30, 2022Legendary status 💪#AusOpen • #AO2022 pic.twitter.com/7uDDds3x7z
— #AusOpen (@AustralianOpen) January 30, 2022
ಈ ಜಯ ಸಾಧಿಸುವ ಮೂಲಕ 21 ನೇ ಗ್ರ್ಯಾಂಡ್ ಸ್ಲಾಮ್ ಗೆದ್ದು ವಿಶ್ವದಾಖಲೆ ಮಾಡಿದ್ದಾರೆ. ಈ ಮೂಲಕ ನಡಾಲ್ ಪುರುಷರ ಸಿಂಗಲ್ಸ್‌ನಲ್ಲಿ ಅತಿ ಹೆಚ್ಚು ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದ ಆಟಗಾರ ಎನಿಸಿಕೊಂಡಿದ್ದಾರೆ. ರೋಜರ್ ಫೆಡರರ್ ಮತ್ತು ನೊವಾಕ್ ಜೊಕೊವಿಕ್ ಅವರನ್ನು ಹಿಂದಿಕ್ಕಿ ನಡಾಲ್ ಈ ದಾಖಲೆ ಮಾಡಿದ್ದಾರೆ.
-
🇪🇸 @RafaelNadal adds a second #AusOpen title to his resume #AO2022 pic.twitter.com/ChkOR5oqFB
— #AusOpen (@AustralianOpen) January 30, 2022 " class="align-text-top noRightClick twitterSection" data="
">🇪🇸 @RafaelNadal adds a second #AusOpen title to his resume #AO2022 pic.twitter.com/ChkOR5oqFB
— #AusOpen (@AustralianOpen) January 30, 2022🇪🇸 @RafaelNadal adds a second #AusOpen title to his resume #AO2022 pic.twitter.com/ChkOR5oqFB
— #AusOpen (@AustralianOpen) January 30, 2022
ಈ ಪಂದ್ಯದಲ್ಲಿ 35 ವರ್ಷದ ರಾಫೆಲ್ ನಡಾಲ್ ತನಗಿಂತ 10 ವರ್ಷ ಕಿರಿಯ ರಷ್ಯಾದ ತಾರೆಗೆ ಕಠಿಣ ಪೈಪೋಟಿ ನೀಡಿದರು. 11 ವರ್ಷಗಳ ಹಿಂದೆ, ಇದೇ ಟೂರ್ನಿಯ ಫೈನಲ್‌ನಲ್ಲಿ ಐದೂವರೆ ಗಂಟೆಗೂ ಹೆಚ್ಚು ಕಾಲ ನಡೆದ ಪಂದ್ಯದಲ್ಲಿ ನೊವಾಕ್ ಜೊಕೊವಿಕ್ ವಿರುದ್ಧ ನಡಾಲ್ ಸೋಲ ಅನುಭವಿಸಿದ್ದರು. ಇದು ಗ್ರ್ಯಾಂಡ್ ಸ್ಲಾಮ್ ಇತಿಹಾಸದಲ್ಲಿ ಸುದೀರ್ಘ ಫೈನಲ್ ಪಂದ್ಯವಾಗಿತ್ತು.
-
* Bio update *
— #AusOpen (@AustralianOpen) January 30, 2022 " class="align-text-top noRightClick twitterSection" data="
2️⃣1️⃣-time Slam champion#AusOpen • #AO2022 • @RafaelNadal pic.twitter.com/fvDkYjFdbX
">* Bio update *
— #AusOpen (@AustralianOpen) January 30, 2022
2️⃣1️⃣-time Slam champion#AusOpen • #AO2022 • @RafaelNadal pic.twitter.com/fvDkYjFdbX* Bio update *
— #AusOpen (@AustralianOpen) January 30, 2022
2️⃣1️⃣-time Slam champion#AusOpen • #AO2022 • @RafaelNadal pic.twitter.com/fvDkYjFdbX
ಈಗ 11 ವರ್ಷಗಳ ನಂತರ, ನಡಾಲ್ ಮತ್ತೊಂದು ಸುದೀರ್ಘ ಫೈನಲ್ ಪಂದ್ಯವನ್ನು ಆಡುವ ಮೂಲಕ ಜೊಕೊವಿಕ್ ಅವರನ್ನು ಹಿಂದಿಕ್ಕಿದರು. ಇಂದಿನ ಪಂದ್ಯ ಬರೋಬ್ಬರಿ 5 ಗಂಟೆ 24 ನಿಮಿಷಗಳ ಕಾಲ ನಡೆಯಿತು.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ