ಪಾಚೆಸ್ಟ್ತೋಮ್: ಹಾಕಿ ಜೂನಿಯರ್ ವಿಶ್ವಕಪ್ನ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಇಂಗ್ಲೆಂಡ್ ವಿರುದ್ಧ ಪೆನಾಲ್ಟಿ ಶೂಟೌಟ್ನಲ್ಲಿ 0-3ರಿಂದ ಸೋಲು ಕಂಡು ನಿರಾಶೆಯನುಭವಿಸಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ನಿಗಧಿತ ಸಮಯದಲ್ಲಿ ಎರಡೂ ತಂಡಗಳು 2-2ರಲ್ಲಿ ಸಮಬಲ ಸಾಧಿಸಿದ್ದವು. ಪಂದ್ಯಾರಂಭವಾದ 18ನೇ ನಿಮಿಷದಲ್ಲಿ ಮಿಲೀ ಜಿಗ್ಲಿಯೋ ಗೋಲು ಸಿಡಿಸಿ ಇಂಗ್ಲೆಂಡ್ಗೆ ಮುನ್ನಡೆ ತಂದುಕೊಟ್ಟರು.
ಟೂರ್ನಿಯಲ್ಲಿ ಗರಿಷ್ಠ(8) ಗರಿಷ್ಠ ಗೋಲು ಸಿಡಿಸಿರುವ ಭಾರತದ ಮುಮ್ತಾಜ್ ಖಾನ್ 21 ನೇ ನಿಮಿಷದಲ್ಲಿ ಗೋಲು ಸಿಡಿಸಿ ಸಮಬಲಕ್ಕೆ ತಂದರು ಮತ್ತು 47ನೇ ನಿಮಿಷದಲ್ಲಿ ಗೋಲು ಮತ್ತೊಂದು ಗೋಲು ಸಿಡಿಸುವ ಮೂಲಕ 2-1ರಲ್ಲಿ ಭಾರತಕ್ಕೆ ಮುನ್ನಡೆ ತಂದುಕೊಟ್ಟಿದ್ದರು. ಆದರೆ 58ನೇ ನಿಮಿಷದಲ್ಲಿ ಕ್ಲಾಡಿಯಾ ಸ್ವೈನ್ ಇಂಗ್ಲೆಂಡ್ ಪರ ಗೋಲು ಸಿಡಿಸಿ ಸಮಬಲಕ್ಕೆ ತಂದರು. ಕೊನೆಗೆ ಜಯಕ್ಕಾಗಿ ಶೂಟೌಟ್ ಮೊರೆ ಹೋಗಲಾಯಿತು.
-
@TheHockeyIndia captain Salina Tete expresses her pride in the team competing so hard in this contest and throughout the World Cup. pic.twitter.com/x9NQ3E7eNV
— International Hockey Federation (@FIH_Hockey) April 12, 2022 " class="align-text-top noRightClick twitterSection" data="
">@TheHockeyIndia captain Salina Tete expresses her pride in the team competing so hard in this contest and throughout the World Cup. pic.twitter.com/x9NQ3E7eNV
— International Hockey Federation (@FIH_Hockey) April 12, 2022@TheHockeyIndia captain Salina Tete expresses her pride in the team competing so hard in this contest and throughout the World Cup. pic.twitter.com/x9NQ3E7eNV
— International Hockey Federation (@FIH_Hockey) April 12, 2022
ಭಾರತದ ಪರ ಒಲಿಂಪಿಯನ್ ಶರ್ಮಿಳಾ ದೇವಿ, ನಾಯಕಿ ಸಲಿಮಾ ತೆಟೆ ಹಾಗೂ ಸಂಗೀತ ಕುಮಾರಿ ಗೋಲು ಸಿಡಿಸುವಲ್ಲಿ ವಿಫಲರಾದರು. ಇಂಗ್ಲೆಂಡ್ ತಂಡದ ಸ್ಟ್ರೈಕರ್ಗಳು ಮೊದಲ ಮೂರು ಪಯತ್ನದಲ್ಲೂ ಭಾರತೀಯ ಗೋಲು ಪೆಟ್ಟಿಗೆಯೊಳಗೆ ಚೆಂಡನ್ನು ಯಶಸ್ವಿಯಾಗಿ ಸೇರಿಸುವ ಮೂಲಕ ಕಂಚಿನ ಪದಕವನ್ನು ತನ್ನದಾಗಿಸಿಕೊಂಡರು. 2013ರಲ್ಲಿ ಭಾರತದ ವಿರುದ್ಧ ಇದೇ ಹಂತದಲ್ಲಿ ಸೋಲು ಕಂಡಿದ್ದ ಇಂಗ್ಲೆಂಡ್ ಈ ಬಾರಿ ಸೇಡು ತೀರಿಸಿಕೊಂಡಿತು.
ಇದನ್ನೂ ಓದಿ:ಜರ್ಮನಿ ವಿರುದ್ಧ 'ಗೆಲುವಿನ ಗೋಲು' ದಾಖಲಿಸಿದ ಮುಮ್ತಾಜ್ ಅಮ್ಮನ ದಿಲ್‌ಖುಷ್!