ದುಬೈ: 6 ಬಾರಿಯ ವಿಶ್ವ ಚಾಂಪಿಯನ್ ಎಂ ಸಿ ಮೇರಿ ಕೋಮ್ (51ಕೆಜಿ) ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.
ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ ಮಂಗೋಲಿಯಾದ ಲುಟ್ಸೈಖಾನ್ ಅಲ್ಟಾಂಟ್ಸೆಗ್ ಅವರನ್ನು 4-1ರಲ್ಲಿ ಬಗ್ಗಬಡಿದು ಚಿನ್ನದ ಸುತ್ತಿಗೆ ಪ್ರವೇಶಿಸಿದ್ದಾರೆ. ಅಗ್ರ ಶ್ರೇಯಾಂಕಿತೆ ಮೇರಿ ಕೋಮ್ ತನ್ನ ಅಪಾರ ಅನುಭವದಿಂದ ಅಲ್ಟಾಂಟ್ಸೆಗ್ ಅನ್ನು ವಿರುದ್ಧ ಬಲಗೈ ಪಂಚ್ಗಳು ದಿನದ ವಿಶೇಷ ಕ್ಷಣವಾಗಿದ್ದವು. 38 ವರ್ಷದ ಇದೀಗ ಏಷ್ಯನ್ ಚಾಂಪಿಯನ್ಸಿಪ್ನಲ್ಲಿ 6ನೇ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದಾರೆ.
ಆದರೆ, ಇದಕ್ಕೂ ಮುನ್ನ ನಡೆದ ಸೆಮಿಫೈನಲ್ನಲ್ಲಿ ಮೋನಿಕಾ (48 ಕೆ.ಜಿ) ಕಜಕಿಸ್ತಾನದ ಎರಡನೇ ಶ್ರೇಯಾಂಕಿತ ಅಲುವಾ ಬಾಲ್ಕಿಬೆಕೊವಾ ವಿರುದ್ಧ 0-5ರಿಂದ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಬುಧವಾರ ಒಲಿಂಪಿಕ್ಸ್ ಬೌಂಡ್ ಆಶಿಷ್ ಕುಮಾರ್(75ಕೆಜಿ) ಕ್ವಾರ್ಟರ್ ಫೈನಲ್ನಲ್ಲಿ ಕಜಕಿಸ್ತಾನದ ಏಷ್ಯನ್ ಗೇಮ್ ಬೆಳ್ಳಿ ಪದಕ ವಿಜೇತ ಅಬಿಲ್ಖಾನ್ ವಿರುದ್ಧ 2-3ರಲ್ಲಿ ಸೋಲು ಕಂಡಿದ್ದರು. 91ಕೆಜಿ ವಿಭಾಗದಲ್ಲಿ ನರೇಂದರ್ 0-5ರ ಅಂತರದಲ್ಲಿ ಕಜಕಿಸ್ತಾನದ ಕಮ್ಶಿಬೆಕ್ ವಿರುದ್ಧ ಸೋಲು ಕಂಡು ನಿರಾಸೆ ಅನುಭವಿಸಿದರು.
ಇದನ್ನು ಓದಿ: ಏಷ್ಯನ್ ಚಾಂಪಿಯನ್ಶಿಪ್: ಸೆಮಿಫೈನಲ್ಗೆ ಪಂಘಲ್ ವರೀಂದರ್, ಭಾರತಕ್ಕೆ 14 ಪದಕ ಖಚಿತ