ನವದೆಹಲಿ: ಸುಹ್ಲ್‌ನಲ್ಲಿ ನಡೆದ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್‌ನಲ್ಲಿ ಮೂರು ಚಿನ್ನ ಮತ್ತು ಎರಡು ಬೆಳ್ಳಿ ಪದಕ ಗೆದ್ದ ಭಾರತದ ಮಹಿಳಾ ಪಿಸ್ತೂಲ್ ಪಟು ಮನು ಭಾಕರ್ ಬೇಸರ ಹೊರಹಾಕಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಶೂಟಿಂಗ್ ವಿಭಾಗವನ್ನು ಹೊರಗಿಟ್ಟಿರುವ ಕಾರಣ ಭಾರತ ಅದನ್ನು ಬಹಿಷ್ಕರಿಸಬೇಕು ಎಂದು ಹೇಳಿದ್ದಾರೆ.
ಕಳೆದ ಮಂಗಳವಾರ ಸುಹ್ಲ್‌ನಲ್ಲಿ ನಡೆದ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್‌ನ 25 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಫೈನಲ್‌ನಲ್ಲಿ ಮನು ಭಾಕರ್, ಇಶಾ ಸಿಂಗ್ ಮತ್ತು ರಿದಮ್ ಸಾಂಗ್ವಾನ್ ಅವರ ತಂಡ ಆತಿಥೇಯ ಜರ್ಮನಿಯನ್ನು 16-2 ರಿಂದ ಸೋಲಿಸಿ ವಿಜಯಮಾಲೆಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಈ ವರ್ಷದ ಕಾಮನ್‌ವೆಲ್ತ್ ಕ್ರೀಡಾಕೂಟದ ಕುರಿತು ಮಾತನಾಡಿದ ಭಾಕರ್, ಈ ವರ್ಷ ಶೂಟಿಂಗ್ ಕ್ರೀಡೆಯನ್ನು ಕೈ ಬಿಡಲಾಗಿದೆ. ಬಹುಶಃ ಮುಂದಿನ ವರ್ಷದ ಪಂದ್ಯಾವಳಿಯಲ್ಲಿಯೂ ಇದನ್ನು ಮುಂದುವರೆಸಲಾಗುತ್ತದೆ. ಕ್ರೀಡೆಯನ್ನು ಕೈಬಿಡುವುದು ತಪ್ಪು ಎಂದು ನಾನು ಭಾವಿಸುತ್ತೇನೆ. ಪರಿಣಾಮ ಭಾರತ ತಂಡವು ಪಂದ್ಯಾವಳಿಯನ್ನು ಬಹಿಷ್ಕರಿಸಬೇಕು ಎಂಬ ಒತ್ತಾಯಿಸಿದ್ದಾರೆ.
ಜೂನಿಯರ್ ವಿಶ್ವಕಪ್ ಕುರಿತು ಮಾತನಾಡಿದ ಭಾಕರ್, ಈ ಪಂದ್ಯಾವಳಿ ತನಗೆ ತುಂಬಾ ವಿಶೇಷವಾಗಿತ್ತು. ನಾನು ಐದು ಪದಕಗಳು, ಎರಡು ಬೆಳ್ಳಿ ಮತ್ತು ಮೂರು ಚಿನ್ನವನ್ನು ಗೆದ್ದಿದ್ದೇನೆ ಎಂದರು.
ಪ್ರಧಾನಿ ಮೋದಿ ಮತ್ತು ಕ್ರೀಡಾಪಟುಗಳೊಂದಿಗಿನ ಅವರ ಸಂವಾದವು ಅವರನ್ನು ಹೇಗೆ ಪ್ರೇರೇಪಿಸುತ್ತದೆ ಎಂಬುದರ ಕುರಿತು ಮಾತನಾಡಿದ ಭಾಕರ್, ಪ್ರತಿಯೊಬ್ಬ ಕ್ರೀಡಾಪಟುವಿಗೆ ದೇಶದ ಪ್ರಧಾನಿಯನ್ನು ಭೇಟಿಯಾಗಲು ಇದು ಪ್ರೇರೇಪಿಸುತ್ತದೆ. ಆದ್ದರಿಂದ ಇದು ಪ್ರತಿಯೊಬ್ಬ ಆಟಗಾರನಿಗೆ ಹೆಮ್ಮೆ ಮತ್ತು ಗೌರವದ ಕ್ಷಣವಾಗಿದೆ ಎಂದು ವಿವರಿಸಿದರು.
ಇದನ್ನೂ ಓದಿ: ಬರೋಬ್ಬರಿ 72 ಮರಿಗಳಿಗೆ ಜನ್ಮ ನೀಡಿದ ಎರಡು ಮೊಸಳೆ.. ಅರಣ್ಯ ಸಿಬ್ಬಂದಿಯಿಂದ ತೀವ್ರ ನಿಗಾ