ಫುಟ್ಬಾಲ್ ದಿಗ್ಗಜ, ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಲೆಜೆಂಡ್ ಲಿಯೋನೆಲ್ ಮೆಸ್ಸಿ ಫಿಫಾ ವಿಶ್ವಕಪ್ 2022 ಟ್ರೋಫಿಗೆ ಮುತ್ತಿಕ್ಕುವ ಮೂಲಕ ತಮ್ಮ ಬಹುಕಾಲದ ಕನಸನ್ನು ನನಸಾಗಿಸಿಕೊಂಡಿರುವ ವಿಷಯ ತಿಳಿದಿದೆ. ಪ್ರಶಸ್ತಿ ಗೆದ್ದ ಖುಷಿಯಲ್ಲಿ ಮುಳುಗಿರುವ ಮೆಸ್ಸಿ ತಮ್ಮ ಅಭಿಮಾನಿಗಳು ಹಾಗೂ ಹಿಂಬಾಲಕರನ್ನು ಮರೆತಿಲ್ಲ.
ಭಾರತಕ್ಕೆ ಗಿಫ್ಟ್ ಕಳುಹಿಸಿದ ಲಿಯೋನೆಲ್ ಮೆಸ್ಸಿ: ಭಾರತದಲ್ಲೂ ಮೆಸ್ಸಿಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ ಎಂಬುದು ಗೊತ್ತೇ ಇದೆ. ಧೋನಿ ಮತ್ತು ಕೊಹ್ಲಿಯಂತಹ ಕ್ರಿಕೆಟಿಗರು ಅವರನ್ನು ಅನುಸರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಧೋನಿ ಪುತ್ರಿ ಜೀವಾಗೆ ಮೆಸ್ಸಿ ತಾವು ಸಹಿ ಮಾಡಿರುವ ಅರ್ಜೆಂಟೀನಾ ಜೆರ್ಸಿಯನ್ನು ಕಳುಹಿಸಿದ್ದಾರೆ. ಜೆರ್ಸಿ ಕಳುಹಿಸುವ ಮೂಲಕ ಭಾರತದ ಮೇಲಿರುವ ತಮ್ಮ ಪ್ರೀತಿಯನ್ನು ಮೆಸ್ಸಿ ಮೆರೆದಿದ್ದಾರೆ.
ಜೆರ್ಸಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಜೀವಾ: ಆ ಜೆರ್ಸಿಯನ್ನು ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿರುವ ಧೋನಿ ಪುತ್ರಿ ಜೀವಾ.. ಖುಷಿಯಲ್ಲಿ ಮುಳುಗಿದ್ದರು. ಮೆಸ್ಸಿ ಕಳುಹಿಸಿರುವ ಜೆರ್ಸಿಯಲ್ಲಿ 'ಫಾರ್ ಲೈಫ್' ಎಂದು ಬರೆದು ಸಹಿ ಮಾಡಿದ್ದಾರೆ. ಈ ಹಿಂದೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ಮೆಸ್ಸಿ ಇದೇ ರೀತಿಯ ಜೆರ್ಸಿ ಕಳುಹಿಸಿದ್ದರು ಎಂದು ಸ್ಪಿನ್ನರ್ ಪ್ರಗ್ಯಾನ್ ಓಜಾ ಬಹಿರಂಗಪಡಿಸಿದ್ದು ಗೊತ್ತೇ ಇದೆ.
ದಾಖಲೆಗಳ ಸರ್ದಾರ ಲಿಯೋನೆಲ್ ಮೆಸ್ಸಿ: ದಾಖಲೆಗಳ ವೀರ ಲಿಯೋನೆಲ್ ಮೆಸ್ಸಿ ಫಿಫಾ ವಿಶ್ವಕಪ್‌ನಲ್ಲಿ ಫ್ರಾನ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ ಹೊಸ ದಾಖಲೆಗಳನ್ನು ಬರೆದಿದ್ದಾರೆ. ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ ಪ್ರತಿ ಸುತ್ತಿನಲ್ಲೂ ಸ್ಕೋರ್ ಮಾಡಿದ ಮೊದಲ ಪುರುಷ ಆಟಗಾರ ಎಂಬ ಹೆಗ್ಗಳಿಕೆಗೆ ಮೆಸ್ಸಿ ಪಾತ್ರರಾಗಿದ್ದಾರೆ.
ಮೆಸ್ಸಿ ಒಂದೇ ವಿಶ್ವಕಪ್‌ನಲ್ಲಿ ಹೆಚ್ಚಿನ ಪೆನಾಲ್ಟಿ ಗೋಲುಗಳನ್ನು ಹೊಂದಿದ್ದಾರೆ. ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ಪರ ಹೆಚ್ಚಿನ ಗೋಲುಗಳನ್ನು ಗಳಿಸಿದ್ದು, ನಾಕೌಟ್ ಹಂತದ ಎಲ್ಲ ಪಂದ್ಯಗಳಲ್ಲಿ ಹೆಚ್ಚಿನ ಗೋಲುಗಳನ್ನು ಗಳಿಸಿದ್ದಾರೆ. ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ ಎಂಬ ಜರ್ಮನ್ ಲೆಜೆಂಡ್ ಲೋಥರ್ ಮ್ಯಾಥ್ಯೂಸ್ ಅವರ ದಾಖಲೆಯನ್ನೂ ಮೆಸ್ಸಿ ಹಿಂದಿಕ್ಕಿದ್ದಾರೆ. ಫಿಫಾ ವಿಶ್ವಕಪ್‌ನ ಐದು ಆವೃತ್ತಿಗಳಲ್ಲಿ ಆಡಿದ ಕೇವಲ ಆರು ಜನ ಆಟಗಾರರಲ್ಲಿ ಒಬ್ಬರಾದ ಮೆಸ್ಸಿ ತಮ್ಮ 26ನೇ ಪಂದ್ಯಗಳಲ್ಲಿ ಮಿಂಚಿದ್ದಾರೆ. ಈ ಹಿಂದೆ ಮ್ಯಾಥ್ಯೂಸ್ 25 ಪಂದ್ಯಗಳನ್ನು ಆಡಿದ ದಾಖಲೆಯನ್ನು ಹೊಂದಿದ್ದರು.
ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಮಯು ಆಟವಾಡಿದ ದಾಖಲೆಯನ್ನು ಮೆಸ್ಸಿ ಬರೆದಿದ್ದಾರೆ. ಈ ಮೂಲಕ ಇಟಲಿಯ ದಂತಕಥೆ ಪಾವೊಲೊ ಮಾಲ್ದಿನಿ ಅವರ ದಾಖಲೆಯನ್ನು ಮೆಸ್ಸಿ ಮುರಿದಿದ್ದಾರೆ. ಫೈನಲ್ ಪಂದ್ಯದಲ್ಲಿ 23 ನಿಮಿಷಗಳ ಆಟ ಪೂರೈಸು ಮೂಲಕ ಮೆಸ್ಸಿ 2217 ನಿಮಿಷಗಳ ಕಾಲ ಆಡಿದ ದಾಖಲೆಯನ್ನು ಮೆಸ್ಸಿ ಬರೆದರು. ಅಷ್ಟೇ ಅಲ್ಲ, ಅಂದು ಫೈನಲ್ ಪಂದ್ಯದಲ್ಲಿ ಗೋಲು ಗಳಿಸುವ ಮೂಲಕ ಮೆಸ್ಸಿ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ಪರ ಅತಿ ಹೆಚ್ಚು ಗೋಲು (12) ಗಳಿಸಿದ ದಾಖಲೆಯನ್ನೂ ಹೊಂದಿದ್ದಾರೆ.
ಫ್ರಾನ್ಸ್ ವಿರುದ್ಧ ಭರ್ಜರಿ ಗೆಲುವು: ಕತಾರ್‌ನ ಲುಸೇಲ್ ಸ್ಟೇಡಿಯಂ ರಣರೋಚಕ ಫುಟ್ಬಾಲ್ ಫೈನಲ್ ಪಂದ್ಯಕ್ಕೆ ಸಾಕ್ಷಿಯಾಯಿತು. ವಿಶ್ವಕಪ್ ಫೈನಲ್ ಹಣಾಹಣಿಯಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಫ್ರಾನ್ಸ್ ತಂಡವನ್ನು 4-2 ಗೋಲುಗಳಿಂದ ಸೋಲಿಸಿದ ಅರ್ಜೆಂಟೀನಾ 36 ವರ್ಷಗಳ ಬಳಿಕ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು. ವಿಶ್ವದ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾದ ಲಿಯೋನೆಲ್ ಮೆಸ್ಸಿ ಮತ್ತು ಫ್ರಾನ್ಸ್ನ ಯುವ ತಾರೆ ಕೈಲಿಯನ್ ಎಂಬಪ್ಪೆ ಅದ್ಭುತ ಆಟ ಪ್ರದರ್ಶಿಸಿದ್ದರು. ಫೈನಲ್ ಪಂದ್ಯದಲ್ಲಿ ಮೆಸ್ಸಿ ಎರಡು ಮತ್ತು ಎಂಬಪ್ಪೆ ಮೂರು ಗೋಲು ಗಳಿಸಿ ಅಭಿಮಾನಿಗಳ ಹೃದಯ ಗೆದ್ದರು.
ಓದಿ: ಅಂತಾರಾಷ್ಟ್ರೀಯ ಪವರ್ ಲಿಫ್ಟಿಂಗ್‌ಗೆ ಗುಮ್ಮಟನಗರಿಯ ಬಹುಮುಖ ಪ್ರತಿಭೆ ಆಯ್ಕೆ