ಬೆಂಗಳೂರು: ದೀಪಕ್ ನಿವಾಸ್ ಹೂಡ ರೈಡಿಂಗ್ ಮತ್ತು ಶೌಲ್ ಕುಮಾರ್ ಅವರ ಅದ್ಭುತ ಡಿಫೆಂಡಿಂಗ್ ಮುಂದೆ ಮಂಕಾದ ದಬಾಂಗ್ ಡೆಲ್ಲಿ ಟೂರ್ನಿಯಲ್ಲಿ ಮೊದಲ ಸೋಲು ಕಂಡಿದೆ.
ಸೋಮವಾರ ನಡೆದ 2ನೇ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಸತತ 2ನೇ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಈ ಪಂದ್ಯವನ್ನೂ ಸೋತರೂ ಡೆಲ್ಲಿ ತಂಡ ಅಗ್ರಸ್ಥಾನದಲ್ಲೇ ಮುಂದುವರೆದಿದೆ.
ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಶೌಲ್ ಕುಮಾರ್ ರೈಡಿಂಗ್ನಲ್ಲಿ ಶತಕ ಬಾರಿಸಿ ಮುನ್ನುಗ್ಗುತ್ತಿದ್ದ ಡೆಲ್ಲಿ ತಂಡದ ನವೀನ್ ಕುಮಾರ್ರನ್ನು ಮಂಕಾಗಿಸಿದರು. ಅವರು 7 ಟ್ಯಾಕಲ್ ಅಂಕಗಳ ಜೊತೆಗೆ ಒಟ್ಟು 8 ಅಂಕ ಪಡೆದು ಮಿಂಚಿದರೆ, ಹಿಂದಿನ ಮೂರು ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದ ನಾಯಕ ದೀಪಕ್ ನಿವಾಸ್ ಹೂಡ 9 ಅಂಕ ಪಡೆದರು. ಆದರೆ ಸ್ಟಾರ್ ರೈಡರ್ ಅರ್ಜುನ್ ದೇಶ್ವಾಲ್ ಇಂದು ಕೇವಲ 7 ಅಂಕಗಳಿಗೆ ಸೀಮಿತರಾದರು. ಅವರು ಈ ಹಿಂದಿನ ಎಲ್ಲಾ ಪಂದ್ಯಗಳಲ್ಲಿ ಸೂಪರ್ 10 ಸಾಧಿಸಿದ್ದರು.
-
Undefeated?
— ProKabaddi (@ProKabaddi) January 10, 2022 " class="align-text-top noRightClick twitterSection" data="
Say no more 😉
And that's how the Panthers prowl 😎@JaipurPanthers outperform @DabangDelhiKC in a thrilling encounter, handing them their first defeat of the season 🤯#SuperhitPanga #JPPvDEL pic.twitter.com/cUFOROpmgr
">Undefeated?
— ProKabaddi (@ProKabaddi) January 10, 2022
Say no more 😉
And that's how the Panthers prowl 😎@JaipurPanthers outperform @DabangDelhiKC in a thrilling encounter, handing them their first defeat of the season 🤯#SuperhitPanga #JPPvDEL pic.twitter.com/cUFOROpmgrUndefeated?
— ProKabaddi (@ProKabaddi) January 10, 2022
Say no more 😉
And that's how the Panthers prowl 😎@JaipurPanthers outperform @DabangDelhiKC in a thrilling encounter, handing them their first defeat of the season 🤯#SuperhitPanga #JPPvDEL pic.twitter.com/cUFOROpmgr
ಇತ್ತ ಡೆಲ್ಲಿ ತಂಡದ ರೈಡಿಂಗ್ ಬಳಗದ ಪ್ರಮುಖ ಅಸ್ತ್ರವಾಗಿದ್ದ ನವೀನ್ ಎಕ್ಸ್ಪ್ರೆಸ್ ಇಂದು ಕೇವಲ 7 ಅಂಕಗಳನ್ನು ಮಾತ್ರ ಪಡೆದರು. ಆಶು ಮಲಿಕ್ 8, ಲೆಜೆಂಡರಿ ಡಿಫೆಂಡರ್ ಮಂಜಿತ್ ಚಿಲ್ಲರ್ 4 ಮತ್ತು ಸಂದೀಪ್ ನರ್ವಾಲ್ 3 ಅಂಕ ಪಡೆದರಾದರೂ ರೈಡರ್ಗಳು ವೈಫಲ್ಯ ಅನುಭವಿಸಿದ್ದರಿಂದ 2 ಅಂಕಗಳ ರೋಚಕ ಸೋಲು ಕಾಣಬೇಕಾಯಿತು.
ಮತ್ತೊಂದು ಪಂದ್ಯದಲ್ಲಿ ತಮಿಳ್ ತಲೈವಾಸ್ ಆಲ್ರೌಂಡರ್ ಪ್ರದರ್ಶನ ತೋರಿ 45-26 ಅಂಕಗಳ ಅಂತರದಿಂದ ಹರಿಯಾಣ ಸ್ಟೀಲರ್ಸ್ ವಿರುದ್ಧ ಗೆಲುವು ಸಾಧಿಸಿತು. ರೈಡರ್ ಮಂಜಿತ್ 10 ಅಂಕ ಪಡೆದರೆ, ಡಿಫೆಂಡರ್ಗಳಾದ ಸುರ್ಜೀತ್ ಸಿಂಗ್ 8 , ಸಾಗರ್ 7 ಅಂಕ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ವಿಕಾಶ್ ಖಂಡೋಲ ಹರಿಯಾಣ ಪರ 9 ಅಂಕ ಪಡೆದರು.
ಇದನ್ನೂ ಓದಿ:ನಾಯಕತ್ವಕ್ಕಾಗಿ ಹರಾಜಿನಲ್ಲಿ ಶ್ರೇಯಸ್ ಅಯ್ಯರ್ ಖರೀದಿಸಲು ಎರಡು ತಂಡಗಳಿಂದ ಪೈಪೋಟಿ