ಲಿಮಾ (ಪೆರು): ಭಾರತದ ಮಹಿಳಾ ಶೂಟರ್ಗಳ ತಂಡ ಪೆರು ದೇಶದ ಲಿಮಾದಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ಜೂನಿಯರ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದು ಸಂಭ್ರಮಿಸಿದೆ.
25 ಮೀಟರ್ ಪಿಸ್ತೂಲ್ ಇವೆಂಟ್ನಲ್ಲಿ ಮನು ಭಾಕರ್, ರಿದಮ್ ಸಾಂಗ್ವಾನ್ ಮತ್ತು ನಮ್ಯಾ ಕಪೂರ್ ಅವರಿದ್ದ ಭಾರತೀಯ ತಂಡ ಅಮೆರಿಕದ ಅಬ್ಬಿ ರಸೆಲ್ ಲೆವೆರೆಟ್, ಕಟೆಲಿನ್ ಮಾರ್ಗನ್ ಅಬೆಲ್ನ್ ಮತ್ತು ಅದಾ ಕ್ಲೌಡಿಯಾ ಕೊರ್ಕಿನ್ ಅವರಿದ್ದ ತಂಡವನ್ನು ಫೈನಲ್ನಲ್ಲಿ 16-4 ಗೋಲುಗಳಿಂದ ಸೋಲಿಸಿ ಚಿನ್ನದ ಸಾಧನೆ ಮಾಡಿದರು.
25 ಮೀಟರ್ ರ್‍ಯಾಪಿಡ್ ಫೈರ್ ಪಿಸ್ತೂಲ್ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ವಿಭಾಗದಲ್ಲಿ ತಂಡ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದೆ.
ಇದಕ್ಕೂ ಮೊದಲು 14 ವರ್ಷದ ನಾಯ್ಮ ಕಪೂರ್ ಮನು ಭಾಕರ್ ಅವರ ಜೊತೆಗೂಡಿ ಲಿಮಾದ ಲಾಸ್ ಪಲ್ಮಾಸ್ ಶೂಟಿಂಗ್ ರೇಂಜ್ನಲ್ಲಿ 25 ಮೀಟರ್ ಪಿಸ್ತೂಲ್ ಫೈರ್ ವಿಭಾಗದಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.
ಈಗ ಜೂನಿಯರ್ ವಿಶ್ವಚಾಂಪಿಯನ್ಶಿಪ್ನಲ್ಲಿ ಭಾರತೀಯ ಶೂಟರ್ಗಳು 19 ಪದಕಗಳನ್ನು ಗೆದ್ದಿದ್ದು, ಪದಕ ಬೇಟೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಇತಿಹಾಸ ಬರೆದ ಕುಸ್ತಿಪಟು ಅನ್ಶು ಮಲಿಕ್.. ವಿಶ್ವಚಾಂಪಿಯನ್ಶಿಪ್ನಲ್ಲಿ ಫೈನಲ್ಗೇರಿದ ಮೊದಲ ಭಾರತೀಯ ಮಹಿಳೆ