ETV Bharat / sports

ಟ್ರಾಪ್​ ಶೂಟಿಂಗ್​ ಪುರುಷರ ವಿಭಾಗದಲ್ಲಿ ಭಾರತಕ್ಕೆ ಚಿನ್ನ.. ಮಹಿಳಾ ವಿಭಾಗಕ್ಕೆ ಬೆಳ್ಳಿ - ಏಷ್ಯನ್ ಗೇಮ್ಸ್‌ನ 8 ನೇ ದಿನ

Asian Games 2023:ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್​ನಲ್ಲಿ ಇಂದು ಭಾರತ ಟ್ರ್ಯಾಪ್ ಶೂಟಿಂಗ್​ನಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕವನ್ನು ಬಾಚಿಕೊಂಡಿದೆ.

ಟ್ರಾಪ್​ ಶೂಟಿಂಗ್​ ಪುರುಷರ ವಿಭಾಗ
ಟ್ರಾಪ್​ ಶೂಟಿಂಗ್​ ಪುರುಷರ ವಿಭಾಗ
author img

By PTI

Published : Oct 1, 2023, 11:45 AM IST

ಹ್ಯಾಂಗ್‌ಝೌ(ಚೀನಾ): ಏಷ್ಯನ್ ಗೇಮ್ಸ್‌ನ 8 ನೇ ದಿನವಾದ ಇಂದು ಪುರುಷರ ಟ್ರ್ಯಾಪ್ ಶೂಟಿಂಗ್‌ ವಿಭಾಗದಲ್ಲಿ ಭಾರತದ ಪೃಥ್ವಿರಾಜ್ ತೊಂಡೈಮಾನ್, ಕಿನಾನ್ ಚೆನೈ ಮತ್ತು ಜೊರಾವರ್ ಸಿಂಗ್ ಸಂಧು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಈ ಗೆಲುವಿಗೂ ಮುನ್ನ, ಮಹಿಳಾ ಟ್ರ್ಯಾಪ್ ಶೂಟಿಂಗ್​ ವಿಭಾಗದಲ್ಲಿ ಮನೀಶಾ ಕೀರ್, ಪ್ರೀತಿ ರಜಾಕ್ ಮತ್ತು ರಾಜೇಶ್ವರಿ ಕುಮಾರಿ ಅವರು ಬೆಳ್ಳಿ ಪದಕವನ್ನು ಪಡೆದಿದ್ದು, ಭಾರತ ತಂಡ ಈ ಬಾರಿಯ ಏಷ್ಯನ್ ಗೇಮ್ಸ್​ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದೆ.

ಭಾರತದ ಪುರುಷರು 361 ಶೂಟ್ ಮಾಡಿ ಚಿನ್ನ ಮುಡಿಗೇರಿಸಿಕೊಂಡರೆ, ಖಲೀದ್ ಅಲ್ಮುದಾಫ್, ತಲಾಲ್ ಅಲ್ರಾಶಿದಿ ಮತ್ತು ಅಬ್ದುಲ್ರಹ್ಮಾನ್ ಅಲ್ಫೈಹಾನ್ (359) ಶೂಟ್​ನಿಂದ ಬೆಳ್ಳಿ ಪದಕಕ್ಕೆ ಅರ್ಹರಾದರು. ಹಾಗೇ ಆತಿಥೇಯ ಚೀನಾದ ಯುಹಾವೊ ಗುವೊ, ಯಿಂಗ್ ಕಿ ಮತ್ತು ಯುಹಾವೊ ವಾಂಗ್ (354) ಶೂಟ್​ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

ಟ್ರಾಪ್​ ಶೂಟಿಂಗ್​ ಪುರುಷರ ವಿಭಾಗ
ಟ್ರಾಪ್​ ಶೂಟಿಂಗ್​ ಮಹಿಳಾ ವಿಭಾಗಕ್ಕೆ ಬೆಳ್ಳಿ

ಕೊನೆಯದಾಗಿ ಶೂಟ್ ಮಾಡಿದ ಅಲ್ರಾಶಿದಿ ತನ್ನ ಅತ್ಯುತ್ತಮ ಪ್ರಯತ್ನದಿಂದ ಶೂಟ್​ ಮಾಡಿ 24 ಅಂಕಗಳನ್ನು ಗಳಿಸಿದರು. ಆದರೆ ಆ ಅಂಕ ಭಾರತದ ಮೊತ್ತವನ್ನು ಮೀರಿಸುವಲ್ಲಿ ವಿಫಲವಾಗಿದೆ. ಇದರ ನಡುವೆ ಭಾರತ ಮಹಿಳಾ ತಂಡವು ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಒಟ್ಟು 337 ಅಂಕ​ಗಳಿಸಿ ದ್ವಿತೀಯ ಸ್ಥಾನ ಪಡೆದರು. ಕಜಕಿಸ್ತಾನದ ಮರಿಯಾ ಡಿಮಿಟ್ರಿಯೆಂಕೊ, ಐಜಾನ್ ಡೊಸ್ಮಗಂಬೆಟೊವಾ ಮತ್ತು ಅನಸ್ತಾಸಿಯಾ ಪ್ರಿಲೆಪಿನಾ (336) ಶೂಟ್​ ಮೂಲಕ ಕಂಚಿನ ಪದಕ ಪಡೆದರು.

  • 🥈 Bang On Target! 🎯

    Our Women's Trap Shooting Team:
    🌟 #KheloIndiaAthletes Manisha Keer and Preeti Rajak
    🌟 @RiaKumari7

    Aimed high and hit the mark, securing the SILVER🥈 medal for India! 🇮🇳

    Let's cheer out loud for our sharpshooters for their incredible achievement! 🙌🥈… pic.twitter.com/Wvf1lV6vQp

    — SAI Media (@Media_SAI) October 1, 2023 " class="align-text-top noRightClick twitterSection" data=" ">

ಜೊತೆಗೆ ಭಾರತೀಯ ತಂಡದ ಮನೀಶಾ ಕೀರ್​ ಕೂಡ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಆಕೆ ಇತರ ಮೂರು ಸ್ಪರ್ಧಿಗಳ ಜೊತೆ 114 ರನ್‌ಗೆ ಟೈ ಆದರೂ, ಶೂಟ್-ಆಫ್ ಮೂಲಕ ಮುನ್ನಡೆದರು. ಜತೆಗೆ ಪುರುಷರ ಸ್ಪರ್ಧೆಯಲ್ಲಿ ಕಿನಾನ್ ಚೆನೈ (122) ಮತ್ತು ಜೋರಾವರ್ ಸಿಂಗ್ ಸಂಧು (120) ಕೂಡ ವೈಯಕ್ತಿಕ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ.

ಇದನ್ನೂ ಓದಿ: Asian Games 2023: 10000 ಮೀ ಓಟದಲ್ಲಿ ಭಾರತಕ್ಕೆ ಎರಡು ಪದಕದ ಗರಿ.. ಕಾರ್ತಿಕ್​ಗೆ ಬೆಳ್ಳಿ, ಗುಲ್ವೀರ್​​ಗೆ ಕಂಚು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.