ETV Bharat / sports

ಇಗಾ, ರಾಫೆಲ್ ನಡಾಲ್​​ಗೆ ಐಟಿಎಫ್ ವಿಶ್ವ ಚಾಂಪಿಯನ್ 2022ರ ಕಿರೀಟ - 2022 ರ ಐಟಿಎಫ್ ವಿಶ್ವ ಚಾಂಪಿಯನ್ ಪ್ರಶಸ್ತಿ

ಎಟಪಿ ರ್‍ಯಾಂಕಿಂಗ್​ನಲ್ಲಿ 2 ಸ್ಥಾನದಲ್ಲಿದ್ದರೂ ನಡಾಲ್​ ಅವರಿಗೆ ಪ್ರಶಸ್ತಿ ನೀಡಲಾಗಿದೆ. ಸ್ವಿಯಾಟೆಕ್ WTA ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ನಡಾಲ್ 2008, 2010, 2017 ಮತ್ತು 2019 ಸೇರಿದಂತೆ ಒಟ್ಟಾರೆ ಐದನೇ ಬಾರಿ ಎಟಿಎಫ್​​ ವಿಶ್ವಚಾಂಪಿಯನ್​ ಶಿಪ್​ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

Iga Swiatek, Rafael Nadal crowned ITF World Champions 2022
ಇಗಾ, ರಾಫೆಲ್ ನಡಾಲ್​​ಗೆ ಐಟಿಎಫ್ ವಿಶ್ವ ಚಾಂಪಿಯನ್ 2022ರ ಕಿರೀಟ
author img

By

Published : Dec 16, 2022, 7:50 AM IST

ಲಂಡನ್(ಇಂಗ್ಲೆಂಡ್​): ಈ ಋತುವಿನಲ್ಲಿ ಎರಡು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಕ್ಕಾಗಿ ಪೋಲೆಂಡ್​ ತಾರೆ ಇಗಾ ಸ್ವಿಟೆಕ್ ಮತ್ತು ಸ್ಪ್ಯಾನಿಷ್ ದಂತಕಥೆ ರಾಫೆಲ್ ನಡಾಲ್​ಗೆ ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್ 2022 ರ ಐಟಿಎಫ್ ವಿಶ್ವ ಚಾಂಪಿಯನ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ITF ಎಲ್ಲ ಈವೆಂಟ್‌ಗಳನ್ನು ಒಳಗೊಂಡಿರುವ ಮಾನದಂಡಗಳ ಆಧಾರದ ಮೇಲೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ನಾಲ್ಕು ಪ್ರಮುಖ ಚಾಂಪಿಯನ್‌ಶಿಪ್‌ಗಳು ಮತ್ತು ಎರಡು ಟೀಮ್ ಈವೆಂಟ್‌ಗಳಿಗೆ ವಿಶೇಷ ಮಹತ್ವ ನೀಡಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಬಿಲ್ಲಿ ಜೀನ್ ಕಿಂಗ್ ಕಪ್ ಮತ್ತು ಡೇವಿಸ್ ಕಪ್​ಗೆ ಸಹ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ.

ಎಟಪಿ ರ್‍ಯಾಂಕಿಂಗ್​ನಲ್ಲಿ 2 ಸ್ಥಾನದಲ್ಲಿದ್ದರೂ ನಡಾಲ್​ ಅವರಿಗೆ ಪ್ರಶಸ್ತಿ ನೀಡಲಾಗಿದೆ. ಸ್ವಿಯಾಟೆಕ್ WTA ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ನಡಾಲ್ 2008, 2010, 2017 ಮತ್ತು 2019 ಸೇರಿದಂತೆ ಒಟ್ಟಾರೆ ಐದನೇ ಬಾರಿ ಎಟಿಎಫ್​​ ವಿಶ್ವಚಾಂಪಿಯನ್​ ಶಿಪ್​ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಅವರು ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್ ಮತ್ತು ಫ್ರೆಂಚ್ ಓಪನ್ ಗೆಲ್ಲುವ ಮೂಲಕ ದಾಖಲೆಯ 22 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದು ಸಾಧನೆ ಮಾಡಿದ್ದಾರೆ. ಇನ್ನು ಮಹಿಳಾ ವಿಭಾಗದಲ್ಲಿ ಪೊಲೇಂಡ್​​ನ ಸ್ವಿಯಾಟೆಕ್ ತಮ್ಮ ಚೊಚ್ಚಲ ITF ಚಾಂಪಿಯನ್‌ಶಿಪ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಫ್ರೆಂಚ್ ಓಪನ್ ಮತ್ತು ಯುಎಸ್ ಓಪನ್ ಗೆದ್ದ ನಂತರ ಪ್ರತಿಷ್ಠಿತ ಐಟಿಎಫ್​ ಚಾಂಪಿಯನ್​ಶಿಪ್​​ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ವರ್ಷ ಸ್ವಿಯಾಟಿಕ್​ ಒಟ್ಟು ಎಂಟು ಪ್ರಶಸ್ತಿಗಳೊಂದಿಗೆ WTA ದಲ್ಲಿ ಪಾರಮ್ಯ ಮೆರೆದಿದ್ದಾರೆ. 1997 ರಿಂದ ಮಹಿಳಾ ಟೆನಿಸ್‌ನಲ್ಲಿ ದೀರ್ಘಾವಧಿಯ ಅಜೇಯ ಓಟ ಆಗಿರುವುದು ವಿಶೇಷ.

ಇತರ ITF ವಿಶ್ವ ಚಾಂಪಿಯನ್‌ ಪ್ರಶಸ್ತಿಗಳು

  1. ಮಹಿಳೆಯರ ಡಬಲ್ಸ್‌ನಲ್ಲಿ ಬಾರ್ಬೊರಾ ಕ್ರೆಜ್‌ಸಿಕೋವಾ ಮತ್ತು ಕಟೆರಿನಾ ಸಿನಿಯಾಕೋವಾ
  2. ಪುರುಷರ ಡಬಲ್ಸ್‌ನಲ್ಲಿ ರಾಜೀವ್ ರಾಮ್ ಮತ್ತು ಜೋ ಸಾಲಿಸ್‌ಬರಿ
  3. ಮಹಿಳೆಯರ ಗಾಲಿಕುರ್ಚಿ ಟೆನಿಸ್‌ನಲ್ಲಿ ಡೈಡೆ ಡಿ ಗ್ರೂಟ್
  4. ಪುರುಷರ ಗಾಲಿಕುರ್ಚಿ ಟೆನಿಸ್‌ನಲ್ಲಿ ಶಿಂಗೊ ಕುನಿಡಾ
  5. ಕ್ವಾಡ್ ವೀಲ್‌ಚೇರ್ ಟೆನಿಸ್‌ನಲ್ಲಿ ನೀಲ್ಸ್ ವಿಂಕ್
  6. ಎಟಿಎಫ್​ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಇದನ್ನು ಓದಿ: ಮೊರಾಕ್ಕೊ ಮೊದಲ ಫೈನಲ್​ ಆಸೆಗೆ ತಣ್ಣೀರೆರಚಿದ ಫ್ರಾನ್ಸ್​... 2-0 ಗೋಲುಗಳಿಂದ ಗೆದ್ದು ಫೈನಲ್​ಗೆ ಎಂಟ್ರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.