ETV Bharat / sports

"ನಾನು ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ": ಪ್ಯಾರಿಸ್ ಒಲಿಂಪಿಕ್​​ಗೆ ಸಿಂಧು ಸಿದ್ಧತೆ​

author img

By

Published : Feb 14, 2023, 3:50 PM IST

ಎಡ ಪಾದದ ಒತ್ತಡದ ಮುರಿತದಿಂದ ಚೇತರಿಸಿಕೊಂಡಿರುವ ಪಿವಿ ಸಿಂಧು - ಬ್ಯಾಡ್ಮಿಂಟನ್ ಏಷ್ಯಾ ಮಿಶ್ರ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡಿರುವ ಸಿಂಧು - ಪ್ಯಾರಿಸ್​ ಒಲಂಪಿಕ್​ನಲ್ಲಿ ಸ್ಥಾನ ಪಡೆಯಲು ಸಿಂಧು ಚಿಂತನೆ

PV Sindhu
ಪಿವಿ ಸಿಂಧು

ದುಬೈ: ಪಿವಿ ಸಿಂಧು ಅವರು ಆಗಸ್ಟ್ 2022 ರಲ್ಲಿ ಎಡ ಪಾದದ ಮೇಲಿನ ಒತ್ತಡದ ಮುರಿತದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. 2023 ರಲ್ಲಿ ನೂರು ಪ್ರತಿಶತದಷ್ಟು ಮಾನಸಿಕ ಮತ್ತು ದೈಹಿಕವಾಗಿ ಸಿದ್ಧವಾಗಿದ್ದೇನೆ ಎಂದು ಹೇಳಿದ್ದಾರೆ. ಇಂದು ದುಬೈನಲ್ಲಿ ಆರಂಭವಾಗಲಿರುವ ಬ್ಯಾಡ್ಮಿಂಟನ್ ಏಷ್ಯಾ ಮಿಶ್ರ ಚಾಂಪಿಯನ್‌ಶಿಪ್‌ನಲ್ಲಿ ಸಿಂಧು ಭಾರತದ ಪರವಾಗಿ ತಮ್ಮ ಆಟವನ್ನು ಮುಂದುವರೆಸಲಿದ್ದಾರೆ.

ಕಳೆದ ವರ್ಷ ಸಿಂಧು ಅವರು ಸೈಯದ್ ಮೋದಿ ಇಂಟರ್‌ನ್ಯಾಶನಲ್, ಸ್ವಿಸ್ ಓಪನ್ ಮತ್ತು ಸಿಂಗಾಪುರ್ ಓಪನ್ ಪ್ರಶಸ್ತಿಗಳನ್ನು ಗೆದ್ದುಕೊಂಡರು. ಅಲ್ಲದೇ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಮಹಿಳೆಯರ ಸಿಂಗಲ್ಸ್ ಚಿನ್ನವನ್ನು ಗೆದ್ದರು, ಇದು ಅವರ ಮೊದಲ CWG ಪ್ರಶಸ್ತಿಯಾಗಿದೆ. ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್​ನ ಪ್ರಕಾರ ಪಿವಿ ಸಿಂಧು ಅವರ ಅತ್ಯುತ್ತಮ ವರ್ಲ್ಡ್ ಟೂರ್ ಸೀಸನ್ ಕಳೆದ ವರ್ಷದ್ದಾಗಿತ್ತು. ಆಗಸ್ಟ್‌ನಲ್ಲಿ ಸಿಂಧು ಅವರ ಎಡ ಪಾದದ ಮೇಲೆ ಒತ್ತಡ ಉಂಟಾದ ಕಾರಣ ಮುರಿತಕ್ಕೆ ಕಾರಣ ಆಗಿತ್ತು. ಇದರಿಂದ 5 ತಿಂಗಳ ಕಾಲ ಸ್ಪರ್ಧೆಗಳಿಂದ ಹೊರಗುಳಿದಿದ್ದರು. ಪ್ರಸ್ತುತ ಮಹಿಳಾ ಸಿಂಗಲ್ಸ್ ಆಟಗಾರರ ವಿಶ್ವ ರ್‍ಯಾಂಕಿಂಗ್‌ನಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದಾರೆ.

"ನಾನು ಈಗ ಸಂಪೂರ್ಣವಾಗಿ ಚೆನ್ನಾಗಿದ್ದೇನೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ನಾನು ಸಂಪೂರ್ಣವಾಗಿ ಕ್ಷೇಮವಾಗಿದ್ದೇನೆ. ಗಾಯಗಳು ಆಗುವುದು ಕಾಮನ್​, ಆದರೆ ನಿಮ್ಮ ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಮತ್ತು ಪ್ರತಿ ಬಾರಿ ಬಲವಾಗಿ ಹಿಂತಿರುಗುವುದು ಮುಖ್ಯವಾಗಿದೆ. ನಾನು ಆತ್ಮವಿಶ್ವಾಸ, ಧನಾತ್ಮಕ ಮತ್ತು ನನ್ನ ತಪ್ಪುಗಳಿಂದ ಕಲಿಯುತ್ತಿದ್ದೇನೆ. ನನ್ನ ಹೆತ್ತವರು ಸಹ ಕ್ರೀಡಾಪಟುಗಳಾಗಿದ್ದರು. ಅವರು ನನಗೆ ನೀಡುವ ಬೆಂಬಲ ಮತ್ತು ಪ್ರೇರಣೆಯು ನನ್ನನ್ನು ಕಡಿಮೆ ಸಮಯದಲ್ಲಿ ಮತ್ತೆ ಕ್ರೀಡೆಯಲ್ಲಿ ಭಾಗವಹಿಸುವಂತೆ ಮಾಡಿದೆ" ಎಂದು ಸಿಂಧು ಹೇಳಿದರು.

2024 ರ ಪ್ಯಾರಿಸ್ ಒಲಿಂಪಿಕ್​ಗೆ ಮೇ 1 ರಿಂದ ಅರ್ಹತಾ ಪಂದ್ಯಗಳು ಪ್ರಾರಂಭವಾಗುತ್ತದೆ. ಇದಕ್ಕಾಗಿ 27 ವರ್ಷದ ಪಿವಿ ಸಿಂಧು ಸಿದ್ಧತೆಯಲ್ಲಿದ್ದಾರೆ. ಸಿಂಧು ಆಲ್-ಇಂಗ್ಲೆಂಡ್ ಓಪನ್‌ಗಿಂತ ಮೊದಲು ಬ್ಯಾಡ್ಮಿಂಟನ್ ಏಷ್ಯಾ ಮಿಶ್ರ ತಂಡ ಚಾಂಪಿಯನ್‌ಶಿಪ್‌ನಲ್ಲಿ ಆಟವನ್ನು ಗಾಯದ ನಂತರ ಆರಂಭಿಸಿದ್ದಾರೆ. ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪ್ಯಾರಿಸ್ 2024 ರ ಸ್ಥಾನವನ್ನು ಆದಷ್ಟು ಬೇಗ ಕಾಯ್ದಿರಿಸಲು ಆಶಿಸುತ್ತಿದ್ದಾರೆ. ಇದಕ್ಕಾಗಿ ಅವರು ಹೆಚ್ಚು ಅಭ್ಯಾಸ ಮತ್ತು ಪಂದ್ಯಗಳಲ್ಲಿ ಪಾಲ್ಗೊಳ್ಳಲು ಚಿಂತಿಸಿದ್ದು, ಕೆಲಸದ ಒತ್ತಡವನ್ನು ಹೆಚ್ಚಿಸಿಕೊಳ್ಳ ಬಯಸುತ್ತೇನೆ ಎಂದು ಒಲಿಂಪಿಕ್ ಹಿನ್ನೆಲೆಯಲ್ಲಿ ಹೇಳಿಕೊಂಡಿದ್ದಾರೆ.

"ನೀವು ಕೂಡ 100 ಪ್ರತಿಶತದಷ್ಟು ಭರವಸೆ ನೀಡಬೇಕು. ನಾನು ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ. ನಾನು ಟ್ರ್ಯಾಕ್‌ನಲ್ಲಿದ್ದೇನೆ, ಲಯಕ್ಕೆ ಮರಳಲು ಹೆಚ್ಚು ಪಂದ್ಯಗಳನ್ನು ಆಡಲು ಮತ್ತು ಜಾಸ್ತಿ ಸಮಯ ಫೀಲ್ಡ್​ನಲ್ಲಿ ಇರಲು ಬಯಸುತ್ತೇನೆ" ಎಂದಿದ್ದಾರೆ. ಮಂಗಳವಾರ ದುಬೈನಲ್ಲಿ ಆರಂಭವಾಗಲಿರುವ ಬ್ಯಾಡ್ಮಿಂಟನ್ ಏಷ್ಯಾ ಮಿಶ್ರ ತಂಡ ಚಾಂಪಿಯನ್‌ಶಿಪ್‌ನಲ್ಲಿ ಲಕ್ಷ್ಯ ಸೇನ್ ಮತ್ತು ಎಚ್‌ಎಸ್ ಪ್ರಣಯ್ ಅವರೊಂದಿಗೆ ಸಿಂಧು ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ.

2019 ರಲ್ಲಿ ಹಾಂಗ್ ಕಾಂಗ್‌ನಲ್ಲಿ ನಡೆದ ಹಿಂದಿನ ಏಷ್ಯಾ ಮಿಶ್ರ ತಂಡ ಚಾಂಪಿಯನ್‌ಶಿಪ್​ನಲ್ಲಿ ನಾಕೌಟ್ ಹಂತವನ್ನು ಭಾರತ ತಲುಪಿತ್ತು. ಆತಿಥೇಯ ಯುಎಇ, ಮಲೇಷ್ಯಾ ಮತ್ತು ಕಝಾಕಿಸ್ತಾನ್ ಜೊತೆಗೆ ಬಿ ಗುಂಪಿನಲ್ಲಿ ಡ್ರಾ ಮಾಡಿಕೊಂಡಿತ್ತು.

ಇದನ್ನೂ ಓದಿ: ಫುಟ್​ಬಾಲ್ ನಟ್​ಮೆಗ್​ನಲ್ಲಿ ಗಿನ್ನಿಸ್ ದಾಖಲೆ: ವಿದೇಶಿ ಆಟಗಾರರ ದಾಖಲೆ ಮುರಿದ ಮಂಗಳೂರು ಯುವಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.