ETV Bharat / sports

ಫ್ರೆಂಚ್​​​ ಓಪನ್: ವಿಶ್ವದ ನಂ. 1 ಜೊಕೊವಿಕ್​​​​​​ ವಿರುದ್ಧ ರಫೆಲ್​ ನಡಾಲ್​ಗೆ ಜಯ, ಸೆಮೀಸ್​ಗೆ ಲಗ್ಗೆ - ಜೊಕೊವಿಚ್​ ವಿರುದ್ಧ ರಫೆಲ್​ ನಡಾಲ್​ಗೆ ಜಯ

13 ಬಾರಿಯ ಚಾಂಪಿಯನ್​​ ಆಗಿರುವ ನಡಾಲ್​ ಈ ಗೆಲುವಿನ ಮೂಲಕ ಫ್ರೆಂಚ್​ ಓಪನ್ ಟೂರ್ನಿಯಲ್ಲಿ 15ನೇ ಬಾರಿ ಸೆಮಿಫೈನಲ್​ಗೆ ಲಗ್ಗೆ ಹಾಕಿದ್ದಾರೆ.

French Open
French Open
author img

By

Published : Jun 1, 2022, 9:39 AM IST

Updated : Jun 1, 2022, 9:45 AM IST

ಪ್ಯಾರಿಸ್​: ಫ್ರೆಂಚ್ ಓಪನ್​​ ಟೆನಿಸ್ ಟೂರ್ನಿಯಲ್ಲಿ ವಿಶ್ವದ ನಂಬರ್​ 1 ಆಟಗಾರ ನೊವಾಕ್​ ಜೊಕೊವಿಕ್​​​ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಿರುವ ರಫೆಲ್ ನಡಾಲ್​​ ಸಮಿಫೈನಲ್​ಗೆ ಲಗ್ಗೆ ಹಾಕಿದ್ದಾರೆ. ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಸರ್ಬಿಯಾದ ಜೊಕೊವಿಕ್​​​ ವಿರುದ್ಧ 6-2, 4-6, 6-2, 7-6 ಸೆಟ್​​ಗಳಿಂದ ಗೆಲುವಿನ ನಗೆ ಬೀರಿದರು.

  • French Open 2022 | Rafael Nadal beats defending champion and world no.1 Novak Djokovic by 6-2, 4-6, 6-2, 7-6 (7-4) to enter the semifinal of men's singles.

    — ANI (@ANI) May 31, 2022 " class="align-text-top noRightClick twitterSection" data=" ">

ಪಂದ್ಯ ಆರಂಭಗೊಂಡಾಗ ಮೊದಲ ಸೆಟ್​​ನಲ್ಲಿ ಜೊಕೊವಿಕ್​ ವಿರುದ್ಧ ನಡಾಲ್​ ಮುನ್ನಡೆ ಸಾಧಿಸಿದ್ದರು. ಹೀಗಾಗಿ 6-2 ಅಂತರದ ಸೆಟ್​ಗಳಿಂದ ಮುನ್ನಡೆ ಪಡೆದುಕೊಂಡರು. ಆದರೆ, ಎರಡನೇ ಹಾಗೂ ಮೂರನೇ ಸೆಟ್​​ನಲ್ಲಿ ನಡಾಲ್​ ಪಾರಮ್ಯ ಮೆರೆದ ಕಾರಣ ಗೆಲುವು ದಾಖಲು ಮಾಡಿದ್ದಾರೆ. ಈ ಗೆಲುವಿನೊಂದಿಗೆ ನಡಾಲ್​​ ಫ್ರೆಂಚ್​​ ಟೂರ್ನಿಯಲ್ಲಿ 15ನೇ ಸಲ ಸೆಮಿಫೈನಲ್​ಗೆ ಪ್ರವೇಶ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಶ್ರೀಲಂಕಾದಲ್ಲಿ ಹದಗೆಟ್ಟ ಆರ್ಥಿಕ ಸ್ಥಿತಿ.. ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ​​ ಆಯೋಜನೆ ಬಗ್ಗೆ ಹೇಳಿದ್ದೇನು!?

ಇದೀಗ ಜರ್ಮನಿಯ ಅಲೆಕ್ಸಾಂಡರ್​ ಜ್ವೆರೆವ್​ ವಿರುದ್ಧ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ನಡಾಲ್​ ಸೆಣಸಾಟ ನಡೆಸಲಿದ್ದಾರೆ. ಈ ಸೋಲಿನೊಂದಿಗೆ 21ನೇ ಗ್ರ್ಯಾಂಡ್​ ಸ್ಲಾಮ್​​ ಗೆಲುವ ತವಕದಲ್ಲಿದ್ದ ಜೊಕೊವಿಕ್​ಗೆ ನಿರಾಸೆ ಆಗಿದೆ. ಕಳೆದ ವರ್ಷದ ಫ್ರೆಂಚ್​ ಓಪನ್​ ಟೂರ್ನಿಯಲ್ಲಿ ಜೊಕೊವಿಕ್ ವಿರುದ್ಧ ನಡಾಲ್​​ ಸೆಮಿಫೈನಲ್​​ನಲ್ಲಿ ಸೋಲು ಕಂಡಿದ್ದರು. ​​

Last Updated : Jun 1, 2022, 9:45 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.