ಅಹ್ಮದ್ ಬಿನ್ ಅಲಿ(ಕತಾರ್): ಫಿಫಾ ವಿಶ್ವಕಪ್ 2022ರ ಎಫ್ ಗ್ರೂಪ್ನ ಬಲಿಷ್ಠ ತಂಡಗಳಾದ ಬೆಲ್ಜಿಯಂ ಮತ್ತು ಕೆನಡಾ ನಡುವಿನ ಪಂದ್ಯ ರೋಚಕವಾಗಿತ್ತು. ಉಭಯ ತಂಡಗಳು ಗೆಲುವಿಗಾಗಿ ಪ್ರಬಲ ಪೈಪೋಟಿ ನಡೆಸಿದವು. ಆದರೆ, ಅಂತಿಮವಾಗಿ ಬೆಲ್ಜಿಯಂ 1-0 ಗೋಲುಗಳಿಂದ ಪಂದ್ಯ ಗೆದ್ದುಕೊಂಡಿತು.
ಪಂದ್ಯದ ಮೊದಲಾರ್ಧದದಲ್ಲಿ ಇತ್ತಂಡಗಳು ಗೋಲು ಗಳಿಸದೆ 0-0 ನಲ್ಲಿ ಸಮಬಲದ ಹೋರಾಟ ನಡೆಸಿದವು. ಆಟ ಸಾಗುತ್ತಿದ್ದಂತೆ ಮಿಚಿ ಬಟ್ಶುವಾಯಿ ಹೊಡೆದ ಆಕರ್ಷಕ ಗೋಲು ಬೆಲ್ಜಿಯಂಗೆ ಮುನ್ನಡೆ ತಂದುಕೊಟ್ಟಿತು. ಈ ಗೆಲುವಿನೊಂದಿಗೆ ಬೆಲ್ಜಿಯಂ ಎಫ್ ಗ್ರೂಪಿನಲ್ಲಿ ಅಗ್ರಸ್ಥಾನಕ್ಕೇರಿದೆ.
ಸ್ಪೇನ್ vs ಕೋಸ್ಟರಿಕಾ: ಪಂದ್ಯದ ಮೊದಲ ನಿಮಿಷದಿಂದ ಕೊನೆಯವರೆಗೂ ಸ್ಪೇನ್ ಅದ್ಭುತವಾಗಿ ಪಟ್ಟು ಬಿಡದೆ ಕಾಡಾಡಿತು. ಇದೇ ಕಾರಣಕ್ಕೆ ಕೋಸ್ಟರಿಕಾ 7-0 ಗೋಲುಗಳ ಭಾರಿ ಅಂತರದಿಂದ ಪರಾಜಯ ಕಾಣಬೇಕಾಯಿತು. ಇಷ್ಟು ದೊಡ್ಡ ಅಂತರದ ಗೆಲುವು ಇದೀಗ ಉಳಿದ ತಂಡಗಳ ನಿದ್ದೆಗೆಡಿಸಿದೆ.
ಆರಂಭದಲ್ಲೇ ಚೆಂಡಿನ ಮೇಲೆ ಪ್ರಾಬಲ್ಯ ಸಾಧಿಸಿದ ಸ್ಪೇನ್, ಆಟ ಶುರುವಾದ ಕೆಲವೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿತು. ಪ್ರತಿ 15 ನಿಮಿಷಗಳಿಗೊಂದು ಗೋಲಿನಂತೆ ಸತತವಾಗಿ 7 ಗೋಲು ಗಳಿಸುತ್ತಾ ಸಾಗಿತು. ಇದರ ಮಧ್ಯೆ ಕೋಸ್ಟರಿಕಾ ಗೋಲು ಹೊಡೆಯಲು ಯತ್ನಿಸಿ ವಿಫಲವಾಯಿತು. ಸ್ಪೇನ್ ಪರ ಕೀಲರ್ ನವಾಸ್, ಫೆರಾನ್ ಟೊರೆಸ್, ಅಲ್ವಾರೊ ಮೊರಾಟಾ, ಮಾರ್ಕೊ ಅಸೆನ್ಸಿಯೊ, ಕಾರ್ಲೋಸ್ ಸೋಲರ್ ಮತ್ತು ಫಿಫಾ ವಿಶ್ವಕಪ್ನ ಅತಿ ಕಿರಿಯ ಆಟಗಾರ ಪ್ಯಾಬ್ಲೋ ಮಾರ್ಟಿನ್ ಪೇಜ್ ಗವಿರಾ ಉತ್ತಮ ಪ್ರದರ್ಶನ ನೀಡಿದರು.
ಇದನ್ನೂ ಓದಿ: ಫಿಫಾ ವಿಶ್ವಕಪ್: 4 ಬಾರಿಯ ವಿಶ್ವಚಾಂಪಿಯನ್ ಜರ್ಮನಿ ಸೋಲಿಸಿದ ಅಂಡರ್ಡಾಗ್ ಜಪಾನ್