ETV Bharat / sports

ನಿವೃತ್ತಿಯ ಅಂಚಿನಲ್ಲಿರುವ ವಿಶ್ವಶ್ರೇಷ್ಟ ಫುಟ್ಬಾಲಿಗ ರೊನಾಲ್ಡೊಗೆ ಫಿಫಾ ವಿಶೇಷ ಗೌರವ

ವಿಶ್ವಶ್ರೇಷ್ಠ ಫುಟ್ಬಾಲಿಗ ಕ್ರಿಶ್ಚಿಯನ್​ ರೊನಾಲ್ಡೊಗೆ ಫಿಫಾ ವಿಶೇಷ ಗೌರವ ಸಲ್ಲಿಸಿದೆ. ವಿಶ್ವಕಪ್​ಗಳಲ್ಲಿ ಅವರು ಗಳಿಸಿದ ಗೋಲುಗಳನ್ನು ಒಟ್ಟುಗೂಡಿಸಿದ ವಿಡಿಯೋವನ್ನು ಹಂಚಿಕೊಂಡಿದೆ.

FIFA pay brilliant tribute to Cristiano Ronaldo
ಕ್ರಿಶ್ಚಿಯನ್​ ರೊನಾಲ್ಡೊಗೆ ಫಿಫಾ ವಿಶೇಷ ಗೌರವ
author img

By

Published : Dec 11, 2022, 8:09 AM IST

Updated : Dec 11, 2022, 8:46 AM IST

ದೋಹಾ(ಕತಾರ್​): ಕ್ರಿಶ್ಚಿಯಾನೊ ರೊನಾಲ್ಡೊ ಈ ಪೀಳಿಗೆಯ ವಿಶ್ವಶ್ರೇಷ್ಠ ಫುಟ್ಬಾಲಿಗ. ಚಿರತೆ ವೇಗವೇ ಆತನ ಬಲ. ಮೈದಾನದಲ್ಲಿ ಪಾದರಸದಂತೆ ಓಡಾಡಿ ಅಸಾಧ್ಯವೆಂಬ ಗೋಲುಗಳನ್ನು ಬಾರಿಸಿ ಇತಿಹಾಸ ನಿರ್ಮಿಸಿದ ಆಟಗಾರನಿಗೆ ಫಿಫಾ ವಿಶೇಷ ರೀತಿಯಲ್ಲಿ ಧನ್ಯವಾದ ಹೇಳಿದೆ.

ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ರೊನಾಲ್ಡೊ, ತಾವಾಡಿದ 5 ವಿಶ್ವಕಪ್​ಗಳಲ್ಲಿ ಗಳಿಸಿದ 8 ಗೋಲುಗಳ ವಿಡಿಯೋವನ್ನು ಫಿಫಾ ತನ್ನ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡು ಒಬ್ರಿಗಾಡ್​(ಧನ್ಯವಾದ) ಅರ್ಪಿಸಿತು. ರೊನಾಲ್ಡೊ 2006 ರಲ್ಲಿ ತಾವಾಡಿದ ಮೊದಲ ವಿಶ್ವಕಪ್​ನಲ್ಲಿ ಇರಾನ್​ ವಿರುದ್ಧ ಪ್ರಥಮ ಗೋಲು ಗಳಿಸಿದ್ದರು.

2010 ರಲ್ಲಿ ಉತ್ತರ ಕೊರಿಯಾ ವಿರುದ್ಧ ಏಕೈಕ, 2014 ರಲ್ಲಿ ಘಾನಾ ವಿರುದ್ಧ ಒಂದು ಗೋಲು ಬಾರಿಸಿದ್ದರು. ಇದಾದ ಬಳಿಕ 2018 ರಲ್ಲಿ ನಡೆದ ವಿಶ್ವಕಪ್​ ರೊನಾಲ್ಡೊರ ಅದ್ಭುತ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಸ್ಪೇನ್​ ವಿರುದ್ಧ ಹ್ಯಾಟ್ರಿಕ್​​ ಗೋಲು ಮತ್ತು ಮೊರಾಕ್ಕೊ ವಿರುದ್ಧ ಹೆಡ್ಡರ್​ ಮೂಲಕ ದಾಖಲಾದ ವಿಶ್ವದಾಖಲೆಯ ಗೋಲೂ ಒಂದಾಗಿದೆ. 2022 ರ ಈ ಸಲದ ವಿಶ್ವಕಪ್​ನಲ್ಲಿ ರೊನಾಲ್ಡೊ ಘಾನಾ ವಿರುದ್ಧ ಒಂದು ಗೋಲು ಮಾತ್ರ ಗಳಿಸಿದ್ದಾರೆ.

ಬಹುತೇಕ ಕೊನೆಯ ವಿಶ್ವಕಪ್​ ಆಡುತ್ತಿರುವ ರೊನಾಲ್ಡೊ ವೃತ್ತಿಜೀವನದಲ್ಲಿ ಅತಿಹೆಚ್ಚು ಸವಾಲನ್ನು ಎದುರಿಸುತ್ತಿದ್ದಾರೆ. ಮ್ಯಾಂಚೆಸ್ಟರ್​ ಫುಟ್ಬಾಲ್​ ಸಂಸ್ಥೆಯಿಂದ ಹೊರಕ್ಕೆ, ಪೋರ್ಚುಗಲ್​ ತಂಡದ ಕೋಚ್​ ಫೆರ್ನಾಂಡೋ ಸ್ಯಾಂಟೋಸ್​ರ ಅವಕೃಪೆಗೆ ಒಳಗಾಗಿ ವಿಶ್ವಕಪ್​ನ ಪಂದ್ಯಗಳಿಂದ ಹೊರಗುಳಿದಿರುವುದು ರೊನಾಲ್ಡೊರನ್ನು ಕುಗ್ಗಿಸಿದೆ.

ನಿವೃತ್ತಿಯ ಅಂಚಿನಲ್ಲಿರುವ ರೊನಾಲ್ಡೊಗೆ ಗಾಯದ ಮೇಲೆ ಬರೆ ಎಳೆದಂತೆ ಶನಿವಾರ ರಾತ್ರಿ ನಡೆದ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಮೊರಾಕ್ಕೊ ವಿರುದ್ಧ ಪೋರ್ಚುಗಲ್​ 1-0 ಗೋಲಿನಿಂದ ಸೋತು ವಿಶ್ವಕಪ್​ನಿಂದ ಹೊರಬಿತ್ತು. ಹೀಗಾಗಿ ವಿಶ್ವಕಪ್​ ಗೆಲ್ಲದೇ ರೊನಾಲ್ಡೊ ವೃತ್ತಿಜೀವನ ಮುಗಿಸುವ ಸಾಧ್ಯತೆಗಳಿವೆ.

ಇದನ್ನೂ ಓದಿ: ಪೋರ್ಚುಗಲ್​ ಮಣಿಸಿ ಸೆಮೀಸ್​ ತಲುಪಿದ ಮೊರಾಕ್ಕೊ; ವಿಶ್ವಕಪ್​ ಗೆಲ್ಲದೇ ರೊನಾಲ್ಡೊ ನಿವೃತ್ತಿ?

Last Updated : Dec 11, 2022, 8:46 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.