ಹೈದರಾಬಾದ್: ಈಗಿನ ಅತ್ಯಾಧುನಿಕ ಸಮಯದಲ್ಲಿಯೂ ಮಹಿಳೆಯರು ಅಥವಾ ಮಹಿಳಾ ಕ್ರೀಡಾಪಟುಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಋತುಚಕ್ರದ ಸಮಯದಲ್ಲಂತೂ ಮಹಿಳಾ ಕ್ರಿಡಾಪಟುಗಳಿಗೆ ಅನೇಕ ಸಮಸ್ಯೆಗಳಿರುತ್ತವೆ.
ದೇಶದ ಉನ್ನತ ಮಹಿಳಾ ಕ್ರೀಡಾಪಟುಗಳು, ಮನಶಾಸ್ತ್ರಜ್ಞರು, ಫಿಸಿಯೋಥೆರಪಿಸ್ಟ್, ಮಹಿಳಾ ಕ್ರೀಡಾ ತರಬೇತುದಾರರು ಮತ್ತು ಕ್ರೀಡಾ ನಿರೂಪಕರು ತಮ್ಮ ತಾವು ಎದುರಿಸಿದ ಸಮಸ್ಯೆಗಳನ್ನು ಈ ಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.
ರಾಜ್ಸಿ ಸ್ವರೂಪ್ ಮತ್ತು ವರ್ಷಾ ಅವರು ಸಭೆಯನ್ನು ಮಾಡರೇಟ್ ಮಾಡಿದ್ದು, ಪ್ಯಾನಲಿಸ್ಟ್ಗಳಾಗಿ ಇಂಡಿಯನ್ ಶಟ್ಲರ್ ಜ್ವಾಲಾ ಗುಟ್ಟಾ, ಮಾಜಿ ಕ್ರಿಕೆಟರ್ ರೀಮಾ ಮಲ್ಹೋತ್ರಾ, ಪ್ಯಾರಾ ಒಲಿಂಪಿಯನ್ ಸಮಿತಿ ಅಧ್ಯಕ್ಷೆ ದೀಪಾ ಮಲಿಕ್, ಕ್ರೀಡಾ ಮನಶಾಸ್ತ್ರಜ್ಞೆ ಮುಗ್ಧಾ ಬಾವ್ರೆ, ಭಾರತದ ಮಹಿಳಾ ಕ್ರಿಕೆಟ್ ತಂಡದ ಮಾಜಿ ಫೀಲ್ಡಿಂಗ್ ಕೋಚ್ ಸುಮನ್ ಶರ್ಮಾ ಮತ್ತು ಆಂಧ್ರಪ್ರದೇಶದ ಮಹಿಳಾ ಕ್ರಿಕೆಟ್ ತಂಡದ ಫಿಸಿಯೋಥೆರಪಿಸ್ಟ್ ಧಾರಿಣಿ ರೋಚಾನಿ ಮತ್ತು ಕ್ರೀಡಾ ನಿರೂಪಕಿ ರಿಧಿಮಾ ಪಾಠಕ್ ಈ ಸಂವಾದದಲ್ಲಿ ಭಾಗವಹಿಸಿದ್ದರು.