ಹೈದರಾಬಾದ್ : ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಸೇರಿದಂತೆ ಮುಂಬರುವ ವಿಶ್ವ ಅಥ್ಲೆಟಿಕ್ಸ್ ವಿಶ್ವಚಾಂಪಿಯನ್ಶಿಪ್ಗೆ ಅರ್ಹತೆ ಪಡೆದಿರುವ 20ರಿಂದ 25 ಭಾರತೀಯ ಕ್ರೀಡಾಪಟುಗಳು (ಯುಎಸ್) ಒರೆಗಾನ್ನ ಚೌಲಾದಲ್ಲಿ ನಡೆಯಲಿರುವ ತರಬೇತಿ ಶಿಬಿರದಲ್ಲಿ ಭಾಗವಿಸಲಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ನಲ್ಲಿ ಪದಕ ವಿಜೇತ ಚೋಪ್ರಾ ಈಗಾಗಲೇ ಒರೆಗಾನ್‌ನಲ್ಲಿ ತರಬೇತಿ ಪಡೆಯುತ್ತಿದ್ದು, ತಮ್ಮ ತರಬೇತಿಯನ್ನು ವಿಸ್ತರಿಸಿಕೊಂಡಿದ್ದಾರೆ ಎಂದು ಈಟಿವಿ ಭಾರತಕ್ಕೆ ತಿಳಿದು ಬಂದಿದೆ. ಅವರು ಮಾರ್ಚ್ನಲ್ಲಿ ಭಾರತಕ್ಕೆ ಮರಳಲಿದ್ದಾರೆ ಎಂದು ತಿಳಿದು ಬಂದಿದೆ.
ಜುಲೈ 15ರಿಂದ 24ರವರೆಗೆ ಒರೆಗಾನ್‌ನಲ್ಲಿ ಟೂರ್ನಮೆಂಟ್ ನಡೆಯಲಿದೆ. ಈ ಕ್ಯಾಪ್ ಕ್ರೀಡಾಪಟುಗಳಿಗೆ ಹವಾಮಾನ ಪರಿಸ್ಥಿತಿಗೆ ಒಗ್ಗಿಕೊಳ್ಳುವ ವಿಷಯದಲ್ಲಿ ಹೆಚ್ಚು ಅನುಕೂಲ ಕಲ್ಪಿಸಿಕೊಡಲಿದೆ. ಜೊತೆಗೆ ಸಮಯದ ಬದಲಾವಣೆಗೆ ಒಗ್ಗಿಕೊಳ್ಳುವ ವಿಷಯದಲ್ಲಿ ಶಿಬಿರವು ಸಹಾಯಕವಾಗಲಿದೆ.
ಇದನ್ನೂ ಓದಿ:U19 ವಿಶ್ವ ಚಾಂಪಿಯನ್ಸ್ಗೆ ಭಾರತ - ವಿಂಡೀಸ್ ನಡುವಿನ ಪಂದ್ಯ ವೀಕ್ಷಿಸಲು ಅವಕಾಶ
ಒರೆಗಾನ್ನ ಈ ಕ್ಯಾಂಪ್ನಲ್ಲಿ 400 ಮೀಟರ್ ಸಿಂಥೆಟಿಕ್ ಟ್ರ್ಯಾಕ್, ಡಿಸ್ಕಸ್ ಥ್ರೋಗಾಗಿ ಉದ್ದ ಮತ್ತು ಚಿಕ್ಕದಾದ ಮೈದಾನ, ಜಾವಲಿನ್ ಮತ್ತು ಶಾಟ್ ಪುಟ್ಗೆ ಹೊಂದಿಕೊಳ್ಳುವ ಸ್ಟ್ರೆಂತ್ ಮತ್ತು ಖಂಡೀಷನಲ್ ಹಾಲ್ ಮತ್ತು ಕ್ರೀಡಾಪಟುಗಳಿಗೆ ಸೂಕ್ತ ವಸತಿ ಸೌಲಭ್ಯವನ್ನು ದೊಡ್ಡ ಟೂರ್ನಮೆಂಟ್‌ನಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಸಂಪೂರ್ಣ ಸೌಲಭ್ಯ ಒದಗಿಸಿ ಕೊಡಲಿದೆ.
ವಿಮಾನ ಟಿಕೆಟ್, ವಸತಿ ಮತ್ತು ಇನ್ನಿತರ ಖರ್ಚುಗಳಿಗೆ ಸುಮಾರು 1,57, 86, 785 ರೂಪಾಯಿಯಗಳ ಬಜೆಟ್ನಲ್ಲಿ ಒದಗಿಸಿ ಕೊಡಲಾಗಿದೆ. ಭಾರತೀಯ ಕ್ರೀಡಾ ಪ್ರಾಧಿಕಾರವು (SAI) ACTC ಅಡಿಯಲ್ಲಿ ಎನ್‌ಎಸ್‌ಎಫ್ ಯೋಜನೆಯ ಮೂಲಕ ಅನುಮೋದಿಸಿದೆ.
ತರಬೇತಿಗೆ ಅವಕಾಶ ಪಡೆದ ಕ್ರೀಡಾಪಟುಗಳು
ನೀರಜ್ ಚೋಪ್ರಾ (ಜಾವೆಲಿನ್ ಥ್ರೋ), ಸಂದೀಪ್ ಕುಮಾರ್ (20 ಕಿಮೀ ನಡಿಗೆ), ರಾಹುಲ್ (20 ಕಿಮೀ ನಡಿಗೆ), ಅವಿನಾಶ್ ಸೇಬಲ್ (300 ಮೀ ಎಸ್‌ಸಿ), ತಜಿಂದರ್‌ಪಾಲ್ ಸಿಂಗ್ ತೂರ್ (ಶಾಟ್ ಪುಟ್), 4X400 ಮೀ ರಿಲೇ ಪುರುಷರಲ್ಲಿ ಆರು ಕ್ರೀಡಾಪಟುಗಳು, ಕಮಲ್ ಪ್ರೀತ್ ಕೌರ್ (ಡಿಸ್ಕಸ್ ಥ್ರೋ), ಸೀಮಾ ಪುನಿಯಾ (ಡಿಸ್ಕಸ್ ಥ್ರೋ) ಮತ್ತು ಪ್ರಿಯಾಂಕಾ (20 ಕಿಮೀ ನಡಿಗೆ) ಈಗಾಗಲೇ ಈವೆಂಟ್‌ಗೆ ಅರ್ಹತೆ ಪಡೆದಿದ್ದಾರೆ.
ಇನ್ನು ರಾಣಿ (ಜಾವೆಲಿನ್ ಥ್ರೋ), ಹರ್ಮಿಲನ್ ಬೈನ್ಸ್ (1500 ಮೀ), ಅಯ್ಯಸ್ವಾಮಿ ಧರುಣ್ (400 ಎಂಎಚ್), ಹಿಮಾ ದಾಸ್ (200 ಮೀ), ದುತೀ ಚಂದ್ (100 ಮೀ/200 ಮೀ), ಶ್ರೀ ಶಂಕರ್ (ಲಾಂಗ್ ಜಂಪ್), ಭಾವನಾ ಜಾಟ್ (20 ಮೀ. ಕಿಮೀ ನಡಿಗೆ), ಕರಣ್ವೀರ್ ಸಿಂಗ್ (ಶಾಟ್ ಪಟ್) ಅರ್ಹತೆ ಪಡೆಯುವ ಸಾಧ್ಯತೆಯಿದೆ.