ETV Bharat / sports

ಕೋವಿಡ್​ 19 ಭೀತಿ :ರಾಷ್ಟ್ರೀಯ ಕ್ರೀಡಾ ಪುರಸ್ಕಾರ ಕಾರ್ಯಕ್ರಮ ಒಂದು ಅಥವಾ ಎರಡು ತಿಂಗಳು ಮುಂದೂಡುವ ಸಾಧ್ಯತೆ

ಸಮಾರಂಭವು ಹೇಗೆ ನಡೆಯಲಿದೆ ಎಂಬುದು ನಮಗೆ ತಿಳಿದಿಲ್ಲ. ನಾವು ರಾಷ್ಟ್ರಪತಿ ಕಚೇರಿಯಿಂದ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ. ಈ ವರ್ಷ 500 ಕ್ಕೂ ಹೆಚ್ಚು ಅರ್ಜಿಗಳಿವೆ ಬಂದಿವೆ, ಆದ್ದರಿಂದ ಅದನ್ನು ವಿಂಗಡಿಸುವಲ್ಲಿ ನಮ್ಮ ಕೆಲಸವೂ ದ್ವಿಗುಣಗೊಂಡಿದೆ ಎಂದು ಕ್ರೀಡಾ ಸಚಿವಾಲಯದ ಮೂಲ ತಿಳಿಸಿದೆ.

ರಾಷ್ಟ್ರೀಯ ಕ್ರೀಡಾ ಪುರಸ್ಕಾರ
ರಾಷ್ಟ್ರೀಯ ಕ್ರೀಡಾ ಪುರಸ್ಕಾರ
author img

By

Published : Jul 30, 2020, 7:21 PM IST

ನವದೆಹಲಿ: ಕೋವಿಡ್​ 19 ಭೀತಿಯಿಂದ ರಾಷ್ಟ್ರೀ ಕ್ರೀಡಾದಿನವಾದ ಆಗಸ್ಟ್​ 29ರಂದು ರಾಷ್ಟ್ರಪತಿ ಭವನದಲ್ಲಿ ಪ್ರತಿ ವರ್ಷ ಕ್ರೀಡಾಪಟುಗಳಿಗೆ ನೀಡಲಾಗುವ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭ ಒಂದು ಅಥವಾ ಎರಡು ತಿಂಗಳು ವಿಳಂಭವಾಗುವ ಸಾಧ್ಯತೆ ಇದೆ ಎಂದು ಕ್ರೀಡಾ ಸಚಿವಾಲಯದ ಮೂಲಗಳು ತಿಳಿಸಿವೆ.

" ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ 2020 ಅನ್ನು ಆಯೋಜಿಸಲು ಅನುಮೋದನೆ ಕೋರಿ ಜುಲೈ ಮಧ್ಯದಲ್ಲಿ ಕ್ರೀಡಾ ಸಚಿವಾಲಯವು ಭಾರತದ ರಾಷ್ಟ್ರಪತಿ ಕಚೇರಿಗೆ ಪತ್ರ ಬರೆದಿದೆ. ಆದರೆ ರಾಷ್ಟ್ರಪತಿ ಕಚೇರಿಯಿಂದ ನಮಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ವರ್ಷ ಪ್ರಶಸ್ತಿಗಳನ್ನು ಖಂಡಿತ ನೀಡಲಾಗುವುದು ಆದರೆ ಪ್ರಶಸ್ತಿ ಕಾರ್ಯಕ್ರಮ ವಿಳಂಭವಾಗುವುದು ಎಂದು ಸುದ್ದಿ ಮೂಲ ಮಾಹಿತಿ ನೀಡಿದೆ ಎಂದು ಎಎಎನ್​ಐ ವರದಿ ಮಾಡಿದೆ.

ಸಮಾರಂಭವು ಹೇಗೆ ನಡೆಯಲಿದೆ ಎಂಬುದು ನಮಗೆ ತಿಳಿದಿಲ್ಲ. ನಾವು ರಾಷ್ಟ್ರಪತಿ ಕಚೇರಿಯಿಂದ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ. ಈ ವರ್ಷ 500 ಕ್ಕೂ ಹೆಚ್ಚು ಅರ್ಜಿಗಳಿವೆ ಬಂದಿವೆ, ಆದ್ದರಿಂದ ಅದನ್ನು ವಿಂಗಡಿಸುವಲ್ಲಿ ನಮ್ಮ ಕೆಲಸವೂ ದ್ವಿಗುಣಗೊಂಡಿದೆ ಎಂದು ಕ್ರೀಡಾ ಸಚಿವಾಲಯದ ಮೂಲ ತಿಳಿಸಿದೆ.

ಆದಷ್ಟು ಬೇಗ ಸರಿಯಾದ ಸಮಯದಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು. ಪ್ರಶಸ್ತಿ ವಿಜೇತರನ್ನು ಘೋಷಣೆ ಮಾಡಿ ಪರಿಸ್ಥಿತಿ ಸರಿಯಾದ ಮೇಲೆ ವಿತರಣೆ ಮಾಡುವುದು ಸಚಿವಾಲಯದ ಮುಂದಿರುವ ಮತ್ತೊಂದು ಆಯ್ಕೆ ಎಂದು ತಿಳಿದುಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.