ETV Bharat / sports

ಭಾರತದಲ್ಲಿ ನಡೆಯಲಿರುವ ಚೆಸ್ ಒಲಿಂಪಿಯಾಡ್​ನಿಂದ ಹಿಂದೆ ಸರಿದ ಚೀನಾ - ಚಾಂಪಿಯನ್ ವಿಶ್ವನಾಥನ್ ಆನಂದ್

ಚೀನಾ ಯಾವಾಗಲೂ ಒಲಿಂಪಿಯಾಡ್‌ನಲ್ಲಿ ಅಗ್ರ ಪದಕ ಸ್ಪರ್ಧಿಗಳ ನಡುವೆ ಇರುತ್ತಿತ್ತು. ಈ ಬಾರಿ ಹಿಂದೆ ಸರಿದಿರುವುದರಿಂದ ಭಾರತಕ್ಕೆ ಹೆಚ್ಚು ಅವಕಾಶಗಳು ದೊರಕಿದಂತಾಗುತ್ತದೆ.

44th Chess Olympiad
44ನೇ ಚೆಸ್ ಒಲಿಂಪಿಯಾಡ್‌
author img

By

Published : Jun 26, 2022, 7:59 AM IST

ಚೆನ್ನೈ: ಇಲ್ಲಿಗೆ ಸಮೀಪದ ಮಾಮಲ್ಲಪುರಂನಲ್ಲಿ ಜುಲೈ 28ರಿಂದ ನಡೆಯಲಿರುವ 44ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಚೀನಾ ಭಾಗವಹಿಸುತ್ತಿಲ್ಲ. ಪ್ರಸ್ತುತ ಮ್ಯಾಡ್ರಿಡ್‌ನಲ್ಲಿ ನಡೆಯುತ್ತಿರುವ ಈವೆಂಟ್‌ನಲ್ಲಿ ಆಡುತ್ತಿರುವ ವಿಶ್ವದ ನಂ.2 ಮತ್ತು ಚೀನಾದ ಅಗ್ರ ಆಟಗಾರ ಡಿಂಗ್ ಲಿರೆನ್ ಟೂರ್ನಿಯ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ, "ತಾವಾಗಲಿ ಅಥವಾ ಅವರ ದೇಶದ ತಂಡವಾಗಲಿ ಒಲಿಂಪಿಯಾಡ್‌ನಲ್ಲಿ ಭಾಗವಹಿಸುವುದಿಲ್ಲ" ಎಂದು ಉತ್ತರಿಸಿದರು.

ಅದಲ್ಲದೆ, ಒಲಿಂಪಿಯಾಡ್ ಟೂರ್ನಮೆಂಟ್ ನಿರ್ದೇಶಕರಾಗಿರುವ ಎಐಸಿಎಫ್ ಕಾರ್ಯದರ್ಶಿ ಭರತ್ ಸಿಂಗ್ ಚೌಹಾಣ್, "ಚೀನಿಯರು ಒಲಿಂಪಿಯಾಡ್​ನಿಂದ ಹಿಂದೆ ಸರಿದಿರುವುದಕ್ಕೆ ಯಾವುದೇ ಕಾರಣಗಳನ್ನು ನೀಡಿಲ್ಲ" ಎಂದು ತಿಳಿಸಿದ್ದಾರೆ.

ಚೀನಾ ಯಾವಾಗಲೂ ಒಲಿಂಪಿಯಾಡ್‌ನಲ್ಲಿ ಅಗ್ರ ಪದಕ ಸ್ಪರ್ಧಿಗಳ ನಡುವೆ ಇರುತ್ತಿತ್ತು. ಈ ಬಾರಿ ಹಿಂದೆ ಸರಿದಿರುವುದರಿಂದ ಭಾರತಕ್ಕೆ ಹೆಚ್ಚು ಅವಕಾಶಗಳು ದೊರಕಿದಂತಾಗುತ್ತದೆ. ಚೀನಾದ ಓಪನ್ ತಂಡವು 2018 ರಲ್ಲಿ ಬಟುಮಿ (ಜಾರ್ಜಿಯಾ) ಮತ್ತು 2014 ರಲ್ಲಿ ಟ್ರೋಮ್ಸೊ (ನಾರ್ವೆ) ನಲ್ಲಿ ನಡೆದ ಒಲಿಂಪಿಯಾಡ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿತ್ತು. ಆ ದೇಶದ ಮಹಿಳಾ ತಂಡವು ಹಿಂದಿನ ಎರಡು ಒಲಿಂಪಿಯಾಡ್‌ಗಳಲ್ಲಿ ಕ್ರಮವಾಗಿ ಬಾಕು ಮತ್ತು ಬಟುಮಿಯಲ್ಲಿ ಚಿನ್ನದ ಪದಕ ತನ್ನದಾಗಿಸಿದೆ.

ಮುಕ್ತ ಸ್ಪರ್ಧೆಯ ವಿಭಾಗದಲ್ಲಿ ಭಾರತದ 'ಬಿ' ತಂಡದ ಕೋಚ್ ಮತ್ತು ಗ್ರ್ಯಾಂಡ್ ಮಾಸ್ಟರ್ ಆರ್.ಬಿ.ರಮೇಶ್, "ರಷ್ಯಾದ ಜೊತೆಗೆ ಚೀನಾದ ಅನುಪಸ್ಥಿತಿಯು ಭಾರತಕ್ಕೆ ಪದಕ ಗೆಲ್ಲುವ ಇನ್ನಷ್ಟು ಅವಕಾಶಗಳ ಬಾಗಿಲು ತೆರೆಸಿದೆ" ಎಂದು ಹೇಳಿದರು.

ವಿದಿತ್ ಗುಜರಾತಿ, ಪಿ. ಹರಿಕೃಷ್ಣ, ಕೆ. ಶಶಿಕಿರಣ್, ಆರ್. ಪ್ರಗ್ನಾನಂದ (ಪುರುಷರಲ್ಲಿ) ಮತ್ತು ಕೊನೇರು ಹಂಪಿ, ಡಿ. ಹರಿಕಾ, ಆರ್.ವೈಶಾಲಿ, ವಂತಿಕಾ ಅಗರ್ವಾಲ್ (ಮಹಿಳೆಯರು) ಸೇರಿದಂತೆ ಭಾರತೀಯ ಅಗ್ರ ಆಟಗಾರರು ಮುಕ್ತ ಮತ್ತು ಮಹಿಳೆಯರ ಸ್ಪರ್ಧೆಗಳಿಗಾಗಿ ಎರಡು ವಿಭಿನ್ನ ತಂಡಗಳಲ್ಲಿ ಭಾಗವಹಿಸಲಿದ್ದಾರೆ. ಐದು ಬಾರಿಯ ಚಾಂಪಿಯನ್ ವಿಶ್ವನಾಥನ್ ಆನಂದ್ ಆಯ್ಕೆಯಿಂದ ಹೊರಗುಳಿದಿದ್ದು, ಮಾರ್ಗದರ್ಶನ ನೀಡುವರು.

ಇದನ್ನೂ ಓದಿ: 1983ರ ವಿಶ್ವಕಪ್ ವಿಜಯೋತ್ಸವಕ್ಕೆ 39 ವರ್ಷಗಳು: ಇಡೀ ದೇಶಕ್ಕೆ ಯಾವತ್ತೂ ಅಳಿಸಲಾರದ ಇತಿಹಾಸ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.