ETV Bharat / sports

ಚೆಸ್‌ ವಿಶ್ವಕಪ್‌ ಫೈನಲ್‌: ಪ್ರಜ್ಞಾನಂದ vs ಕಾರ್ಲ್‌ಸನ್ ಎರಡನೇ ಪಂದ್ಯ ಡ್ರಾ, ನಾಳೆ ಟೈ ಬ್ರೇಕರ್​ನಲ್ಲಿ ಫಲಿತಾಂಶ - ವಿಶ್ವನಾಥನ್​ ಆನಂದ್​

R Pragnanandaa vs Magnus Carlsen: ಚೆಸ್​ ವಿಶ್ವಕಪ್​ ಪೈನಲ್​ನ ಎರಡನೇ ಪಂದ್ಯದಲ್ಲೂ ಡ್ರಾ ಆಗಿದ್ದು, ನಾಳೆ ನಡೆಯಲಿರುವ ಟೈ ಬ್ರೇಕರ್​ನಲ್ಲಿ ಫಲಿತಾಂಶ ತಿಳಿದುಬರಲಿದೆ. ​​

Chess World Cup 2023 Final
Chess World Cup 2023 Final
author img

By ETV Bharat Karnataka Team

Published : Aug 23, 2023, 6:13 PM IST

Updated : Aug 23, 2023, 7:52 PM IST

ಬಾಕು (ಅಜರ್‌ಬೈಜಾನ್): ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಜ್ಞಾನಂದ ಮತ್ತು ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸೆನ್ ಅವರ ನಡುವೆ ನಡೆಯುತ್ತಿರುವ ಫಿಡೆ ಚೆಸ್ ವಿಶ್ವಕಪ್ 2023ರ ಫೈನಲ್​ ಪಂದ್ಯದ ಎರಡನೇ ಮ್ಯಾಚ್​ ಕೂಡಾ ಡ್ರಾ ಆಗಿದೆ. ಫಲಿತಾಂಶ ನಾಳೆ ನಡೆಯಲಿರುವ ಟೈ ಬ್ರೇಕರ್​ ಪಂದ್ಯದದಲ್ಲಿ ತಿಳಿದು ಬರಲಿದೆ.

ಇಂದು ಪಂದ್ಯ ಆರಂಭವಾಗಿ ಒಂದು ಗಂಟೆಯಲ್ಲಿ 21 ನಡೆಗಳ ನಂತರ ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸೆನ್ ಅವರು ಆರ್ ಪ್ರಜ್ಞಾನಂದ ಅವರ ನಡೆಗೆ ಬೆಚ್ಚಿಬಿದ್ದು ಡ್ರಾ ಶರಣಾಗಿದ್ದಾರೆ. ನಿನ್ನೆ (ಮಂಗಳವಾರ) ನಡೆದ ಮೊದಲ ಪಂದ್ಯದಲ್ಲಿ ಪ್ರಜ್ಞಾನಂದ ಪಂದ್ಯದಲ್ಲಿ 35 ನಡೆಗಳ ನಂತರ ಪಂದ್ಯ ಡ್ರಾಗೊಂಡಿತ್ತು.

  • Magnus Carlsen takes a quiet draw with white against Praggnanandhaa and sends the final to tiebreaks. The winner of the #FIDEWorldCup will be decided tomorrow!

    📷 Maria Emelianova pic.twitter.com/aJw1vvoFnK

    — International Chess Federation (@FIDE_chess) August 23, 2023 " class="align-text-top noRightClick twitterSection" data=" ">

ಪಂದ್ಯದ ನಂತರ ಮಾತನಾಡಿದ ಪ್ರಜ್ಞಾನಂದ, "ಕಾರ್ಲ್‌ಸೆನ್ ಒತ್ತಡದಲ್ಲಿದ್ದಂತೆ ಕಂಡುಬಂದರು. ಆದರೆ, ಅವರು ಅಸ್ವಸ್ಥರಾಗಿದ್ದಾರೆಂದು ನಾನು ಭಾವಿಸಲಿಲ್ಲ. ನಾಳೆ ಅವರು ಚೇತರಿಸಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಕಾರ್ಲ್​ಸೆನ್​ ಇಂದು ಬೇಗನೆ ಡ್ರಾ ಮಾಡಲು ಮುಂದಾಗುತ್ತಾರೆ ನಾನು ಭಾವಿಸಿರಲಿಲ್ಲ. ಆದರೆ ಅವರು ಈ ಅವರ ನಡೆಯಲ್ಲಿ ಡ್ರಾ ಮಾಡಲು ಬಯಸಿದ್ದು ತಿಳಿಯಿತು, ನನಗೂ ಅದು ಒಳ್ಳೆಯದಾಗಿದೆ. ನನಗೂ ನಿರಂತರ ಆಟದಿಂದ ಆಯಾಸವಾಗಿದೆ. ನಾಳೆ, ನಾನು ತಾಜಾ ಮನಸ್ಸಿನೊಂದಿಗೆ ಬರಲು ಇಂದು ವಿಶ್ರಾಂತಿ ಪಡೆಯಲು ಪ್ರಯತ್ನಿಸುತ್ತೇನೆ. ನಾನು ಇಲ್ಲಿ ಸಾಕಷ್ಟು ಟೈಬ್ರೇಕ್‌ಗಳನ್ನು ಆಡುತ್ತಿದ್ದೇನೆ. ನಾಳೆ ಹೆಚ್ಚು ಆಟಗಳು ಎದುರಾಗುವ ನಿರೀಕ್ಷೆ ಇದೆ. ನಾನು ಎಲ್ಲದಕ್ಕೂ ಸಿದ್ಧನಾಗಿರಬೇಕು" ಎಂದಿದ್ದಾರೆ.

  • Praggnanandhaa: "Tomorrow, I just want to come with a fresh mind. I will try to rest today; it is very important because I've been playing a lot of tiebreaks here. I know it can take a lot of games or short ones as well, so I have to be ready for everything." #FIDEWorldCup pic.twitter.com/xi4yRJ2LxR

ಮ್ಯಾಗ್ನಸ್ ಕಾರ್ಲ್‌ಸೆನ್ ಮಾತನಾಡಿ, "ಪಂದ್ಯವನ್ನು ಉತ್ತಮವಾಗಿ ಆಯೋಜಿಸಲಾಗಿದೆ. ಇಲ್ಲಿನ ಎಲ್ಲಾ ಸಿಬ್ಬಂದಿಗಳು ಉತ್ತಮವಾಗಿ ಬೆಂಬಲಿಸುತ್ತಿದ್ದಾರೆ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ಇಂದು, ನಾನು ಸ್ವಲ್ಪ ಉತ್ತಮವಾಗಿದ್ದೇನೆ. ಆದರೆ ಪೂರ್ಣ ಹೋರಾಟಕ್ಕೆ ನನಗೆ ಶಕ್ತಿಯಿದೆ ಎಂದು ನನಗೆ ಇನ್ನೂ ಅನಿಸಲಿಲ್ಲ. ಆದ್ದರಿಂದ ನಾನು ಒಂದು ದಿನ ವಿಶ್ರಾಂತಿ ಪಡೆಯೋಣ ಎಂದು ಯೋಜಿಸಿದೆ. ಆಶಾದಾಯಕವಾಗಿ, ನಾನು ನಾಳೆ ಹೆಚ್ಚು ಶಕ್ತಿಯೊಂದಿಗೆ ಮರಳುತ್ತೇನೆ. ಪ್ರಜ್ಞಾನಂದ ಅವರು ಈಗಾಗಲೇ ಬಲಿಷ್ಠ ಆಟಗಾರರ ವಿರುದ್ಧ ಸಾಕಷ್ಟು ಟೈಬ್ರೇಕ್‌ಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಅವರು ತುಂಬಾ ಬಲಶಾಲಿ ಎಂದು ನನಗೆ ತಿಳಿದಿದೆ. ನನಗೆ ನಾಳೆ ಒಳ್ಳೆಯ ದಿನವಿದ್ದರೆ, ನಿಸ್ಸಂಶಯವಾಗಿ ನನಗೆ ಉತ್ತಮ ಅವಕಾಶಗಳು ಸಿಗುತ್ತವೆ" ಎಂದು ಹೇಳಿದ್ದಾರೆ.

  • Magnus Carlsen: "I am very grateful to the organisers, FIDE and the doctors and nurses, who got me some good treatment. Today, I am feeling a bit better but I still didn't feel like I had the energy for a full fight, so I thought, let's get one more day of rest. Hopefully, I will… pic.twitter.com/jsb7fklYVX

ನಾಳೆ ಟೈ ಬ್ರೇಕರ್​: ನಾಳೆ 25 ನಿಮಿಷದ ಎರಡು ಪಂದ್ಯ ನಡೆಯಲಿದೆ. ಇದು ಡ್ರಾ ಆದಲ್ಲಿ 10 ನಿಮಿಷದ ಎರಡು ಪಂದ್ಯ ಅಂತಿಮವಾಗಿ ಗೆಲುವನ್ನು ನಿರ್ಧರಿಸಲಿದೆ.

ಫೈನಲ್​ ಪ್ರವೇಶದಿಂದ ದಾಖಲೆ ಬರೆದ ಪ್ಯಾಗ್​: ವಿಶ್ವಕಪ್​ ಫೈನಲ್​ಗೆ ಸ್ಥಾನ ಪಡೆಯುವ ಮೂಲಕ ಪ್ರಜ್ಞಾನಂದ ಕ್ಯಾಂಡಿಡೇಟ್ಸ್​ ಟೂರ್ನಿಗೆ ಅರ್ಹತೆ ಪಡೆದ ಎರಡನೇ ಭಾರತೀಯ ಆಟಗಾರ ಆಗಿದ್ದಾರೆ. ಇದಕ್ಕೂ ಮುನ್ನ ವಿಶ್ವನಾಥನ್​ ಆನಂದ್​ ಅವರು ಪ್ರತಿನಿಧಿಸಿದ್ದರು. ಕ್ಯಾಂಡಿಡೇಟ್ಸ್​​ ಗೇಮ್​ ಸ್ಪರ್ಧೆ 2024 ಏಪ್ರಿಲ್​ 2ರಿಂದ 25ರ ವರೆಗೆ ಕೆನಡಾದ ಟೊರಂಟೊದಲ್ಲಿ ನಡೆಯಲಿದೆ.

ಇದನ್ನೂ ಓದಿ: ಭಾರತವು ಚೆಸ್​ನಲ್ಲಿ ಸುವರ್ಣ ತಲೆಮಾರು ಕಾಣುತ್ತಿದೆ: ವಿಶ್ವನಾಥನ್ ಆನಂದ್ ಮೆಚ್ಚುಗೆ

Last Updated : Aug 23, 2023, 7:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.