ETV Bharat / sports

ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್: ಹೆಚ್‌.ಎಸ್.ಪ್ರಣಯ್​ಗೆ ಕಂಚು - ಬಿಡಬ್ಲ್ಯೂಎಫ್​ ವಿಶ್ವ ಚಾಂಪಿಯನ್‌ಶಿಪ್

BWF World Championships 2023: ಡೆನ್ಮಾರ್ಕ್​ನ ಕೋಪೆನ್‌ ಹೇಗನ್​​ನಲ್ಲಿ ನಡೆಯುತ್ತಿರುವ ಬಿಡಬ್ಲ್ಯೂಎಫ್​ ವಿಶ್ವ ಚಾಂಪಿಯನ್‌ಶಿಪ್ 2023ರಲ್ಲಿ ಭಾರತದ ಶಟ್ಲರ್ ಹೆಚ್‌.ಎಸ್.ಪ್ರಣಯ್‌ಗೆ ಕಂಚಿನ ಪದಕ ದೊರೆತಿದೆ.

HS  Prannoy
ಭಾರತರದ ಷಟ್ಲರ್ ಹೆಚ್‌.ಎಸ್ ಪ್ರಣಯ್
author img

By ETV Bharat Karnataka Team

Published : Aug 27, 2023, 9:38 AM IST

Updated : Aug 27, 2023, 9:50 AM IST

ಕೋಪೆನ್‌ ಹೇಗನ್ (ಡೆನ್ಮಾರ್ಕ್): ಭಾರತದ ಶಟ್ಲರ್​ ಹೆಚ್.​ಎಸ್.ಪ್ರಣಯ್ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (ಬಿಡಬ್ಲ್ಯುಎಫ್)​ ಚಾಂಪಿಯನ್​ಶಿಪ್​ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಸೆಮಿಫೈನಲ್​ ಪಂದ್ಯದಲ್ಲಿ ದಿಟ್ಟ ಹೋರಾಟದ ನಡುವೆಯೂ ಥಾಯ್ಲೆಂಡ್​ನ ಕುನ್ಲವುಟ್​ ವಿಟಿಡ್​ಸರ್ನ್​ ವಿರುದ್ಧ ಪ್ರಣಯ್ ಪರಾಭವಗೊಂಡರು.

ಶನಿವಾರ ನಡೆದ ಪುರುಷರ ಸಿಂಗಲ್ಸ್​ ವಿಭಾಗದ ಹೋರಾಟದಲ್ಲಿ 3ನೇ ಶ್ರೇಯಾಂಕಿತ ಕುನ್ಲವುಟ್​ ವಿಟಿಡ್​ಸರ್ನ್​ ವಿರುದ್ಧ 21-18, 13-21, 14-21 ಅಂತರದಿಂದ ಸೋಲು ಅನುಭವಿಸಿದರು. ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿ ಶುಭಾರಂಭ ಕಂಡ ಕೇರಳದ ಆಟಗಾರ ಪ್ರಣಯ್ ನಂತರದ 2 ಪಂದ್ಯದಲ್ಲಿ ಹಿಡಿತ ಸಾಧಿಸುವಲ್ಲಿ ವಿಫಲರಾದರು.

ವಿಶ್ವ ನಂ.3 ಆಟಗಾರ ಕುನ್ಲವುಟ್​ ವಿಟಿಡ್​ಸರ್ನ್ ಇಂದು ನಡೆಯಲಿರುವ ಫೈನಲ್​ ಪಂದ್ಯದಲ್ಲಿ 4ನೇ ಶ್ರೇಯಾಂಕಿತ ಜಪಾನ್​ನ ಕೋಡೈ ನರಯೋಕಾ ಅಥವಾ ಆತಿಥೇಯ ಡೆನ್ಮಾರ್ಕ್​ನ ಆಂಡರ್ಸ್​ ಆಂಟೋನ್​ಸೆನ್​ ವಿರುದ್ಧ ಸೆಣಸಲಿದ್ದಾರೆ. ಪ್ರಣಯ್​ ಕ್ವಾರ್ಟರ್ ​ಫೈನಲ್​ನಲ್ಲಿ ವಿಶ್ವದ ಅಗ್ರಮಾನ್ಯ ಹಾಗೂ ಹಾಲಿ ಚಾಂಪಿಯನ್​ ವಿಕ್ಟರ್​ ಅಕ್ಸೆಲ್​ಸನ್ ಅವರಿ​ಗೆ ತವರು ಅಂಗಣದಲ್ಲಿಯೇ ಆಘಾತಕಾರಿ ಸೋಲುಣಿಸಿ ಪದಕ ಖಚಿತಪಡಿಸಿದ್ದರು.

ಇದು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ದೊರೆತ 14ನೇ ಪದಕ. ಇದರಲ್ಲಿ ಒಂದು ಚಿನ್ನ, ನಾಲ್ಕು ಬೆಳ್ಳಿ ಮತ್ತು ಒಂಬತ್ತು ಕಂಚಿನ ಪದಕಗಳು ಸೇರಿವೆ. 69 ಚಿನ್ನ, 48 ಬೆಳ್ಳಿ ಮತ್ತು 79 ಬೆಳ್ಳಿ ಸೇರಿದಂತೆ 196 ಪದಕಗಳೊಂದಿಗೆ ಚೀನಾ ಟೂರ್ನಿಯ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ತಂಡವಾಗಿ ಹೊರಹೊಮ್ಮಿದೆ.

ವಿಶ್ವ ಬ್ಯಾಡ್ಮಿಂಟನ್​ನಲ್ಲಿ ಭಾರತದ ಪದಕ ಸಾಧನೆ: ಪ್ರಕಾಶ್ ಪಡುಕೋಣೆ ಅವರು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ವೈಯಕ್ತಿಕ ಪದಕ ಗೆದ್ದ ಮೊದಲ ಭಾರತೀಯ. 1983ರಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಇವರು ಕಂಚು ಜಯಿಸಿದ್ದರು. 28 ವರ್ಷಗಳ ನಂತರ, ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ 2011ರ ಮಹಿಳಾ ಡಬಲ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಸಾಧನೆ ತೋರಿದ್ದರು.

2 ಬಾರಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ಅವರು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮಹಿಳಾ ಸಿಂಗಲ್ಸ್ ಪದಕ ಗೆದ್ದ ಮೊದಲ ಭಾರತೀಯ ಆಟಗಾರ್ತಿ. 2013 ಮತ್ತು 2014 ರಲ್ಲಿ ಕಂಚು, 2017 ಮತ್ತು 2018ರಲ್ಲಿ ಬೆಳ್ಳಿ ಮತ್ತು 2019ರಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಈವರೆಗಿನ 14 ಪದಕಗಳಲ್ಲಿ ಅತಿ ಹೆಚ್ಚು (5) ಪದಕ ಗೆದ್ದ ಸಾಧನೆ ಸಿಂಧು ಅವರದ್ದು.

ಭಾರತದ ಮತ್ತೋರ್ವ ಶಟ್ಲರ್ ಸೈನಾ ನೆಹ್ವಾಲ್, ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಎರಡು ಪದಕಗಳಿಗೆ (2015 ರಲ್ಲಿ ಬೆಳ್ಳಿ ಮತ್ತು 2017ರಲ್ಲಿ ಕಂಚು) ಮುತ್ತಿಕ್ಕಿದ್ದಾರೆ. 2019ರ ಚಾಂಪಿಯನ್‌ಶಿಪ್‌ನ ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ ಪ್ರಣೀತ್ ಕಂಚಿನ ಪದಕ ಗೆದ್ದರು. ವಿಶ್ವದ ಮಾಜಿ ನಂಬರ್ ಒನ್ ಆಟಗಾರ ಕಿಡಂಬಿ ಶ್ರೀಕಾಂತ್ 2021ರ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಬೆಳ್ಳಿ ಪದಕ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಲಕ್ಷ್ಯ ಸೇನ್ ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ ಕಂಚಿನ ಪದಕ ಸಾಧನೆ ಮಾಡಿದ್ದರು.

ಕಳೆದ ವರ್ಷ ಭಾರತದ ಪ್ರಸ್ತುತ ವಿಶ್ವದ ಎರಡನೇ ಶ್ರೇಯಾಂಕದ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಇತಿಹಾಸ ನಿರ್ಮಿಸಿದ್ದರು. ಕಂಚಿನ ಪದಕದೊಂದಿಗೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಪುರುಷರ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್ 2023 ಡೆನ್ಮಾರ್ಕ್‌ನ ಕೋಪೆನ್‌ ಹೇಗನ್‌ನಲ್ಲಿ ಆಗಸ್ಟ್ 21ರಿಂದ ಆರಂಭವಾಗಿದ್ದು, ಇಂದು ಮುಕ್ತಾಯವಾಗಲಿದೆ.

BWF ವಿಶ್ವ ಚಾಂಪಿಯನ್‌ಶಿಪ್‌ 2023- ಭಾರತೀಯ ಬ್ಯಾಡ್ಮಿಂಟನ್ ಆಟಗಾರರು:

  • ಪುರುಷರ ಸಿಂಗಲ್ಸ್: ಹೆಚ್​.ಎಸ್.ಪ್ರಣಯ್, ಲಕ್ಷ್ಯ ಸೇನ್, ಕಿದಂಬಿ ಶ್ರೀಕಾಂತ್
  • ಮಹಿಳೆಯರ ಸಿಂಗಲ್ಸ್: ಪಿ.ವಿ.ಸಿಂಧು
  • ಪುರುಷರ ಡಬಲ್ಸ್: ಚಿರಾಗ್ ಶೆಟ್ಟಿ-ರಾಂಕಿರೆಡ್ಡಿ, ಎಂ.ಆರ್.ಅರ್ಜುನ್-ಧ್ರುವ ಕಪಿಲ
  • ಮಹಿಳೆಯರ ಡಬಲ್ಸ್: ಟ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್, ಅಶ್ವಿನಿ ಭಟ್ ಕೆ-ಶಿಖಾ ಗೌತಮ್ (ಎಎನ್ಐ)

ಇದನ್ನೂ ಓದಿ: BWF World Championships 2023: ಸೆಮಿ ಫೈನಲ್‌ಗೆ ಪ್ರಣಯ್.. ಭಾರತಕ್ಕೆ ಪದಕ ಖಚಿತ

Last Updated : Aug 27, 2023, 9:50 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.