ETV Bharat / sports

ATP Ranking: ಜೊಕೊವಿಕ್​ಗೆ ಅಗಸ್ಥಾನ, 5 ರಲ್ಲಿ ನಡಾಲ್ ; 21 ವರ್ಷಗಳಲ್ಲೇ ಭಾರಿ ಕುಸಿತ ಕಂಡ ಫೆಡೆರರ್​ - ರೋಜರ್ ಫೆಡರರ್​ ಕುಸಿತ

​ವರ್ಷದ ಮೊದಲ ಗ್ರ್ಯಾಂಡ್​ಸ್ಲಾಮ್ ತಪ್ಪಿಸಿಕೊಂಡಿರುವ 40ವರ್ಷದ ಸ್ವಿಸ್​ ತಾರೆ ಸೋಮವಾರ ಬಿಡುಗಡೆಯಾಗಿರುವ ನೂತನ ಎಟಿಪಿ ಶ್ರೇಯಾಂಕ ಪಟ್ಟಿಯಲ್ಲಿ 13 ಸ್ಥಾನ ಕುಸಿದು 1665 ಅಂಕಗಳೊಂದಿಗೆ 30ನೇ ಸ್ಥಾನ ಪಡೆದುಕೊಂಡಿದ್ದಾರೆ.

ATP Rankings
ಎಟಿಪಿ ಶ್ರೇಯಾಂಕ
author img

By

Published : Jan 31, 2022, 8:33 PM IST

ಮೆಲ್ಬೋರ್ನ್​: 20 ಗ್ರ್ಯಾಂಡ್​ ಸ್ಲಾಮ್ ಚಾಂಪಿಯನ್​ ರೋಜರ್ ಫೆಡರರ್​ ಎಟಿಪಿ ಶ್ರೇಯಾಂಕ ಪಟ್ಟಿಯಲ್ಲಿ 21 ವರ್ಷಗಳಲ್ಲಿ ಅತ್ಯಂತ ಕಡಿಮೆ ಶ್ರೇಯಾಂಕಕ್ಕೆ ಕುಸಿದಿದ್ದಾರೆ. ಆದರೆ ಆಸ್ಟ್ರೇಲಿಯನ್ ಓಪನ್​ ಆಡದಿದ್ದರೂ ಸಹಾ ಸರ್ಬಿಯನ್ ಸ್ಟಾರ್ ಜೊಕೊವಿಕ್​ ಅಗ್ರಸ್ಥಾನ ದಲ್ಲಿ ಮುಂದುವರಿದಿದ್ದಾರೆ.

​ವರ್ಷದ ಮೊದಲ ಗ್ರ್ಯಾಂಡ್​ಸ್ಲಾಮ್ ತಪ್ಪಿಸಿಕೊಂಡಿರುವ 40ವರ್ಷದ ಸ್ವಿಸ್​ ತಾರೆ ಸೋಮವಾರ ಬಿಡುಗಡೆಯಾಗಿರುವ ನೂತನ ಎಟಿಪಿ ಶ್ರೇಯಾಂಕ ಪಟ್ಟಿಯಲ್ಲಿ 13 ಸ್ಥಾನ ಕುಸಿದು 1665 ಅಂಕಗಳೊಂದಿಗೆ 30ನೇ ಸ್ಥಾನ ಪಡೆದುಕೊಂಡಿದ್ದಾರೆ.

ಭಾನುವಾರ 2022ರ ಆಸ್ಟ್ರೇಲಿಯನ್ ಓಪನ್​ ಚಾಂಪಿಯನ್ ಆಗಿವ ಮೂಲಕ 21 ಗ್ರ್ಯಾಂಡ್​​​ ಸ್ಲಾಮ್​ ಗೆದ್ದ ವಿಶ್ವದಾಖಲೆಗೆ ಪಾತ್ರರಾಗಿರುವ ಸ್ಪೇನ್​ನ ರಾಫೆಲ್ ನಡಾಲ್ 5ನೇ ಶ್ರೇಯಾಂಕದಲ್ಲಿ ಮುಂದುವರಿದಿದ್ದಾರೆ.

ಮೊದಲ ಬಾರಿಗೆ ಆಸ್ಟ್ರೇಲಿಯನ್​ ಓಪನ್​ನಲ್ಲಿ ಸೆಮಿಫೈನಲ್​ ಪ್ರವೇಶಿಸಿದ ಇಟಲಿಯ ಮ್ಯಾಟಿಯೋ ಬೆರಿಟ್ಟಿನಿ ಅಗ್ರ 10ರೊಳಗೆ ಏರಿಕೆ ಕಂಡಿರುವ ಏಕೈಕ ಆಟಗಾರನಾಗಿದ್ದಾರೆ, ಅವರು ರಷ್ಯಾದ ಆ್ಯಂಡ್ರೆ ರುಬ್ಲೆವ್​ರನ್ನು ಹಿಂದಿಕ್ಕಿ 6ನೇ ಸ್ಥಾನ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:ಫೆಡರರ್, ಜೊಕೊವಿಕ್ ದಾಖಲೆ ಮುರಿದ ರಾಫೆಲ್​​: 21ನೇ ಗ್ರ್ಯಾಂಡ್ ಸ್ಲ್ಯಾಮ್​ಗೆ ಮುತ್ತಿಕ್ಕಿದ ನಡಾಲ್

ಮಹಿಳೆಯರ ಶ್ರೇಯಾಂಕದಲ್ಲಿ ಆಸ್ಟ್ರೇಲಿಯನ್ ಓಪನ್​ ಗೆದ್ದ ಆಸ್ಟ್ರೇಲಿಯಾದ ಆ್ಯಶ್ಲೇ ಬಾರ್ಟಿ ವಿಶ್ವದ ನಂಬರ್ 1 ಆಟಗಾರ್ತಿಯಾಗಿ ಮುಂದುವರಿದರೆ, ಬೆಲಾರಸಿಯನ್​ ಅರಿನಾ ಸಬೆಲೆಂಕಾ 2ನೇ ಸ್ಥಾನ ಉಳಿಸಿಕೊಂಡಿದ್ದಾರೆ.

ಕ್ವಾರ್ಟರ್ ಫೈನಲ್​ ಪ್ರವೇಶಿಸಿದ್ದ ಫ್ರೆಂಚ್ ಓಪನ್ ಚಾಂಪಿಯನ್​ ಕ್ರೆಜಿಕೋವಾ 4ರಿಂದ 3ನೇ ಸ್ಥಾನಕ್ಕೆ ಬಡ್ತಿ ಪಡೆದರೆ, ಮೊದಲ ಬಾರಿಗೆ ಸೆಮಿಫೈನಲ್ ತಲುಪಿದ್ದ ಪೊಲೆಂಡ್​ನ ಇಗಾ ಸ್ವಿಯಾಟೆಕ್​ ಒಂದು ಸ್ಥಾನ ಮೇಲೇರಿ 4 ಸ್ಥಾನಕ್ಕೇರಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.