ETV Bharat / sports

ಏಷ್ಯನ್ ಜೂನಿಯರ್​ ಬಾಕ್ಸಿಂಗ್​ನಲ್ಲಿ ಭಾರತಕ್ಕೆ 8 ಚಿನ್ನದ ಪದಕ

ಭಾನುವಾರ ನಡೆದ ಫೈನಲ್ಸ್​ನಲ್ಲಿ ಭಾರತದ 13 ಜೂನಿಯರ್​(ಬಾಲಕ ಮತ್ತು ಬಾಲಕಿ) ಬಾಕ್ಸರ್​ಗಳು ಕಾದಾಡಿದ್ದರು. ಇದರಲ್ಲಿ 8 ಮಂದಿ ಚಿನ್ನ ಗೆದ್ದರೆ ಐವರು ಬಾಕ್ಸರ್​ಗಳು ಬೆಳ್ಳಿ ಗೆದ್ದರು. ಇದಕ್ಕೂ ಮೊದಲೇ 6 ಮಂದಿ ಬಾಕ್ಸರ್​ಗಳು ಸೆಮಿಫೈನಲ್​ನಲ್ಲಿ ಸೋತು ಕಂಚಿಗೆ ಮುತ್ತಿಕ್ಕಿದ್ರು.

Asian Junior Boxing Championship
ಏಷ್ಯನ್ ಜೂನಿಯರ್​ ಬಾಕ್ಸಿಂಗ್
author img

By

Published : Aug 30, 2021, 6:02 PM IST

ದುಬೈ: ಭಾರತದ ಜೂನಿಯರ್ ಬಾಕ್ಸರ್​ಗಳು ದುಬೈನಲ್ಲಿ ನಡೆಯುತ್ತಿರುವ ಏಷ್ಯನ್ ಜೂನಿಯರ್​ ಮತ್ತು ಯೂತ್​ ಬಾಕ್ಸಿಂಗ್ ಚಾಂಪಿಯನ್​ಶಿಪ್​ನಲ್ಲಿ 8 ಚಿನ್ನ ಸಹಿತ ಒಟ್ಟು ದಾಖಲೆಯ 21 ಪದಗಳನ್ನು ಪಡೆದಿದ್ದಾರೆ.

ಭಾನುವಾರ ನಡೆದ ಫೈನಲ್ಸ್​ನಲ್ಲಿ ಭಾರತದ 13 ಜೂನಿಯರ್​( ಬಾಲಕ ಮತ್ತು ಬಾಲಕಿ) ಬಾಕ್ಸರ್​ಗಳು ಕಾದಾಡಿದ್ದರು. ಇದರಲ್ಲಿ 8 ಮಂದಿ ಚಿನ್ನ ಗೆದ್ದರೆ, ಐವರು ಬಾಕ್ಸರ್​ಗಳು ಬೆಳ್ಳಿ ಗೆದ್ದರು. ಇದಕ್ಕೂ ಮೊದಲೇ 6 ಬಾಕ್ಸರ್​ಗಳು ಸೆಮಿಫೈನಲ್​ನಲ್ಲಿ ಸೋತು ಕಂಚು ಪಡೆದರು.

ಬಾಲಕರ ಫೈನಲ್ಸ್​ನಲ್ಲಿ ಒಟ್ಟು 3 ಮಂದಿ ಸ್ಪರ್ಧಿಸಿದರೆ 10 ಬಾಲಕಿಯರು ಫೈನಲ್​ನಲ್ಲಿ ಕಾದಾಡಿದ್ದರು. ಬಾಲಕರ ವಿಭಾಗದಲ್ಲಿ ರೋಹಿತ್ ಚಮೋಲಿ(48 ಕೆಜಿ), ಭರತ್​ ಜೂನ್​(81+ಕೆಜಿ) ಚಿನ್ನ ಗೆದ್ದರೆ, ಗೌರವ್​ ಸೈನಿ(70ಕೆಜಿ) ಬೆಳ್ಳಿಗೆ ತೃಪ್ತಿಪಟ್ಟುಕೊಂಡರು.

ಜೂನಿಯರ್​ ಬಾಲಕಿಯರ ವಿಭಾಗದಲ್ಲಿ ವಿಶು ರಥಿ(48ಕೆಜಿ), ತನು(52ಕೆಜಿ), ನಿಕಿತಾ ಚಾಂದ್​(60ಕೆಜಿ),ಮಹಿ ರಾಘವ್​(63ಕೆಜಿ), ಪ್ರಂಜಾಲ್ ಯಾದವ್​(75ಕೆಜಿ) ಮತ್ತು ಕೀರ್ತಿ(81+ಕೆಜಿ) ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು. ಸಂಜನಾ(81ಕೆಜಿ)​ ರುದ್ರಿಕಾ(70 ಕೆಜಿ) ಮುಸ್ಕಾನ್(46ಕೆಜಿ)​ ಮತ್ತು ಆಂಚಲ್ ಸೈನಿ(57ಕೆಜಿ) ಫೈನಲ್​ನಲ್ಲಿ ಸೋಲು ಕಂಡು ಬೆಳ್ಳಿಗೆ ಕೊರೊಳೊಡ್ಡಿದರು.

ಒಟ್ಟಾರೆ ಭಾರತ ಬಾಲಕರ ವಿಭಾಗದಲ್ಲಿ 2 ಚಿನ್ನ, 1 ಬೆಳ್ಳಿ ಮತ್ತು 3 ಕಂಚು ಗೆದ್ದರೆ, ಬಾಲಕಿಯರ ವಿಭಾಗದಲ್ಲಿ 6 ಚಿನ್ನ, 4 ಬೆಳ್ಳಿ ಮತ್ತು 3 ಕಂಚು ಗೆದ್ದರು. ಒಟ್ಟು 19 ಪದಕ ತಮ್ಮದಾಗಿಸಿಕೊಂಡರು. 63 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದ ಮಹಿ ರಾಘವ್​ ಬಾಲಕಿಯರ ವಿಭಾಗದಲ್ಲಿ ಅತ್ಯುತ್ತಮ ಬಾಕ್ಸರ್ ಗೌರವಕ್ಕೆ ಪಾತ್ರರಾದರು.

ಇದನ್ನು ಓದಿ:ಪ್ಯಾರಾಲಿಂಪಿಕ್ಸ್ ಭಾರತಕ್ಕೆ 2ನೇ ಚಿನ್ನ : F64 ಜಾವಲಿನ್ ಥೋನಲ್ಲಿ ಬಂಗಾರ ಗೆದ್ದ ಸುಮಿತ್ ಆಂಟಿಲ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.